AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯೋತ್ಸವದಲ್ಲಿ ಡ್ಯಾನ್ಸ್ ಮಾಡಿದ ಯುವಕರ ಮೇಲೆ ಹಣದ ಹೊಳೆ ಹರಿಸಿದ ಬಿಜೆಪಿ ಕಾರ್ಯಕರ್ತರು, ವಿಡಿಯೋ ವೈರಲ್

ವಿಜಯೋತ್ಸವದ ವೇಳೆ ಬಾರ್ ಗರ್ಲ್ ಮೇಲೆ ಹಣ ತೂರುವ ರೀತಿಯಲ್ಲಿ ಹಣ ತೂರಿದ್ದಾರೆ. ಹಣ ತೂರಿದ ವಿಡಿಯೋ ಈಗ ಫುಲ್ ವೈರಲ್ ಆಗಿದ್ದು, ಅವಳಿ ನಗರದ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯೋತ್ಸವದಲ್ಲಿ ಡ್ಯಾನ್ಸ್ ಮಾಡಿದ ಯುವಕರ ಮೇಲೆ ಹಣದ ಹೊಳೆ ಹರಿಸಿದ ಬಿಜೆಪಿ ಕಾರ್ಯಕರ್ತರು, ವಿಡಿಯೋ ವೈರಲ್
ವಿಜಯೋತ್ಸವದಲ್ಲಿ ಡ್ಯಾನ್ಸ್ ಮಾಡಿದ ಯುವಕರ ಮೇಲೆ ಹಣದ ಹೊಳೆ ಹರಿಸಿದ ಬಿಜೆಪಿ , ಡಿಸೆಂಬರ್ 30ರ ವಿಡಿಯೋ ವೈರಲ್
TV9 Web
| Edited By: |

Updated on:Jan 08, 2022 | 5:09 PM

Share

ಗದಗ: ಗದಗ-ಬೆಟಗೇರಿ ನಗರಸಭೆಯ ಭಾವಿ ಅಧ್ಯಕ್ಷೆ ಅಂತಲೇ ಬಿಂಬಿತರಾದ 35ನೇ ವಾರ್ಡ್ ನ ಬಿಜೆಪಿಯ ನೂತನ ಸದಸ್ಯೆ ಉಷಾ ದಾಸರ್, ವಿಜಯೋತ್ಸವದಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಬಾರ್ ಗರ್ಲ್ ಮೇಲೆ ಹಣ ಹಾರಿಸುವ ಮಾದರಿಯಲ್ಲಿ ಡ್ಯಾನ್ಸ್ ಮಾಡುವ ಯುವಕರ ಮೇಲೆ ಹಣ ತೂರಿ ಬಿಜೆಪಿ ಕಾರ್ಯಕರ್ತರು ಉದ್ಧಟನ ಮೆರೆದಿದ್ದಾರೆ. ಇದು ವಾರ್ಡ್ 35ರ ಮತದಾರನ್ನೇ ಅವಮಾನ ಮಾಡಿದಂತೆ ಅಂತ ವಾರ್ಡ್ ಜನ್ರು ಕಿಡಿಕಾರಿದ್ದಾರೆ.

ಗದಗ-ಬೆಟಗೇರಿ ನಗರಸಭೆಯ 35ನೇ ವಾರ್ಡ್ನ ಜನ್ರು ಅಂದ್ರೆ ಸುಸಂಸ್ಕೃತ ಜನರು. ಹೀಗಾಗಿ ಈ ವಾರ್ಡ್ ನಲ್ಲಿ ಯಾವ ಅಭ್ಯರ್ಥಿಗಳಿಂದ ಹಣ ಪಡೆಯದೇ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಉಷಾ ದಾಸರ್ ಎಂಬ ಮಹಿಳೆಗೆ ಮತ ಹಾಕಿ ಆಯ್ಕೆ ಮಾಡಿದ್ದಾರೆ. ಆದ್ರೆ, ಗೆಲುವು ಸಾಧಿಸಿದ ಬಳಿಕ ವಿಜಯೋತ್ಸವ ಆಚರಣೆ ವೇಳೆ ಹಣ ತೂರುವ ಮೂಲಕ ಜವಾಬ್ದಾರಿ ಮರೆತಿದ್ದಾರೆ ಅಂತ ಜನ್ರು ಕಿಡಿಕಾರಿದ್ದಾರೆ. ಹಣ ತೂರಿ ಫುಲ್ ಡ್ಯಾನ್ಸ್‌ ಮಾಡಿದ ಘಟನೆ ಗದಗ ನಗರದ ಹುಡ್ಕೋ ಬಡಾವಣೆಯಲ್ಲಿ ನಡೆದಿದೆ. ಮೆರವಣಿಗೆ ವೇಳೆ ಬಿಜೆಪಿ ಹಣದ ಹೊಳೆ ಹರಿಸಿದೆ. 35 ನೇ ವಾರ್ಡ್ ನ ಬಿಜೆಪಿ ನೂತನ ಸದಸ್ಯೆ ಉಷಾ ದಾಸರ್ ವಿಜಯೋತ್ಸವದ ವೇಳೆ ಕಾರ್ಯಕರ್ತರು ಹಣ ತೂರಿದ್ದಾರೆ. ಡಿಸೆಂಬರ್ 30 ರಂದು ನಡೆದ ವಿಜಯೋತ್ಸವದಲ್ಲಿ ಈ ಘಟನೆ ನಡೆದಿತ್ತು.

ಉಷಾ ದಾಸರ್ ನಗರಸಸಭೆ ಅಧ್ಯಕ್ಷ ಸ್ಥಾನಕ್ಕೆ ಏರುವ ಏಕೈಕ ಮಹಿಳಾ ಸದಸ್ಯೆಯಾಗಿದ್ದು, ಈಗಾಗಲೇ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿದೆ. ಗದಗ-ಬೆಟಗೇರಿ ನಗರಸಭೆ ಎಸ್ಸಿ ಮಹಿಳೆಗೆ ಮೀಸಲಿದೆ. ಹೀಗಾಗಿ ಬಿಜೆಪಿ ಪಕ್ಷದಲ್ಲೇ ಆಯ್ಕೆಯಾದ ಏಕೈಕ ಮಹಿಳಾ ಸದಸ್ಯೆ. ಹೀಗಾಗಿ ಭಾವಿ ಅಧ್ಯಕ್ಷೆ ಅಂತಲೇ ಉಷಾ ದಾಸರ ಅವಳಿ ನಗರದಲ್ಲಿ ಚರ್ಚೆನಡೆದಿದೆ. ಈ ನಡುವೆ ವಿಜಯೋತ್ಸವದ ವೇಳೆ ಬಾರ್ ಗರ್ಲ್ ಮೇಲೆ ಹಣ ತೂರುವ ರೀತಿಯಲ್ಲಿ ಹಣ ತೂರಿದ್ದಾರೆ. ಹಣ ತೂರಿದ ವಿಡಿಯೋ ಈಗ ಫುಲ್ ವೈರಲ್ ಆಗಿದ್ದು, ಅವಳಿ ನಗರದ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಂಭ್ರಮಾಚರಣೆ ವೇಳೆ ಜೀಪ್ ಮೇಲೆ ಹತ್ತಿ ಓರ್ವ ಹಣ ತೂರುತ್ತಿದ್ರೆ ಇತ್ತ ಡ್ಯಾನ್ಸ್ ಮಾಡೋ ಯುವಕರು ಹಣಕ್ಕಾಗಿ ಗುದ್ದಾಟ ನಡೆಸಿದ್ದಾರೆ. ಅಧ್ಯಕ್ಷ ಗಾದಿಗೆ ಏರುವ ಜವಾಬ್ದಾರಿ ಜನಪ್ರತಿನಿಧಿಯೇ ಈ ರೀತಿ ವರ್ತನೆ ತೋರಿದ್ರೆ ಆಡಳಿತ ಹೇಗೆ ನಡೆಸ್ತಾರೆ ಅಂತ ಜನ್ರು ಕಿಡಿಕಾರಿದ್ದಾರೆ. ಜನಪ್ರತಿಗಳ ವರ್ತನೆಗೆ ಅವಳಿ ನಗರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: Local Body Elections: ಎಡವಿದ ಬಿಜೆಪಿ, ಅರಳಿದ ಕಾಂಗ್ರೆಸ್​, ಮುದುಡಿದ ಜೆಡಿಎಸ್​: ಚುನಾವಣೆ ಫಲಿತಾಂಶ ವಿಶ್ಲೇಷಣೆ

Published On - 3:57 pm, Wed, 5 January 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?