R Madhavan: ನೆಟ್​​ಫ್ಲಿಕ್ಸ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಮಾಧವನ್ ನಟನೆಯ ವೆಬ್ ಸೀರೀಸ್; ಏನಿದು ಸಮಾಚಾರ?

Decoupled Series: ಆರ್ ಮಾಧಬವನ್ ಹಾಗೂ ಸುರ್ವೀನ್ ಚಾವ್ಲಾ ಕಾಣಿಸಿಕೊಂಡಿರುವ ನೆಟ್​ಫ್ಲಿಕ್ಸ್ ಸರಣಿ ‘ಡಿಕಪಲ್ಡ್’ ವೀಕ್ಷಕರಿಂದ, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದೀಗ ಈ ಸರಣಿ ಹೊಸ ದಾಖಲೆಯನ್ನು ಬರೆದಿದೆ.

R Madhavan: ನೆಟ್​​ಫ್ಲಿಕ್ಸ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಮಾಧವನ್ ನಟನೆಯ ವೆಬ್ ಸೀರೀಸ್; ಏನಿದು ಸಮಾಚಾರ?
‘ಡಿಕಪಲ್ಡ್’ ಚಿತ್ರದಲ್ಲಿ ಆರ್ ಮಾಧವನ್ ಹಾಗೂ ಸುರ್ವೀನ್ ಚಾವ್ಲಾ
Follow us
TV9 Web
| Updated By: shivaprasad.hs

Updated on: Dec 22, 2021 | 8:21 AM

ಆರ್.ಮಾಧವನ್ (R Madhavan) ಮತ್ತು ಸುರ್ವೀನ್ ಚಾವ್ಲಾ (Surveen Chawla) ಕಾಣಿಸಿಕೊಂಡಿರುವ ‘ಡಿಕಪಲ್ಡ್’ (Decoupled) ಸೀರೀಸ್ ಇತ್ತೀಚೆಗೆ ನೆಟ್​ಫ್ಲಿಕ್ಸ್​ನಲ್ಲಿ (Netflix) ಬಿಡುಗಡೆಯಾಗಿದೆ. ಈ ಸೀರೀಸ್​​ನಲ್ಲಿ ಈರ್ವರೂ ದಂಪತಿಗಳಾಗಿ ಕಾಣಿಸಿಕೊಂಡಿದ್ದಾರೆ. ವಿಚ್ಛೇದನಕ್ಕೂ ಮುನ್ನ ತಮ್ಮ ಮಗಳ ನಡುವೆ ಸಮಯವನ್ನು ಕಳೆಯುವ ಕತೆಯನ್ನು ಸೀರೀಸ್ ಒಳಗೊಂಡಿದೆ. ಸದ್ಯ ಈ ಸರಣಿಯನ್ನು ವೀಕ್ಷಕರು ಇಷ್ಟಪಟ್ಟಿದ್ದು, ಹಲವು ದಾಖಲೆಗಳನ್ನು ಬರೆದಿದೆ. ಸ್ವತಃ ಮಾಧವನ್ ಟ್ವೀಟ್ ಮೂಲಕ ಸಂತಸವನ್ನು ಹಂಚಿಕೊಂಡಿದ್ದು, ‘ಡಿಕಪಲ್ಡ್’ ಹೊಸ ಮೈಲಿಗಲ್ಲನ್ನು ಸೃಷ್ಟಿಸಲು ಕಾರಣರಾದವರಿಗೆ ಧನ್ಯವಾದ ಹೇಳಿದ್ದಾರೆ. ಸದ್ಯ ‘ಡಿಕಪಲ್ಡ್’ ಸರಣಿಯು ಟ್ರೆಂಡಿಂಗ್​ನಲ್ಲಿ ಎರಡನೇ ಸ್ಥಾನದಲ್ಲಿದೆ. ಅಲ್ಲದೇ ಅತ್ಯಂತ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಭಾರತೀಯ ಸರಣಿ ಎಂಬ ಖ್ಯಾತಿಯನ್ನೂ ಪಡೆದಿದೆ. ಇದನ್ನು ಕೇವಲ 72 ಗಂಟೆಯಲ್ಲಿ ಸಾಧಿಸಿದ್ದು ಈ ಸರಣಿಯ ಹೆಚ್ಚುಗಾರಿಕೆಯಾಗಿದೆ. ಈ ಕುರಿತು ಮಾಧವನ್ ಬರೆದುಕೊಂಡಿದ್ದಾರೆ.

ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಮಾಧವನ್ ಅದಕ್ಕೆ ನೆಟ್​​ಫ್ಲಿಕ್ಸ್​​ನಲ್ಲಿ ಟಾಪ್ ಟ್ರೆಂಡಿಂಗ್​ನಲ್ಲಿರುವ ಸರಣಿಗಳ ಚಿತ್ರವನ್ನು ಲಗತ್ತಿಸಿದ್ದಾರೆ. ಅದರಲ್ಲಿ ಡಿಕಪಲ್ಡ್ ಎರಡನೇ ಸ್ಥಾನದಲ್ಲಿದೆ. ‘‘ದೇವರು ಹಾಗೂ ಎಲ್ಲಾ ಹಿರಿಯರ ಆಶೀರ್ವಾದ ಮತ್ತು ಜನರ ಪ್ರೀತಿಯಿಂದ ‘ಡಿಕಪಲ್ಡ್’ ಸರಣಿಯು ಕೇವಲ 72 ಗಂಟೆಗಳ ಅವಧಿಯಲ್ಲಿ ಭಾರತದ ನಂಬರ್ 1 ನೆಟ್​​ಫ್ಲಿಕ್ಸ್ ಸರಣಿಯಾಗಿದೆ. ಇದರಿಂದ ಭಾವುಕನಾಗಿದ್ದಾನೆ ಮತ್ತು ವಿನಮ್ರನಾಗಿದ್ದೇನೆ’’ ಎಂದು ಅವರು ಬರೆದಿದ್ದಾರೆ.

ಮಾಧವನ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ಮಾಧವನ್ ಚಿತ್ರದಲ್ಲಿ ಪತ್ನಿಯಿಂದ ವಿಚ್ಛೇದನ ಪಡೆಯುತ್ತಿರುವ ‘ಪಲ್ಪ್ ಫಿಕ್ಷನ್’ ಬರಹಗಾರನ ಪಾತ್ರವನ್ನು ನಿರ್ವಹಿಸಿದ್ದಾರೆ. ಕಾಮಿಡಿ- ಡ್ರಾಮಾ ಸರಣಿ ಇದಾಗಿದ್ದು, ಮನು ಜೋಸೆಫ್ ರಚಿಸಿ, ಹಾರ್ದಿಕ್ ಮೆಹ್ತಾ ನಿರ್ದೇಶಿಸಿದ್ದಾರೆ. ಲೇಖಕ ಚೇತನ್ ಭಗತ್ ಈ ಸೀರೀಸ್​ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಸರಣಿಯನ್ನು ಒಪ್ಪಿಕೊಂಡಿದ್ದರ ಕುರಿತು ಈ ಹಿಂದೆ ಮಾತನಾಡುತ್ತಾ ಕುತೂಹಲಕರ ಸಂಗತಿಗಳನ್ನು ಮಾಧವನ್ ಹಂಚಿಕೊಂಡಿದ್ದರು. ಕೊರೊನಾ ಸಂದರ್ಭದಲ್ಲಿ ಈ ಸ್ಕ್ರಿಪ್ಟ್ ಕೇಳಿದಾಗ ತಕ್ಷಣ ‘ಯಸ್’ ಎಂದರಂತರೆ. ಕಾರಣ ಅವರಿಗೆ ಲಘು ಹಾಸ್ಯದ ಚಿತ್ರ ಹಾಗೂ ಸೀರೀಸ್ ಬಹಳ ಇಷ್ಟವಂತೆ. ಆದ್ದರಿಂದಲೇ ಇದು ಆಸಕ್ತಿ ಮೂಡಿಸಿತು ಎಂದು ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ:

ಅಮೇಜಾನ್​ ಪ್ರೈಮ್​ನಲ್ಲಿ ಪಿಆರ್​ಕೆ ವಾರ; ಒಂದು ತಿಂಗಳಲ್ಲಿ ಅಪ್ಪು ನಿರ್ಮಾಣದ ಮೂರು ಹೊಸ ಸಿನಿಮಾ ರಿಲೀಸ್​?

‘ಶಿವಣ್ಣ ಹೇಳಿದಂತೆ ನಮ್ಮ ಭಾಷೆಗಾಗಿ ನಾವು ಪ್ರಾಣ ಕೊಡೋಕೂ ರೆಡಿ’; ಅಜಯ್​ ರಾವ್​