Vikram Misri: ವಿಕ್ರಮ್ ಮಿಶ್ರೀ -ನೂತನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ, ಅವರ ಬಗ್ಗೆ ನಾಲ್ಕಾರು ಸಂಗತಿ ಇಲ್ಲಿದೆ

ಹಾಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದಾವೊಲ್​ ಅವರಿಗೆ ಉತ್ತರಾಧಿಕಾರಿ ರೂಪದಲ್ಲಿ, ಸಧ್ಯಕ್ಕೆ ಅವರ ಸಹಾಯಕರಾಗಿ ಅಂದರೆ ಭಾರತದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ (Deputy NSA) ಖಡಕ್​ Indian Foreign Service ಅಧಿಕಾರಿ ವಿಕ್ರಮ್ ಮಿಶ್ರೀ (Vikram Misri) ದೇಶದಲ್ಲಿ ಸೇವೆ ಸಲ್ಲಿಸಲು (National Security Council Secretariat) ಮರಳಿದ್ದಾರೆ. ಈ ಹಿಂದೆ ಅವರು ಬೀಜಿಂಗ್​​ನಲ್ಲಿ ಭಾರತದ ದೂರವಾಸದಲ್ಲಿ ಇದ್ದರು. ವಿಕ್ರಮ್ ಮಿಶ್ರೀ ಮಾಜಿ ಪ್ರಧಾನ ಮಂತ್ರಿಗಳಾದ ಐಕೆ ಗುಜ್ರಾಲ್, ಮನಮೋಹನ್​ ಸಿಂಗ್​ ಮತ್ತು ಹಾಲಿ […]

Vikram Misri: ವಿಕ್ರಮ್ ಮಿಶ್ರೀ -ನೂತನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ, ಅವರ ಬಗ್ಗೆ ನಾಲ್ಕಾರು ಸಂಗತಿ ಇಲ್ಲಿದೆ
ವಿಕ್ರಮ್ ಮಿಶ್ರೀ-ನೂತನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ, ಅವರ ಬಗ್ಗೆ ನಾಲ್ಕಾರು ಸಂಗತಿ ಇಲ್ಲಿದೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 28, 2021 | 10:54 AM

ಹಾಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದಾವೊಲ್​ ಅವರಿಗೆ ಉತ್ತರಾಧಿಕಾರಿ ರೂಪದಲ್ಲಿ, ಸಧ್ಯಕ್ಕೆ ಅವರ ಸಹಾಯಕರಾಗಿ ಅಂದರೆ ಭಾರತದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ (Deputy NSA) ಖಡಕ್​ Indian Foreign Service ಅಧಿಕಾರಿ ವಿಕ್ರಮ್ ಮಿಶ್ರೀ (Vikram Misri) ದೇಶದಲ್ಲಿ ಸೇವೆ ಸಲ್ಲಿಸಲು (National Security Council Secretariat) ಮರಳಿದ್ದಾರೆ. ಈ ಹಿಂದೆ ಅವರು ಬೀಜಿಂಗ್​​ನಲ್ಲಿ ಭಾರತದ ದೂರವಾಸದಲ್ಲಿ ಇದ್ದರು. ವಿಕ್ರಮ್ ಮಿಶ್ರೀ ಮಾಜಿ ಪ್ರಧಾನ ಮಂತ್ರಿಗಳಾದ ಐಕೆ ಗುಜ್ರಾಲ್, ಮನಮೋಹನ್​ ಸಿಂಗ್​ ಮತ್ತು ಹಾಲಿ ಪ್ರಧಾನ ನರೇಂದ್ರ ಮೋದಿ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದಾರೆ.

ಮೂಲತಃ ಶ್ರೀನಗರದವರಾದ 57 ವರ್ಷದ ಮಿಶ್ರೀ Indian Foreign Service ಯ 1989ನೇ ಬ್ಯಾಚ್​ ಅಧಿಕಾರಿ. ಮ್ಯಾನ್ಮಾರ್, ಸ್ಪೇನ್​ನಲ್ಲಿ ಭಾರತದ ಅಂಬಾಸಿಡರ್​ ಆಗಿ ಸೇವೆ ಸಲ್ಲಿಸಿದ್ದಾರೆ. ಭಾರತ-ಚೀನಾದ ಸಂಬಂಧ ಬಿಕ್ಕಟ್ಟಿನಿಂದ ಕೂಡಿದ್ದಾಗ 2019ರಿಂದ ಬೀಜಿಂಗ್​ನಲ್ಲಿ ಅಂಬಾಸಿಡರ್​ ಆಗಿದ್ದರು.

ಭಾರತದ ವಿದೇಶ ವ್ಯವಹಾರಗಳ ಸಚಿವಾಲಯದಲ್ಲಿ ಸೇವೆ ಸಲ್ಲಿಸಿರುವ ವಿಕ್ರಮ್ ಮಿಶ್ರೀ, ಪ್ರಧಾನ ಮಂತ್ರಿ ಕಚೇರಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಯೂರೋಪ್, ಆಫ್ರಿಕಾ ಮತ್ತು ಉತ್ತರ ಅಮೆರಿಕಾದಲ್ಲಿ ಭಾರತದ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಶ್ರೀನಗರದಲ್ಲಿ ಹುಟ್ಟಿ ಬೆಳೆದ ವಿಕ್ರಮ್ ಮಿಶ್ರೀ, ಸಿಂಧಿಯಾ ಸ್ಕೂಲ್ ( Scindia School)​ ವಿದ್ಯಾರ್ಥಿ. ದೆಹಲಿ ಹಿಂದೂ ಕಾಲೇಜ್​ನಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ. ಎಂಬಿಎ ಪದವಿ ಸಹ ಪಡೆದಿದ್ದಾರೆ. ನಾಗರಿಕ ಸೇವೆಗಳಿಗೆ ಆಯ್ಕೆಯಾಗುವ ಮೊದಲು ಅವರು ಜಾಹಿರಾತು ಮತ್ತು ಸಿನಿಮಾ ತಯಾರಿಕೆಯಲ್ಲಿ ಮೂರು ವರ್ಷ ಕೆಲಸ ಮಾಡಿದ್ದರು. ಡಾಲಿ ಮಿಶ್ರೀ (Dolly Misri) ಅವರನ್ನು ಮದುವೆಯಾಗಿರುವ ವಿಕ್ರಮ್ ಮಿಶ್ರೀಗೆ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ: Narada Muni: ತ್ರಿಲೋಕ ಸಂಚಾರಕ ನಾರದ ಮುನಿಯಾಗಿದ್ದು ಹೇಗೆ? ನಾರದ ಮುನಿ ಜನ್ಮ ರಹಸ್ಯ

Published On - 7:14 am, Tue, 28 December 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್