ವೀಕೆಂಡ್ ಕರ್ಫ್ಯೂ ಮುಂದೆ ಲಾಕ್ ಡೌನ್ ಆಗ್ಬಿಡುತ್ತೇನೊ ಎಂದು ಗಂಟುಮೂಟೆ ಸಮೇತ ಊರುಗಳತ್ತ ಹೊರಟ ಜನ
ಇಂದು ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ ಬಸ್ಸೇರಿ ಲಗೇಜ್ ಗಳ ಸಮೇತ ಸ್ವಂತ ಊರುಗಳತ್ತ ಮುಖ ಮಾಡ್ತಿರುವ ಜನ. ಒಂದಷ್ಟು ಮಂದಿ ಲಾಕ್ ಡೌನ್ ಆದ್ರೂ ಆಗ್ಬೋದು ಅಂತ ಲಗೇಜ್ ಸಮೇತ ಹೊರಡುತ್ತಿದ್ದಾರೆ.
ವೀಕೆಂಡ್ ಭೀತಿಗೆ ಗಂಟುಮೂಟೆ ಕಟ್ಟಿದ ಹಳ್ಳಿ ಜನ! ಸ್ವಂತ ಊರುಗಳತ್ತ ಮುಖ ಮಾಡ್ತಿದ್ದಾರೆ ಹಳ್ಳಿ ಜನರು – ಲಾಕ್ಡೌನ್ ಆಗ್ಬಹುದು ಅನ್ನೋ ಭೀತಿಗೆ ಊರಿನತ್ತ – ಲಗೇಜ್ ಸಮೇತ ಬಸ್ನಿಲ್ದಾಣಗಳತ್ತ ಬಂದ ಜನರು – ಮಕ್ಕಳನ್ನ ಕಟ್ಟಿಕೊಂಡು ಊರುಗಳತ್ತ ಹೊರಟ ಜನರು – ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದತ್ತ ಬಂದ ಜನ.
ಕೊರೊನಾ ಕಲ್ಪಿತ ವೀಕೆಂಡ್ ಕರ್ಫ್ಯೂ ಜಾರಿಗೆ ಬರುತ್ತಿದ್ದಂತೆ ರಾಜಧಾನಿ ಜನ ಬೆಚ್ಚಿಬಿದ್ದಿದ್ದಾರೆ. ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲೂ ಜನವೋ ಜನ ಸಾಗರವಿದೆ. ಬಸ್ ನಿಲ್ದಾಣದ ಬಳಿಕ, ಸಮೀಪದ ರೈಲ್ವೆ ನಿಲ್ದಾಣವೂ ಈಗ ಹೌಸ್ ಫುಲ್ ಆಗುತ್ತಿದೆ. ಎಂದಿಗಿಂತ ಇಂದು ಹೆಚ್ಚು ಪ್ರಯಾಣಿಕರ ದಂಡು ಕಾಣಬಹುದಾಗಿದೆ. ಸ್ವಂತ ಜಿಲ್ಲೆ, ರಾಜ್ಯಗಳತ್ತ ಈ ಜನ ಪ್ರಯಾಣಕ್ಕೆ ಸನ್ನದ್ಧರಾಗಿದ್ದಾರೆ. ಈಗಿನ ವೀಕೆಂಡ್ ಕರ್ಫ್ಯೂ ಮುಂದೆ ಲಾಕ್ ಡೌನ್ ಆಗ್ಬಿಡುತ್ತೇನೊ ಅಂತ ಗಂಟು ಮೂಟೆ ಸಮೇತ ಬೆಂಗಳೂರಿನಿಂದ ತಮ್ಮ ಹಳ್ಳಿಗಳತ್ತ ಜನರ ಹೊರಡುತ್ತಿದ್ದಾರೆ. ಗಮನಾರ್ಹವೆಂದರೆ ನಾಳೆ ಕರ್ಫ್ಯೂ ಇದ್ರೂ ರೈಲು ಸೇವೆ ಇರುತ್ತೆ. ಆದ್ರೆ ರೈಲಿನಿಂದ ಬಂದ್ರೆ ಬಸ್ ಸಿಗೋದು ಡೌಟ್ ಅನ್ನೊ ಗೊಂದಲ ಕೆಲವರಿಗೆ. ಹೀಗಾಗಿ ಜನ ಇಂದೇ ತೆರಳುತ್ತಿದ್ದಾರೆ.
ಮೆಜೆಸ್ಟಿಕ್ ನ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್ನತ್ತ ಪ್ರಯಾಣಿಕರ ದೌಡು:
ಇಂದು ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ ಬಸ್ಸೇರಿ ಲಗೇಜ್ ಗಳ ಸಮೇತ ಸ್ವಂತ ಊರುಗಳತ್ತ ಮುಖ ಮಾಡ್ತಿರುವ ಜನ. ಒಂದಷ್ಟು ಮಂದಿ ಲಾಕ್ ಡೌನ್ ಆದ್ರೂ ಆಗ್ಬೋದು ಅಂತ ಲಗೇಜ್ ಸಮೇತ ಹೊರಡುತ್ತಿದ್ದಾರೆ.
ಪ್ರಯಾಣಿಕರಿಗೆ ಅನುಗುಣವಾಗಿ ಬಸ್ ಗಳ ವ್ಯವಸ್ಥೆ ಮಾಡಲಾಗುತ್ತಿದೆ. ನಾಳೆ ಬಸ್ ಇರುತ್ತೊ ಇಲ್ವೊ ಗೊತ್ತಿಲ್ಲ- ಅದಕ್ಕೆ ಇವತ್ತೇ ಹೋಗ್ತಿದ್ದೀವಿ. ಈ ಕರ್ಫ್ಯೂ, ಲಾಕ್ ಡೌನ್ ಎಲ್ಲ ಮಾಡಿದ್ರೆ ಕಷ್ಟ ಅಂತಾ ಜನ ಬೊಬ್ಬಿಡುತ್ತಿದ್ದಾರೆ. ಮಕ್ಕಳ ಸಮೇತ ಕುಕ್ಕರ್, ಚೀಲದಲ್ಲಿ ಮನೆ ವಸ್ತುಗಳನ್ನ ಬಸ್ ನಲ್ಲಿ ಹೊತ್ತೊಯ್ಯುತ್ತಿರುವ ಮಹಿಳೆಯರು ಊರುಗಳತ್ತ ಪ್ರಯಾಣ ಮಾಡುತ್ತಿದ್ದಾರೆ.