ಬಳ್ಳಾರಿಯಲ್ಲಿ ಧನಂಜಯ ಅವರನ್ನು ನೋಡೋಕೆ ಮುಗಿಬಿದ್ದ ಫ್ಯಾನ್ಸ್
ಧನಂಜಯ ಅವರು ಮೊದಲ ನಿರ್ಮಾಣದಲ್ಲೇ ಗೆದ್ದಿದ್ದಾರೆ. ಪಕ್ಕದಮನೆ ಹುಡುಗನಾಗಿ ಅವರನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಈ ಕಾರಣಕ್ಕೆ ಇಂದು (ಜನವರಿ 4) ‘ಬಡವ ರಾಸ್ಕಲ್’ ತಂಡ ಬಳ್ಳಾರಿಗೆ ಭೇಟಿ ನೀಡಿತ್ತು.
‘ಡಾಲಿ’ ಧನಂಜಯ ನಟನೆಯ ‘ಬಡವ ರಾಸ್ಕಲ್’ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ. ಪಂಚಿಂಗ್ ಡೈಲಾಗ್ಗಳು ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದೆ. ಧನಂಜಯ ಅವರು ಮೊದಲ ನಿರ್ಮಾಣದಲ್ಲೇ ಗೆದ್ದಿದ್ದಾರೆ. ಪಕ್ಕದಮನೆ ಹುಡುಗನಾಗಿ ಅವರನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಈ ಕಾರಣಕ್ಕೆ ಇಂದು (ಜನವರಿ 4) ‘ಬಡವ ರಾಸ್ಕಲ್’ ತಂಡ ಬಳ್ಳಾರಿಗೆ ಭೇಟಿ ನೀಡಿತ್ತು. ನಟ ಡಾಲಿ ಧನಂಜಯ ಅವರನ್ನು ಕಂಡು ಅಭಿಮಾನಿಗಳು ಖುಷಿಪಟ್ಟರು. ಅಲ್ಲದೆ, ಅವರನ್ನು ನೋಡೋಕೆ ಅಭಿಮಾನಿಗಳು ಮುತ್ತಿಕೊಂಡರು. ಅದರ ವಿಡಿಯೋ ಇಲ್ಲಿದೆ. ಮುಖ್ಯ ಪಾತ್ರವನ್ನೂ ನಿಭಾಯಿಸಿರುವ ಧನಂಜಯ್ಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ (Amrutha Iyengar) ನಟಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ, ಪ್ರೀತಾ ಜಯರಾಮನ್ ಛಾಯಾಗ್ರಹಣ ಮಾಡಿದ್ದಾರೆ. ಪೋಷಕ ಪಾತ್ರಗಳಲ್ಲಿ ನಾಗ ಭೂಷಣ್, ರಂಗಾಯಣ ರಘು, ತಾರಾ ಅನುರಾಧ ಹೈಲೈಟ್ ಆಗಿದ್ದಾರೆ.
ಇದನ್ನೂ ಓದಿ: Badava Rascal: ಜನಮನ ಗೆದ್ದ ‘ಬಡವ ರಾಸ್ಕಲ್’; ನಾಡಿನೆಲ್ಲೆಡೆ ಧನಂಜಯ್ಗೆ ಸಿಕ್ಕ ಸ್ವಾಗತ ಹೇಗಿತ್ತು ಗೊತ್ತಾ?
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

