‘ನಮಗೆ ಪರಿಸರ ಉಳಿಸುವ ಮನುಷ್ಯತ್ವ ಬೇಕು’; ನಟ ಚೇತನ್
‘ಕೆಲವರು ಗಂಡಸತ್ವದ ಬಗ್ಗೆ ಮಾತಾನಾಡುತ್ತಿದ್ದಾರೆ. ನಮಗೆ ಬೇಕಾಗಿರೋದು ಗಂಡಸತ್ವ ಅಲ್ಲ, ಪರಿಸರ ಉಳಿಸೋ ಮನುಷ್ಯತ್ವ’ ಎಂದರು ಅವರು.
ಮೇಕೆದಾಟು ಯೋಜನೆಗೆ ಸ್ಯಾಂಡಲ್ವುಡ್ನ ಅನೇಕ ಸೆಲೆಬ್ರಿಟಿಗಳು ಬೆಂಬಲ ಸೂಚಿಸಿದ್ದಾರೆ. ದುನಿಯಾ ವಿಜಯ್, ಸಾಧು ಕೋಕಿಲ ಮೊದಲಾದವರು ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ನಟ ‘ಆ ದಿನಗಳು’ ಚೇತನ್ ಅವರು ಈ ವಿಚಾರದಲ್ಲಿ ಪರಿಸರವಾದಿಗಳ ಪರ ನಿಂತಿದ್ದಾರೆ. ಈ ಹೋರಾಟವನ್ನು ಖಂಡಿಸಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಬರಬಾರದು ಎನ್ನುವ ಬಗ್ಗೆ ಅವರು ಧ್ವನಿ ಎತ್ತಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಬಂದರೆ ಸಾಕಷ್ಟು ಪರಿಸರ ನಾಶವಾಗುತ್ತದೆ ಎನ್ನುವ ಅಭಿಪ್ರಾಯವನ್ನು ಅವರು ಹೊರಹಾಕಿದ್ದಾರೆ. ಮೇಕೆದಾಟು ಯೋಜನೆ ವಿಚಾರದಲ್ಲಿ ಕೆಲವರು ಗಂಡಸತ್ವ ತೋರಿಸುತ್ತೇನೆ ಎನ್ನುವ ಹೇಳಿಕೆ ನೀಡಿದ್ದರು. ಇದನ್ನು ಚೇತನ್ ಖಂಡಿಸಿದ್ದಾರೆ. ‘ಕೆಲವರು ಗಂಡಸತ್ವದ ಬಗ್ಗೆ ಮಾತಾನಾಡುತ್ತಿದ್ದಾರೆ. ನಮಗೆ ಬೇಕಾಗಿರೋದು ಗಂಡಸತ್ವ ಅಲ್ಲ, ಪರಿಸರ ಉಳಿಸೋ ಮನುಷ್ಯತ್ವ’ ಎಂದರು ಅವರು. ಈ ಮೂಲಕ ಅವರು ಈ ಯೋಜನೆಯನ್ನು ಕೈಬಿಡಲೇಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ‘ಇದು ಪರಿಸರದ ಮೇಲಿನ ಯುದ್ಧ’; ಮೇಕೆದಾಟು ಯೋಜನೆ ಬಗ್ಗೆ ನಟ ಚೇತನ್ ಕಿಡಿ
‘ಮೇಕೆದಾಟು ಅಣೆಕಟ್ಟಿನಿಂದ ಪ್ರಕೃತಿಗೆ ಒಳ್ಳೆಯದಾಗಲ್ಲ’; ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ನಟ ಚೇತನ್