ಅಮೇಜಾನ್​ ಪ್ರೈಮ್​ನಲ್ಲಿ ಪಿಆರ್​ಕೆ ವಾರ; ಒಂದು ತಿಂಗಳಲ್ಲಿ ಅಪ್ಪು ನಿರ್ಮಾಣದ ಮೂರು ಹೊಸ ಸಿನಿಮಾ ರಿಲೀಸ್​?

ಅಮೇಜಾನ್​ ಪ್ರೈಮ್​ನಲ್ಲಿ ಪಿಆರ್​ಕೆ ವಾರ; ಒಂದು ತಿಂಗಳಲ್ಲಿ ಅಪ್ಪು ನಿರ್ಮಾಣದ ಮೂರು ಹೊಸ ಸಿನಿಮಾ ರಿಲೀಸ್​?
ಪುನೀತ್​ ರಾಜ್​ಕುಮಾರ್

ಪುನೀತ್​ ರಾಜ್​ಕುಮಾರ್​ ಅವರು ಅಕ್ಟೋಬರ್​ 29ರಂದು ನಿಧನ ಹೊಂದಿದ್ದರು. ಅವರ ಅಕಾಲಿಕ ಮರಣ ಸಾಕಷ್ಟು ಜನರಿಗೆ ಶಾಕ್​ ನೀಡಿದೆ. ಅವರು ಸಾಕಷ್ಟು ಸಿನಿಮಾ ಕೆಲಸಗಳನ್ನು ಅರ್ಧಕ್ಕೆ ತೊರೆದು ಹೋಗಿದ್ದಾರೆ.

TV9kannada Web Team

| Edited By: Rajesh Duggumane

Dec 21, 2021 | 9:39 PM

ಪುನೀತ್​ ರಾಜ್​ಕುಮಾರ್​ (Puneeth Rajkumar) ನಟನೆ ಜತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. ಪಿಆರ್​ಕೆ ಸಂಸ್ಥೆ (PRK Production) ಸ್ಥಾಪಿಸಿ ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಈಗ ಮೂರು ಚಿತ್ರದ ಕೆಲಸಗಳು ಪ್ರಗತಿಯಲ್ಲಿವೆ. ಈ ಮೂರು ಚಿತ್ರಗಳು ಈಗ ಅಮೇಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗುತ್ತಿವೆ. ವಾರಕ್ಕೆ ಒಂದರಂತೆ ಮೂರು ಚಿತ್ರಗಳು ಪ್ರೀಮಿಯರ್​ ಆಗುತ್ತಿವೆ ಅನ್ನೋದು ವಿಶೇಷ. ಇದಕ್ಕೆ ‘ಪಿಆರ್​ಕೆ’ ವಾರ (PRK Week) ಎಂದು ಹೆಸರಿಡಲಾಗಿದ್ದು, ಪುನೀತ್​ಗೆ ವಿಶೇಷ ನಮನ ಸಲ್ಲಿಸುವ ದೃಷ್ಟಿಯಿಂದ ಈ ರೀತಿ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ. ಹಾಗಾದರೆ, ಯಾವಾಗ ಸಿನಿಮಾ ರಿಲೀಸ್​? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಪುನೀತ್​ ರಾಜ್​ಕುಮಾರ್​ ಅವರು ಅಕ್ಟೋಬರ್​ 29ರಂದು ನಿಧನ ಹೊಂದಿದ್ದರು. ಅವರ ಅಕಾಲಿಕ ಮರಣ ಸಾಕಷ್ಟು ಜನರಿಗೆ ಶಾಕ್​ ನೀಡಿದೆ. ಅವರು ಸಾಕಷ್ಟು ಸಿನಿಮಾ ಕೆಲಸಗಳನ್ನು ಅರ್ಧಕ್ಕೆ ತೊರೆದು ಹೋಗಿದ್ದಾರೆ. ‘ಜೇಮ್ಸ್​’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಈ ಚಿತ್ರ ಮುಂದಿನ ವರ್ಷ ಬಿಡುಗಡೆ ಆಗಲಿದೆ. ‘ಲಕ್ಕಿ ಮ್ಯಾನ್​’ ಸಿನಿಮಾದಲ್ಲಿ ಅಪ್ಪು ಅತಿಥಿ ಪಾತ್ರ ಮಾಡಿದ್ದಾರೆ. ಪಿಆರ್​ಕೆ ನಿರ್ಮಾಣದ ‘ಗಂಧದ ಗುಡಿ’ ಡಾಕ್ಯುಮೆಂಟರಿ ಚಿತ್ರಮಂದಿರದಲ್ಲೇ ರಿಲೀಸ್ ಆಗುತ್ತಿದೆ. ಇದರ ಜತೆಗೆ ಅವರ ನಿರ್ಮಾಣದ ಮೂರು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್​ ಆಗುತ್ತಿದೆ ಎನ್ನಲಾಗಿದೆ.

ಸದ್ಯ, ಪಿಆರ್​ಕೆ ಪ್ರೊಡಕ್ಷನ್​ ‘ಫ್ಯಾಮಿಲಿ ಪ್ಯಾಕ್​’, ‘ಮ್ಯಾನ್​ ಆಫ್​ ದಿ ಮ್ಯಾಚ್​’, ‘ಒನ್​ ಕಟ್​ ಟೂ ಕಟ್’ ಸಿನಿಮಾಗಳು ನಿರ್ಮಾಣ ಮಾಡುತ್ತಿದೆ. ಅರ್ಜುನ್​ ಕುಮಾರ್​ ಅವರು ‘ಫ್ಯಾಮಿಲಿ ಪ್ಯಾಕ್​’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಮ್ಯಾನ್​ ಆಫ್​ ದಿ ಮ್ಯಾಚ್​’ಗೆ ‘ರಾಮಾ ರಾಮಾ ರೇ’ ಖ್ಯಾತಿ ಡಿ. ಸತ್ಯ ಪ್ರಕಾಶ್​ ನಿರ್ದೇಶನವಿದೆ. ‘ಒನ್​ ಕಟ್​ ಟೂ ಕಟ್’ ಚಿತ್ರದಲ್ಲಿ ದ್ಯಾನಿಶ್​ ಸೇಠ್​ ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ ಜನವರಿ 21, ಜನವರಿ 28 ಹಾಗೂ ಫೆಬ್ರವರಿ 4ರಂದು ಈ ಸಿನಿಮಾ ರಿಲೀಸ್​ ಆಗುತ್ತಿದೆ ಎನ್ನಲಾಗಿದೆ.

ಈ ಮೊದಲು ಪಿಆರ್​ಕೆ ಅಡಿಯಲ್ಲಿ ಸಿದ್ಧವಾದ ‘ಕವಲುದಾರಿ’, ‘ಮಾಯಾಬಜಾರ್​ 2016’, ‘ಲಾ’ ಹಾಗೂ ‘ಫ್ರೆಂಚ್​ ಬಿರಿಯಾನಿ’ ಸಿನಿಮಾಗಳು ಅಮೇಜಾನ್​ ಪ್ರೈಮ್​ ಸಿನಿಮಾದಲ್ಲೇ ರಿಲೀಸ್​ ಆಗಿತ್ತು. ಈಗ ಅವರ ಮುಂದಿನ ಮೂರು ಚಿತ್ರಗಳಿಗೆ ಅಮೇಜಾನ್​ ಪ್ರೈಮ್​ ವೇದಿಕೆ ಆಗಿದೆ.

ಇದನ್ನೂ ಓದಿ:  ಇನ್ನೂ ಬಾಕಿ ಇದೆ ಪುನೀತ್​ ಕನಸಿನ ‘ಗಂಧದ ಗುಡಿ’ ಶೂಟಿಂಗ್​; ಪೂರ್ಣಗೊಳಿಸೋರು ಯಾರು?

ಜೀ ಕನ್ನಡದಲ್ಲಿ ‘ಕರುನಾಡ ರತ್ನ’ ಕಾರ್ಯಕ್ರಮ; ಪುನೀತ್​ ರಾಜ್​ಕುಮಾರ್​ಗೆ ವಿಶೇಷ ನಮನ

Follow us on

Related Stories

Most Read Stories

Click on your DTH Provider to Add TV9 Kannada