Shiva Rajkumar: ಶಿವಣ್ಣ ಹೃದಯವಂತಿಕೆಗಿಲ್ಲ ಸರಿಸಾಟಿ; ಮಕ್ಕಳೊಂದಿಗೆ ಖೋ ಖೋ ಆಡುತ್ತಿರುವ ಅಪರೂಪದ ವಿಡಿಯೋ ಇಲ್ಲಿದೆ

Shivanna: ಶಿವರಾಜ್​ಕುಮಾರ್ ಅವರ ವ್ಯಕ್ತಿತ್ವಕ್ಕೆ ಮಾರುಹೋಗದವರಿಲ್ಲ. ಇತ್ತೀಚೆಗೆ ಅವರ ಅಪರೂಪದ ವಿಡಿಯೋವೊಂದು ವೈರಲ್ ಆಗಿದೆ. ಏನದರ ವಿಶೇಷ? ಮುಂದೆ ಓದಿ.

Shiva Rajkumar: ಶಿವಣ್ಣ ಹೃದಯವಂತಿಕೆಗಿಲ್ಲ ಸರಿಸಾಟಿ; ಮಕ್ಕಳೊಂದಿಗೆ ಖೋ ಖೋ ಆಡುತ್ತಿರುವ ಅಪರೂಪದ ವಿಡಿಯೋ ಇಲ್ಲಿದೆ
ಮಕ್ಕಳೊಂದಿಗೆ ಆಟದಲ್ಲಿ ತಲ್ಲೀನರಾಗಿರುವ ಶಿವಣ್ಣ
Follow us
TV9 Web
| Updated By: shivaprasad.hs

Updated on: Dec 28, 2021 | 11:11 AM

ಚಂದನವನದ (Sandalwood) ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva Rajkumar) ಅವರದ್ದು ನಿಷ್ಕಲ್ಮಶ ಮನಸ್ಸಿನ ವ್ಯಕ್ತಿತ್ವ. ಇದೇ ಕಾರಣಕ್ಕೆ ಇಡೀ ಕರುನಾಡು ಅವರ ಅಭಿಮಾನಿ. ಜತೆಗೆ ಬಹಳಷ್ಟು ಜನರಿಗೆ ಶಿವರಾಜ್​ಕುಮಾರ್ ಆದರ್ಶವೂ ಹೌದು ಮತ್ತು ಅವರಿಗಿರುವ ಅಭಿಮಾನಿ ಬಳಗವೂ ದೊಡ್ಡದು. ಆದರೆ ಶಿವಣ್ಣ ಒಮ್ಮೆಯೂ ಸ್ಟಾರ್ ಎಂಬುದನ್ನು ಎಲ್ಲರೆದುರು ತೋರಿಸಿಕೊಂಡಿಲ್ಲ. ಸಾಧ್ಯವಾದಷ್ಟು ಜನರ ನಡುವೆ ಬೆರೆತು, ಅವರೊಡನೆ ಒಂದಾಗುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಇತ್ತೀಚಿಗೆ ವಿಡಿಯೋವೊಂದು ವೈರಲ್ ಆಗಿದೆ. ಹೌದು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ನಲಿಯುತ್ತಿರುವ ಶಿವರಾಜ್‌ಕುಮಾರ್ ಅವರ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದನ್ನು‌ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

ವಿಡಿಯೋದಲ್ಲಿ ಶಿವರಾಜ್​ಕುಮಾರ್ ಮಕ್ಕಳೊಂದಿಗೆ ಖೋ ಖೋ ಆಟದಲ್ಲಿ ನಿರತರಾಗಿರುವುದನ್ನು ಕಾಣಬಹುದು. ಸ್ಟಾರ್ ನಟ ತಮ್ಮೊಂದಿಗೆ ಆಟವಾಡುತ್ತಿರುವುದಕ್ಕೆ ಸಖತ್ ಖುಷಿಯಾಗಿರುವ ಮಕ್ಕಳು ಉತ್ಸಾಹದಿಂದ ಆಟದಲ್ಲಿ ತೊಡಗಿಕೊಂಡಿದ್ದಾರೆ. ಸುತ್ತ ನೆರೆದಿರುವವರೂ ಕೂಡ ಸಂಭ್ರಮದಿಂದ ಪ್ರೋತ್ಸಾಹಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ವಿಡಿಯೋ ನೋಡಿದ ಅಭಿಮಾನಿಗಳು ಶಿವರಾಜ್​ಕುಮಾರ್ ಅವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದಾರೆ.

ಶಿವರಾಜ್​ಕುಮಾರ್ ಖೋ ಖೋ ಆಡುತ್ತಿರುವ ವೈರಲ್ ವಿಡಿಯೋ ಇಲ್ಲಿದೆ:

ಜೀ5ನಲ್ಲಿ ಪ್ರದರ್ಶನ ಕಾಣುತ್ತಿದೆ ‘ಭಜರಂಗಿ 2’: ಚಿತ್ರಗಳ ವಿಷಯಕ್ಕೆ ಬಂದರೆ ಶಿವರಾಜ್​ಕುಮಾರ್ ನಟನೆಯ ‘ಭಜರಂಗಿ 2’ ಜೀ5 ಒಟಿಟಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಎ ಹರ್ಷ ನಿರ್ದೇಶನದ ಈ ಚಿತ್ರ ಅಕ್ಟೋಬರ್ 29ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ನಾಯಕಿಯಾಗಿ ಭಾವನಾ ಮೆನನ್​ ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಶ್ರುತಿ, ಶಿವರಾಜ್​ ಕೆ.ಆರ್​. ಪೇಟೆ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಈ ಸಿನಿಮಾಗೆ ಖ್ಯಾತ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

‘ಭಜರಂಗಿ 2’ ಚಿತ್ರವನ್ನು ಪುನೀತ್​ ರಾಜ್​ಕುಮಾರ್​ಗೆ ಅರ್ಪಿಸಿದ ಶಿವರಾಜ್​ಕುಮಾರ್​

Year Ender 2021: ಈ ವರ್ಷ ಮದುವೆ ಆದ ಸ್ಯಾಂಡಲ್​ವುಡ್​ ಜೋಡಿಗಳ ಬಗ್ಗೆ ಇಲ್ಲಿದೆ ಮಾಹಿತಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ