Israel Defence Forces: ಇದು ಇಸ್ರೇಲ್ ರಕ್ಷಣಾ ಪಡೆಗಳ ನಿಜವಾದ ಸ್ಟೋರಿ, ಒಮ್ಮೆ ಈ ಫೋಟೋ ನೋಡಿ!
IDF women: ಧಾರ್ಮಿಕವಾಗಿಯೂ ಕೆಟ್ಟ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾದ ಸಂದಿಗ್ಧ ಪರಿಸ್ಥಿತಿಗೆ ಇಸ್ರೇಲ್ ತುತ್ತಾಗಿದೆ. ಹಾಗಾಗಿ ಧಾರ್ಮಿಕತೆಯ ನಿಟ್ಟಿನಲ್ಲೂ ತನ್ನ ರಕ್ಷಣಾ ವ್ಯವಸ್ಥೆ ಕಟಿಬದ್ಧವಾಗಿದೆ ಎಂಬುದನ್ನು ನಿರೂಪಿಸಲು ರಿಸ್ಕ್ ತೆಗೆದುಕೊಳ್ಳಲು ಮುಂದಾಗಿರುವ ಇಸ್ರೇಲ್ ಇದೀಗ ಮೂರು ವಿಭಿನ್ನ ಧರ್ಮದ ಮಹಿಳೆಯರನ್ನು ತನ್ನ ರಕ್ಷಣಾ ವ್ಯವಸ್ಥೆಗೆ ಸೇರ್ಪಡೆ ಮಾಡಿಕೊಂಡಿದೆ.
ಇಸ್ರೇಲ್ ರಕ್ಷಣಾ ಪಡೆ ಅಮೆರಿಕಾ ಸೇರಿದಂತೆ ಇತರೆ ಬಲಾಢ್ಯ ರಾಷ್ಟ್ರಗಳ ಭದ್ರತಾ ಪಡೆಗಳಿಗಿಂತ ಖಡಕ್ ಎಂಬುದು ಇಡೀ ಜಗತ್ತಿಗೆ ವೇದ್ಯವಾಗಿರುವ ಸಂಗತಿ. ಪುಟ್ಟ ರಾಷ್ಟ್ರವಾಗಿ ತಾನು ಸದಾ ಶತ್ರುಕೂಟಗಳಿಂದ ಸುತ್ತುವರಿದಿರುವುದನ್ನು ಚೆನ್ನಾಗಿ ಅರಿತಿರುವ ಇಸ್ರೇಲ್ ತನ್ನನ್ನು ತಾನು ಭದ್ರಪಡಿಸಿಕೊಳ್ಳಲು ಸರ್ವ ಪ್ರಯತ್ನ ನಡೆಸುತ್ತಿರುತ್ತದೆ. ಅತ್ಯಾಧುನಿಕ ತಂತ್ರಜ್ಞಾನದಿಂದ ಹಿಡಿದು ಮಾನವ ಸಂಪನ್ಮೂಲದಲ್ಲಿಯೂ ಖಡಕ್ ಆಗಿ ಕಾರ್ಯನಿರ್ವಹಿಸುತ್ತದೆ ಇಸ್ರೇಲ್ ರಕ್ಷಣಾ ಪಡೆ (Israel Defence Forces). ಧಾರ್ಮಿಕವಾಗಿಯೂ ಕೆಟ್ಟ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾದ ಸಂದಿಗ್ಧ ಪರಿಸ್ಥಿತಿಗೆ ಇಸ್ರೇಲ್ ತುತ್ತಾಗಿದೆ. ಹಾಗಾಗಿ ಧಾರ್ಮಿಕತೆಯ ನಿಟ್ಟಿನಲ್ಲೂ ತನ್ನ ರಕ್ಷಣಾ ವ್ಯವಸ್ಥೆ ಕಟಿಬದ್ಧವಾಗಿದೆ ಎಂಬುದನ್ನು ನಿರೂಪಿಸಲು ರಿಸ್ಕ್ ತೆಗೆದುಕೊಳ್ಳಲು ಮುಂದಾಗಿರುವ ಇಸ್ರೇಲ್ ಇದೀಗ ಮೂರು ವಿಭಿನ್ನ ಧರ್ಮದ ಮಹಿಳೆಯರನ್ನು ತನ್ನ ರಕ್ಷಣಾ ವ್ಯವಸ್ಥೆಗೆ ಸೇರ್ಪಡೆ ಮಾಡಿಕೊಂಡಿದೆ. ಅದರೊಂದಿಗೆ ಧಾರ್ಮಿಕ ಸಾಮರಸ್ಯ ಮೆರೆಯುವ ಸಾಹಸಕ್ಕೆ ಮುಂದಾಗಿದೆ.
IDF faith women: ಇಸ್ರೇಲ್ ರಕ್ಷಣಾ ಪಡೆ (IDF) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಫೋಟೋವೊಂದನ್ನು ಷೇರ್ ಮಾಡಿದೆ. ಒಬ್ಬ ಮುಸ್ಲಿಂ, ಒಬ್ಬ ಯಹೂದಿ, ಒಬ್ಬ ಕ್ರಿಶ್ಚಿಯನ್- ಎಲ್ಲರೂ ಐಕತ್ಯೆಯಿಂದ ದೇಶದ ರಕ್ಷಣೆಗೆ ಸಿದ್ಧವಾಗಿದ್ದಾರೆ- ಎಂದೂ ಒಂದು ಕ್ಯಾಪ್ಷನ್ ನೀಡಿದೆ.
ಮೂವರು ಮಹಿಳೆಯರು (women). 3 ಧಾರ್ಮಿಕತೆಗಳು, ಒಂದೇ ಸಮವಸ್ತ್ರದಲ್ಲಿ. ಒಬ್ಬ ಮುಸ್ಲಿಂ (Muslim), ಒಬ್ಬ ಯಹೂದಿ (Jew), ಒಬ್ಬ ಕ್ರಿಶ್ಚಿಯನ್ (Christian)- ಎಲ್ಲರೂ ಐಕತ್ಯೆಯಿಂದ ದೇಶದ ರಕ್ಷಣೆಗೆ ಸಿದ್ಧವಾಗಿದ್ದಾರೆ. ಇದು ಇಸ್ರೇಲ್ ದೇಶದ ನಿಜವಾದ ಸ್ಟೋರಿ ಎಂದಿದೆ.
Israel Defence Forces ಟ್ವೀಟ್ ಸಾರಾಂಶ ಹೀಗಿದೆ: 3 women. 3 faiths. 1 uniform. A Muslim, a Jew, and a Christian—all serving together in the IDF. This is the real story of Israel.
3 women. 3 faiths. 1 uniform.
A Muslim, a Jew, and a Christian—all serving together in the IDF.
This is the real story of Israel. pic.twitter.com/PCTTz0qdji
— Israel Defense Forces (@IDF) December 27, 2021
ಇದನ್ನೂ ಓದಿ: Vikram Misri: ವಿಕ್ರಮ್ ಮಿಶ್ರೀ -ನೂತನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ, ಅವರ ಬಗ್ಗೆ ನಾಲ್ಕಾರು ಸಂಗತಿ ಇಲ್ಲಿದೆ
Published On - 8:53 am, Tue, 28 December 21