ಐಶ್ವರ್ಯ ರೈಯಂತೆ ಕಾಣುವ ಹಾಗೂ ಈ ವಿಶ್ವ ಸುಂದರಿಯನ್ನು ಅನುಕರಿಸುವ ಸ್ತ್ರೀಯೊಬ್ಬರು ಪಾಕಿಸ್ತಾನದಲ್ಲಿದ್ದಾರೆ!
ಐಶ್ವರ್ಯ ಅವರ ಹಾಗೆ ಡ್ರೆಸ್ ಮತ್ತು ಅಲಂಕಾರ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪೋಟೋಗಳನ್ನು ಶೇರ್ ಮಾಡುವ ಆಮ್ನಾ ಇಂಟರ್ನೆಟ್ ಸೆನ್ಸೇಷನ್ ಅನಿಸಿದ್ದಾರೆ. ಅವರು ತಮ್ಮ ಪೋಟೋಗಳನ್ನು ಭಾರತದ ಸುರಸುಂದರಿ ಜೊತೆ ಪೋಸ್ಟ್ ಮಾಡಿರುವುದನ್ನು ನೋಡುತ್ತಿದ್ದರೆ ಇಬ್ಬರ ನಡುವೆ ಸ್ಟ್ರೈಕಿಂಗ್ ಸಾಮ್ಯತೆ ಇರುವುದು ಗೊತ್ತಾಗುತ್ತದೆ.
ಐಶ್ವರ್ಯ ರೈ ಬಚ್ಚನ್ ಅವರಷ್ಟು ಸುಂದರ ಸ್ತ್ರೀ ಇನ್ನೊಬ್ಬರಿಲ್ಲ ಅಂತ ನಿಮ್ಮ ಸ್ನೇಹಿತರ ಮುಂದೆ ನೀವು ಹೇಳಿದರೆ ಅವರು ಖಂಡಿತವಾಗಿ ‘ನಮಗೆ ಮತ್ತು ಜಗಕ್ಕೆ ಗೊತ್ತಿರದ ವಿಷಯ ಏನಾದರೂ ಇದ್ರೆ ಹೇಳು ಇಲ್ಲಾಂದ್ರೆ ಮುಚ್ಕೊಂಡಿರು,’ ಅಂತ ಗದರುತ್ತಾರೆ. ಐಶ್ 27 ವರ್ಷಗಳ ಹಿಂದೆಯೇ ವಿಶ್ವ ಸುಂದರಿ ಕಿರೀಟ ತೊಟ್ಟವರು, ಹೌದು ತಾನೆ? ಪರಿಸ್ಥಿತಿ ಹಾಗಿರಬೇಕಾದರೆ ನೀವು ಹೀಗೆ ಹೇಳುವ ಬದಲು ಐಶ್ವರ್ಯ ಅವರ ಪಡಿಯಚ್ಚಿನಂತಿರುವ ಮಹಿಳೆಯನ್ನು ನೋಡಿದ್ದೇನೆ ಅಂತ ಹೇಳಿದರೆ ಅವರಲ್ಲಿ ಕುತೂಹಲ ಮೂಡುತ್ತೆ. ಈ ವಿಡಿಯೋವನ್ನೊಮ್ಮೆ ನೋಡಿ ಮಾರಾಯ್ರೇ. ಅಲ್ಲ, ನೀವು ಅಂದುಕೊಳ್ಳುವ ಹಾಗೆ, ಐಶ್ವರ್ಯ ಅವರ ತದ್ರೂಪು ಆಗಿರುವ ಈ ಮಹಿಳೆ ಒಂದಷ್ಟು ಚಿತ್ರಗಳಲ್ಲಿ ನಟಿಸಿ ಮಾಯವಾದ ಸ್ನೇಹಾ ಉಲ್ಲಾಳ್ ಅವರಲ್ಲ. ಥೇಟು ಸ್ನೇಹಾ ಮತ್ತು ಐಶ್ವರ್ಯ ಅವರ ಹಾಗೆ ಕಾಣುವ ಪಾಕಿಸ್ತಾನದ ಬ್ಲಾಗರ್ ಆಮ್ನಾ ಇಮ್ರಾನ್.
ಐಶ್ವರ್ಯ ಅವರ ಹಾಗೆ ಡ್ರೆಸ್ ಮತ್ತು ಅಲಂಕಾರ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪೋಟೋಗಳನ್ನು ಶೇರ್ ಮಾಡುವ ಆಮ್ನಾ ಇಂಟರ್ನೆಟ್ ಸೆನ್ಸೇಷನ್ ಅನಿಸಿದ್ದಾರೆ. ಅವರು ತಮ್ಮ ಪೋಟೋಗಳನ್ನು ಭಾರತದ ಸುರಸುಂದರಿ ಜೊತೆ ಪೋಸ್ಟ್ ಮಾಡಿರುವುದನ್ನು ನೋಡುತ್ತಿದ್ದರೆ ಇಬ್ಬರ ನಡುವೆ ಸ್ಟ್ರೈಕಿಂಗ್ ಸಾಮ್ಯತೆ ಇರುವುದು ಗೊತ್ತಾಗುತ್ತದೆ.
ಇನ್ಸ್ಟಾಗ್ರಾಮ್ ನಲ್ಲಿ ಆಮ್ನಾ ಅವರಿಗೆ 26,000 ಕ್ಕಿಂತ ಹೆಚ್ಚು ಫಾಲೋಯರ್ಸ್ ಇದ್ದಾರೆ. ಅವರಲ್ಲಿ ಮುಕ್ಕಾಲು ಭಾಗಕ್ಕಿಂತ ಜಾಸ್ತಿ ಜನ ಕಾಮೆಂಟ್ ಮಾಡೋದು ಅದನ್ನೇ: ನೀವು ಥೇಟ್ ಐಶ್ವರ್ಯ ರೈ ಬಚ್ಚನ್ ಥರ ಕಾಣ್ತೀರಿ!
ಸ್ನೇಹಾ ಉಲ್ಲಾಳ್ ಅವರಂತೆ ಮತ್ತೊಬ್ಬ ನಟಿ ದಿಯಾ ಮಿರ್ಜಾ ಅವರನ್ನೂ ಐಶ್ವರ್ಯ ರೈಗೆ ಹೋಲಿಸಲಾಗುತಿತ್ತು ಅಂದರೆ ರೂಪದಲ್ಲಿ. ದಿಯಾ ಸುಂದರಿಯೇನೋ ನಿಜ ಆದರೆ, ಯಾವ ಕೋನದಿಂದಲೂ ಐಶ್ ಅವರನ್ನು ಹೋಲುವುದಿಲ್ಲ, ಖುದ್ದು ದಿಯಾ ಅವರೇ ಹಾಗೆ ಹೇಳಿದ್ದುಂಟು ಮಾರಾಯ್ರೇ!
ಇದನ್ನೂ ಓದಿ: ವಿಜಯೋತ್ಸವದಲ್ಲಿ ಡ್ಯಾನ್ಸ್ ಮಾಡಿದ ಯುವಕರ ಮೇಲೆ ಹಣದ ಹೊಳೆ ಹರಿಸಿದ ಬಿಜೆಪಿ ಕಾರ್ಯಕರ್ತರು, ಡಿಸೆಂಬರ್ 30ರ ವಿಡಿಯೋ ವೈರಲ್