ದಿಗಂತ್ ಬಾಯಿಂದ ಕೊಟ್ಟ ಹೂವನ್ನು ತುಟಿಯಿಂದಲೇ ಸ್ವೀಕರಿಸಿದ ಐಂದ್ರಿತಾ ರೇ; ಇಲ್ಲಿದೆ ವಿಡಿಯೋ

‘ರಾಜಾ-ರಾಣಿ’ ಶೋಅನ್ನು ಸಾಕಷ್ಟು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಸ್ಪರ್ಧಿಗಳು ಹಾಗೂ ಧಾರಾವಾಹಿ ಕಲಾವಿದರನ್ನೇ ಇಟ್ಟುಕೊಂಡು ಈ ಶೋ ನಡೆಸಲಾಗುತ್ತಿದೆ.

ದಿಗಂತ್ ಬಾಯಿಂದ ಕೊಟ್ಟ ಹೂವನ್ನು ತುಟಿಯಿಂದಲೇ ಸ್ವೀಕರಿಸಿದ ಐಂದ್ರಿತಾ ರೇ; ಇಲ್ಲಿದೆ ವಿಡಿಯೋ
ದಿಗಂತ್​-ಐಂದ್ರಿತಾ ರೇ
Follow us
TV9 Web
| Updated By: ಮದನ್​ ಕುಮಾರ್​

Updated on: Sep 27, 2021 | 9:16 AM

ನಟ ದಿಗಂತ್​ ಹಾಗೂ ಐಂದ್ರಿತಾ ರೇ ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್​. ಇವರು ಮದುವೆ ಆಗಿ ಕೆಲ ವರ್ಷಗಳು ಕಳೆದಿವೆ. ಆದರೆ, ಇವರ ಮಧ್ಯೆ ಮೊದಲು ಎಷ್ಟು ಪ್ರೀತಿ ಇತ್ತೋ ಅಷ್ಟೇ ಪ್ರೀತಿ ಈಗಲೂ ಇದೆ. ಇಬ್ಬರೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಒಟ್ಟಾಗಿ ಸಮಯ ಕಳೆಯುವ ಸಾಕಷ್ಟು ಫೋಟೋಗಳನ್ನು ಇಬ್ಬರೂ ಆಗಾಗ ಹಂಚಿಕೊಳ್ಳುತ್ತಾರೆ. ಈಗ ದಿಗಂತ್​ ಹಾಗೂ ಐಂದ್ರಿತಾ ಕಲರ್ಸ್​ ಕನ್ನಡ ವಾಹಿನಿಯ ‘ರಾಜಾ-ರಾಣಿ’ ಶೋಗೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದಾರೆ. ಈ ವೇಳೆ ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ.

‘ರಾಜಾ-ರಾಣಿ’ ಶೋಅನ್ನು ಸಾಕಷ್ಟು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಸ್ಪರ್ಧಿಗಳು ಹಾಗೂ ಧಾರಾವಾಹಿ ಕಲಾವಿದರನ್ನೇ ಇಟ್ಟುಕೊಂಡು ಈ ಶೋ ನಡೆಸಲಾಗುತ್ತಿದೆ. ಹೆಸರೇ ಹೇಳುವಂತೆ ಇದು ಕಪಲ್​ಗಳ ಶೋ. ಈ ಕಾರಣಕ್ಕೆ ದಿಗಂತ್​ ಹಾಗೂ ಐಂದ್ರಿತಾ ‘ರಾಜಾ-ರಾಣಿ’ ವೇದಿಕೆ ಏರಿದ್ದಾರೆ. ಇದು ವೀಕ್ಷಕರಿಗೆ ಇಷ್ಟವಾಗಿದೆ.

ದಿಗಂತ್​ ನಟನೆಯ ‘ಪಂಚರಂಗಿ’ ಸಿನಿಮಾದ ‘ಉಡಿಸುವೆ ಬೆಳಕಿನ ಸೀರೆಯಾ..’ ಹಾಡು ಹಿಟ್​ ಆಗಿತ್ತು. ಈ ಹಾಡಿಗೆ ದಿಗಂತ್​ ಹಾಗೂ ಐಂದ್ರಿತಾ ಹೆಜ್ಜೆ ಹಾಕಿದ್ದಾರೆ. ಇದಾದ ನಂತರದಲ್ಲಿ ಐಂದ್ರಿತಾ ಅವರನ್ನು ದಿಗಂತ್​ ಬಾಯ್ತುಂಬ ಹೊಗಳಿದ್ದಾರೆ. ‘ನೀನು ತುಂಬಾ ಸುಂದರವಾಗಿದ್ದೀಯಾ, ಐ ಲವ್​ ಯು ಎಂದಿದ್ದಾರೆ’ ದಿಗಂತ್​. ‘ನಾನು ಈ ರೀತಿ ಕಾಂಪ್ಲಿಮೆಂಟ್​ ಕೇಳಿಯೇ ಇರಲಿಲ್ಲ’ ಎಂದರು ಐಂದ್ರಿತಾ. ಈ ವೇಳೆ ನಿರೂಪಕಿ ಅನುಪಮಾ ಗೌಡ ರೊಮ್ಯಾಂಟಿಕ್​ ಆಗಿ ಪ್ರಪೋಸ್​ ಮಾಡುವಂತೆ ಕೋರಿದರು. ಆಗ ದಿಗಂತ್​ ಗುಲಾಬಿ ಹೂವನ್ನು ಬಾಯಲ್ಲಿ ಇಟ್ಟು ಐಂದ್ರಿತಾಗೆ ನೀಡಿದ್ದಾರೆ. ಈ ಹೂವನ್ನು ಐಂದ್ರಿತಾ ತಮ್ಮ ತುಟಿ ಮೂಲಕವೇ ಪಡೆದುಕೊಂಡಿದ್ದು ವಿಶೇಷವಾಗಿತ್ತು.

ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ‘ರಾಜಾ-ರಾಣಿ’ ಶೋ ಶನಿವಾರ ಹಾಗೂ ಭಾನುವಾರ ಸಂಜೆ 7:30ಕ್ಕೆ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: ಚಂದನ್​ ಶೆಟ್ಟಿಯಿಂದ ಮರೆಯಲಾರದ ಗಿಫ್ಟ್​; ಮೊದಲ ಬಾರಿಗೆ ಖುಷಿಯಿಂದ ಅತ್ತ ನಿವೇದಿತಾ ಗೌಡ

‘ಬೀದಿಯಲ್ಲಿ ಹೋಗುವ ನಾಯಿಗೂ, ನನಗೂ ಒಂದೇ ಹೆಸರಲ್ಲಿ ಕರೀತಾಳೆ’; ಇಶಿತಾ ಬಗ್ಗೆ ಪತಿಯ ದೂರು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ