‘ನಾವು ಕಾಲಿಟ್ರೆ ಹೊಸ ಅಲೆ ಏಳತ್ತೆ’; ಸಿನಿಮಾ ಜರ್ನಿಯನ್ನು ಇನ್ನೊಂದು ರೀತಿ ಅರ್ಥೈಸಿದ ಧನಂಜಯ

‘ನಾವು ಕಾಲಿಟ್ರೆ ಹೊಸ ಅಲೆ ಏಳತ್ತೆ’; ಸಿನಿಮಾ ಜರ್ನಿಯನ್ನು ಇನ್ನೊಂದು ರೀತಿ ಅರ್ಥೈಸಿದ ಧನಂಜಯ

TV9 Web
| Updated By: ಮದನ್​ ಕುಮಾರ್​

Updated on:Jan 07, 2022 | 11:43 AM

ನಿರ್ದೇಶಕ ಸತ್ಯಪ್ರಕಾಶ್ ಹೊಸದಾಗಿ ಸಿನಿಮಾ ವಿತರಣಾ ಸಂಸ್ಥೆ ಆರಂಭಿಸಿದ್ದಾರೆ. ಅದರ ಲಾಂಚಿಂಗ್​ ಕಾರ್ಯಕ್ರಮಕ್ಕೆ ಆಗಮಿಸಿದ್ದ ಧನಂಜಯ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು.

ನಟ ಧನಂಜಯ (Daali Dhananjaya) ಅವರು ಇಂದು ಸೂಪರ್​ ಸ್ಟಾರ್​ ಆಗಿದ್ದಾರೆ. ಆದರೆ ಅವರ ಸಿನಿಮಾ ಜರ್ನಿ ಶುರುವಾಗಿದ್ದು ‘ಜಯನಗರ 4ನೇ ಬ್ಲಾಕ್​’ (Jayanagar 4th Block Short Film) ಕಿರುಚಿತ್ರದಿಂದ. ಅಲ್ಲಿಂದ ಇಲ್ಲಿಯವರೆಗೆ ತಾವು ನಡೆದುಬಂದ ಹಾದಿಯನ್ನು ಧನಂಜಯ ಅವರು ತಮ್ಮದೇ ರೀತಿಯಲ್ಲಿ ಅರ್ಥೈಸಿದ್ದಾರೆ. ಅವರ ಸ್ನೇಹಿತ, ನಿರ್ದೇಶಕ ಸತ್ಯಪ್ರಕಾಶ್ (D Sathya Prakash) ಅವರು ಹೊಸದಾಗಿ ಸಿನಿಮಾ ವಿತರಣಾ ಸಂಸ್ಥೆ ಆರಂಭಿಸಿದ್ದು, ಅದರ ಲಾಂಚಿಂಗ್​ ಕಾರ್ಯಕ್ರಮಕ್ಕೆ ಆಗಮಿಸಿದ್ದ ಧನಂಜಯ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ‘ಇವರು ರಾಮಾ ರಾಮಾ ರೇ ಚಿತ್ರ ಮಾಡಿದಾಗ ಡಿ-ಮಾನಿಟೈಸೇಷನ್​ ಆಯ್ತು, ಈಗ ಡಿಸ್ಟ್ರೀಬ್ಯೂಷನ್​ ಕೆಲಸ​ ಶುರು ಮಾಡಿದಾಗ ಶೇ.50 ಆಕ್ಯುಪೆನ್ಸಿ ಆಗಿದೆ. ನಾವು ಕಾಲಿಟ್ಟರೆ ಹೊಸ ಅಲೆ ಏಳುತ್ತೆ. ಅವತ್ತು ಜಯನಗರ 4ನೇ ಬ್ಲಾಕ್​ ಕಿರುಚಿತ್ರ ಯೂಟ್ಯೂಬ್​​ನಲ್ಲಿ ಹೊಸ ಅಲೆ ಎಬ್ಬಿಸಿತ್ತು. ಪಾಪ್​ ಕಾರ್ನ್​ ಮಂಕಿ ಟೈಗರ್ ಚಿತ್ರದ​ ಸಮಯದಲ್ಲಿ ಮೊದಲನೇ ಅಲೆ ಎದ್ದಿತ್ತು. ಯುವರತ್ನ ರಿಲೀಸ್​ ಆದಾಗ ಎರಡನೇ ಅಲೆ. ಈಗ ಬಡವ ರಾಸ್ಕಲ್​ ( Badava Rascal Movie) ಬಂದಾಗ 3ನೇ ಅಲೆ ಎದ್ದಿದೆ’ ಎಂದು ಧನಂಜಯ ಹೇಳಿದರು. 

ಇದನ್ನೂ ಓದಿ:

‘ಬಡವ ರಾಸ್ಕಲ್​’ ಕಲೆಕ್ಷನ್​ 15 ಕೋಟಿ ರೂಪಾಯಿ? ಧನಂಜಯ ಹೇಳಿದ್ದು ಇಷ್ಟು

ಬಳ್ಳಾರಿಯಲ್ಲಿ ಧನಂಜಯ ಅವರನ್ನು ನೋಡೋಕೆ ಮುಗಿಬಿದ್ದ ಫ್ಯಾನ್ಸ್​

Published on: Jan 07, 2022 09:58 AM