‘ಭಜರಂಗಿ 2’ ಚಿತ್ರವನ್ನು ಪುನೀತ್​ ರಾಜ್​ಕುಮಾರ್​ಗೆ ಅರ್ಪಿಸಿದ ಶಿವರಾಜ್​ಕುಮಾರ್​

ಕೊವಿಡ್​ ನಂತರದ ಪರಿಸ್ಥಿತಿಯಲ್ಲಿ ಓಟಿಟಿಗಳ ಕಡೆಗೆ ಜನರ ಆಸಕ್ತಿ ಹೆಚ್ಚಿದೆ. ಈಗ ಶಿವರಾಜ್​ಕುಮಾರ್ ನಟನೆಯ ‘ಭಜರಂಗಿ 2’ ಸಿನಿಮಾ ಕೂಡ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ವೀಕ್ಷಣೆಗೆ ಲಭ್ಯವಾಗುತ್ತಿದೆ.

‘ಭಜರಂಗಿ 2’ ಚಿತ್ರವನ್ನು ಪುನೀತ್​ ರಾಜ್​ಕುಮಾರ್​ಗೆ ಅರ್ಪಿಸಿದ ಶಿವರಾಜ್​ಕುಮಾರ್​
ಶಿವಣ್ಣ-ಪುನೀತ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 21, 2021 | 3:23 PM

ನಟ ಶಿವರಾಜ್​ಕುಮಾರ್​ ಮತ್ತು ನಿರ್ದೇಶಕ ಹರ್ಷ ಕಾಂಬಿನೇಷನ್​ನಲ್ಲಿ ಮೂಡಿ ಬಂದ ‘ಭಜರಂಗಿ 2’ ಸಿನಿಮಾ ಮೆಚ್ಚುಗೆ ಪಡೆದುಕೊಂಡಿತ್ತು. ಫ್ಯಾಮಿಲಿ ಆಡಿಯನ್ಸ್​ಗೆ ಈ ಸಿನಿಮಾ ಇಷ್ಟವಾಗಿತ್ತು. ಈಗ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆಗುತ್ತಿದೆ. ಈ ಚಿತ್ರವನ್ನು ಶಿವರಾಜ್​ಕುಮಾರ್​ ಅವರು ಪುನೀತ್​ಗೆ ಅರ್ಪಿಸಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಶಿವರಾಜ್​ಕುಮಾರ್​, ‘ನನ್ನ ನಟನೆಯ ‘ಭಜರಂಗಿ 2’ ಸಿನಿಮಾ ಜೀ5ನಲ್ಲಿ ರಿಲೀಸ್​ ಆಗುತ್ತಿದೆ. ನಾನು ಹಾಗೂ ನನ್ನ ತಂಡ ಈ ಸಿನಿಮಾವನ್ನು ಅಪ್ಪುಗೆ ಡೆಡಿಕೇಟ್​ ಮಾಡುತ್ತೇವೆ. ಇದು ಅಪ್ಪು ಎಡಿಟಿಂಗ್​ ರೂಮ್​​ನಲ್ಲೇ ಎಡಿಟ್​ ಮಾಡಿದ ಚಿತ್ರ. ಸಾಕಷ್ಟು ಬಾರಿ ಅವನು ಸಿನಿಮಾದ ದೃಶ್ಯ ನೋಡಿ ಮೆಚ್ಚುಗೆಯ ಮಾತನಾಡಿದ್ದ. ಪ್ರೀ ರಿಲೀಸಿಂಗ್​ ಇವೆಂಟ್​ಗೂ ಅಪ್ಪು ಬಂದು ಬೆಂಬಲಿಸಿದ್ದರು. ಡ್ಯಾನ್ಸ್​ ಮಾಡಿದ್ದರು. ರಿಲೀಸ್​ ಆದ ದಿನವೂ ಬೆಳಗ್ಗೆ ಟ್ವೀಟ್​ ಮಾಡಿ ಶುಭಕೋರಿದ್ದರು. ಸಿನಿಮಾದ ಸಾಕಷ್ಟು ದೃಶ್ಯಗಳು ಅಪ್ಪು ಅವರನ್ನು ನೆನಪಿಸುತ್ತವೆ’ ಎಂದು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ.

ಕೊವಿಡ್​ ನಂತರದ ಪರಿಸ್ಥಿತಿಯಲ್ಲಿ ಓಟಿಟಿಗಳ ಕಡೆಗೆ ಜನರ ಆಸಕ್ತಿ ಹೆಚ್ಚಿದೆ. ಈಗ ಶಿವರಾಜ್​ಕುಮಾರ್ ನಟನೆಯ ‘ಭಜರಂಗಿ 2’ ಸಿನಿಮಾ ಕೂಡ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ವೀಕ್ಷಣೆಗೆ ಲಭ್ಯವಾಗುತ್ತಿದೆ. ಎ. ಹರ್ಷ ನಿರ್ದೇಶನದ ಈ ಸಿನಿಮಾ ಬಿಗ್​ ಬಜೆಟ್​ನಲ್ಲಿ ಮೂಡಿಬಂದಿದೆ. ಅ.29ರಂದು ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ‘ಭಜರಂಗಿ 2’ ಬಿಡುಗಡೆ ಆಗಿತ್ತು. ಥಿಯೇಟರ್​ನಲ್ಲಿ ಈ ಚಿತ್ರವನ್ನು ಮಿಸ್​ ಮಾಡಿಕೊಂಡವರು ‘ಜೀ 5’ (Zee5, ) ಮೂಲಕ ಮನೆಯಲ್ಲೇ ಕುಳಿತು ನೋಡಬಹುದು.

ಓಟಿಟಿ ಮೂಲಕ ಸಿನಿಮಾ ವೀಕ್ಷಿಸುವವರ ಸಂಖ್ಯೆ ಹೆಚ್ಚಿದೆ. ಅಂಥವರಿಗಾಗಿ ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಚಿತ್ರ ಭರ್ಜರಿ ಮನರಂಜನೆ ನೀಡಲಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಭಾವನಾ ಮೆನನ್​ ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಶ್ರುತಿ, ಶಿವರಾಜ್​ ಕೆ.ಆರ್​. ಪೇಟೆ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಡಿ.23ರಿಂದ ‘ಜೀ 5’ ಆ್ಯಪ್​ ಮೂಲಕ ‘ಭಜರಂಗಿ 2’ ಚಿತ್ರ ಬಿತ್ತರ ಆಗಲಿದೆ. ಈ ಸಿನಿಮಾಗೆ ಖ್ಯಾತ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಅಮೇಜಾನ್​ ಪ್ರೈಮ್​ನಲ್ಲಿ ಪಿಆರ್​ಕೆ ವಾರ; ಒಂದು ತಿಂಗಳಲ್ಲಿ ಅಪ್ಪು ನಿರ್ಮಾಣದ ಮೂರು ಹೊಸ ಸಿನಿಮಾ ರಿಲೀಸ್​?

 ಇನ್ನೂ ಬಾಕಿ ಇದೆ ಪುನೀತ್​ ಕನಸಿನ ‘ಗಂಧದ ಗುಡಿ’ ಶೂಟಿಂಗ್​; ಪೂರ್ಣಗೊಳಿಸೋರು ಯಾರು?

Published On - 2:12 pm, Tue, 21 December 21

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ