ನೈಟ್ ಕರ್ಫ್ಯೂ ಎಫೆಕ್ಟ್: ಚಿತ್ರಮಂದಿರಗಳಲ್ಲಿ ಇಂದಿನಿಂದ 4 ಶೋ ಮಾತ್ರ ಪ್ರದರ್ಶನ, 7 ಗಂಟೆ ಶೋ ಲಾಸ್ಟ್

ನಿನ್ನೆಯವರೆಗೆ 5 ಶೋ ಪ್ರದರ್ಶನ ನಡೆಯುತ್ತಿತ್ತು. ಆದ್ರೆ ಇಂದಿನಿಂದ 4 ಶೋ ಮಾತ್ರ ಪ್ರದರ್ಶನಗೊಳ್ಳಲಿದೆ. ರಾಜ್ಯದ ಶೇ.80ರಷ್ಟು ಚಿತ್ರಮಂದಿರಗಳಲ್ಲಿ 7 ಗಂಟೆ ಶೋ ಲಾಸ್ಟ್ ಆಗಲಿದೆ. ನೈಟ್ ಶೋ ಸ್ಥಗಿತದಿಂದ ಶೇ.30ರಷ್ಟು ಆದಾಯಕ್ಕೆ ಕತ್ತರಿ ಬಿದ್ದಿದೆ.

ನೈಟ್ ಕರ್ಫ್ಯೂ ಎಫೆಕ್ಟ್: ಚಿತ್ರಮಂದಿರಗಳಲ್ಲಿ ಇಂದಿನಿಂದ 4 ಶೋ ಮಾತ್ರ ಪ್ರದರ್ಶನ, 7 ಗಂಟೆ ಶೋ ಲಾಸ್ಟ್
ಸಾಂದರ್ಭಿಕ ಚಿತ್ರ
Follow us
| Updated By: Digi Tech Desk

Updated on:Dec 28, 2021 | 9:36 AM

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಹೆಚ್ಚಾಗುವ ಸಾಧ್ಯತೆ ಇರುವ ಮಹಾಮಾರಿ ಕೊರೊನಾ ಹಾಗೂ ಒಮಿಕ್ರಾನ್ ಕಟ್ಟಿ ಹಾಕಲು ರಾಜ್ಯ ಸರ್ಕಾರ ನೈಟ್‌ ಕರ್ಫ್ಯೂ ಜಾರಿಗೆ ತಂದಿದೆ. ಇಂದಿನಿಂದ(ಡಿಸೆಂಬರ್ 28) 2022ರ ಜನವರಿ 7ರವರೆಗೆ ನೈಟ್‌ ಕರ್ಫ್ಯೂ ಜಾರಿಯಲ್ಲಿರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಇಂದಿನಿಂದ 4 ಶೋ ಮಾತ್ರ ಪ್ರದರ್ಶನಗೊಳ್ಳಲಿದೆ. ನಿನ್ನೆಯವರೆಗೆ 5 ಶೋ ಪ್ರದರ್ಶನ ನಡೆಯುತ್ತಿತ್ತು. ಆದ್ರೆ ಇಂದಿನಿಂದ 4 ಶೋ ಮಾತ್ರ ಪ್ರದರ್ಶನಗೊಳ್ಳಲಿದೆ. ರಾಜ್ಯದ ಶೇ.80ರಷ್ಟು ಚಿತ್ರಮಂದಿರಗಳಲ್ಲಿ 7 ಗಂಟೆ ಶೋ ಲಾಸ್ಟ್ ಆಗಲಿದೆ. ನೈಟ್ ಶೋ ಸ್ಥಗಿತದಿಂದ ಶೇ.30ರಷ್ಟು ಆದಾಯಕ್ಕೆ ಕತ್ತರಿ ಬಿದ್ದಿದೆ. ನೈಟ್ ಕರ್ಫ್ಯೂ ವಿಸ್ತರಣೆಯಾದ್ರೆ ಸಮಯ ಬದಲಾವಣೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಪ್ರದರ್ಶಕರ ವಲಯದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

ಥಿಯೇಟರ್ಗಳಿಗೆ ತಟ್ಟಿದ ನೈಟ್ ಕರ್ಫ್ಯೂ ಎಫೆಕ್ಟ್ ಸರ್ಕಾರ ಘೋಷಿಸಿದ 10 ದಿನಗಳ ನೈಟ್ ಕರ್ಫ್ಯೂಗೆ ಒಂದು ಶೋ ಬಂದ್ ಮಾಡಲಾಗಿದೆ. ರಾಜ್ಯಾದ್ಯಂತ 630 ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಿವೆ. ಬೆಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ಒಟ್ಟು 150 ಸಿಂಗಲ್ ಸ್ಕ್ರೀನ್ ಇವೆ. ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್ (PVR) 45. ರಾಜ್ಯಾದ್ಯಂತ ಒಟ್ಟು 60 ಮಲ್ಟಿಪ್ಲೆಕ್ಸ್ ಗಳಿವೆ. ರಾಜ್ಯದ ಶೇ.80 ಥಿಯೇಟರ್ ಗಳಲ್ಲಿ ಸಂಜೆ 7 ಗಂಟೆ ಶೋ ಲಾಸ್ಟ್ ಮಾಡಲಾಗುತ್ತಿದೆ.

ನೈಟ್ ಶೋ ಸ್ಥಗಿತದಿಂದ ಶೇ.30 ರಷ್ಟು ಕಲೆಕ್ಷನ್ಗೆ ಕತ್ತರಿ ಬೀಳಲಿದೆ. ಸದ್ಯ ಕೇವಲ ನೈಟ್ ಕರ್ಫ್ಯೂ 10 ದಿನಕ್ಕೆ ಮಾತ್ರ ಇರುವುದರಿಂದ ಕೊಂಚ ನಿರಾಳವಾಗಿದೆ. ಆದ್ರೆ ಒಂದು ವೇಳೆ ನೈಟ್ ಕರ್ಫ್ಯೂ ಮುಂದುವರಿದ್ರೆ ಸಮಯ ಬದಲಾವಣೆ ಮಾಡಬೇಕಾಗುತ್ತೆ. ಬೇರೆ ಸಮಯ ಬದಲಿಸಿದ್ರೆ ಜನ ಬರೋದು ಡೌಟ್. ಹೀಗಾಗಿ ಕರ್ಫ್ಯೂ ವಿಸ್ತರಣೆಯಾದರೆ ಸಮಯ ಬದಲಾವಣೆಗೆ ಬಗ್ಗೆ ಚಿಂತನೆ ಮಾಡುವುದಾಗಿ ಪ್ರದರ್ಶಕರ ವಲಯದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ. ಕೊರೊನಾ ಮುಗೀತು. ಅಚ್ಚೆ ದಿನ್ ಬಂದ್ವು, ಸಂಪೂರ್ಣ ಥಿಯೇಟರ್ ಓಪನ್ಗೆ ಅವಕಾಶ ಸಿಕ್ತು ಎಂದು ಖುಷಿ ಪಡುವಷ್ಟರಲ್ಲಿ ಈಗ ಮತ್ತೆ ಆತಂಕದ ಸೂಚನೆಗಳು ಸಿಗುತ್ತಿವೆ.

ಇದನ್ನೂ ಓದಿ: Israel Defence Forces: ಇದು ಇಸ್ರೇಲ್​ ರಕ್ಷಣಾ ಪಡೆಗಳ ನಿಜವಾದ ಸ್ಟೋರಿ, ಒಮ್ಮೆ ಈ ಫೋಟೋ ನೋಡಿ!

Published On - 9:10 am, Tue, 28 December 21