‘ಮೇಕೆದಾಟು ಅಣೆಕಟ್ಟಿನಿಂದ ಪ್ರಕೃತಿಗೆ ಒಳ್ಳೆಯದಾಗಲ್ಲ’; ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ನಟ ಚೇತನ್​

‘ಮೇಕೆದಾಟು ಅಣೆಕಟ್ಟಿನಿಂದ ಪ್ರಕೃತಿಗೆ ಒಳ್ಳೆಯದಾಗಲ್ಲ’; ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ನಟ ಚೇತನ್​

TV9 Web
| Updated By: ಮದನ್​ ಕುಮಾರ್​

Updated on: Jan 15, 2022 | 12:37 PM

ಮೇಕೆದಾಟು ಅಣೆಕಟ್ಟು ನಿರ್ಮಾಣ ಆಗುವುದರಿಂದ ಅನೇಕ ತೊಂದರೆಗಳು ಆಗುತ್ತವೆ ಎಂಬುದು ಚೇತನ್​ ಅಭಿಪ್ರಾಯ. ಆ ಬಗ್ಗೆ ಅವರು ವಿವರಣೆ ನೀಡಿದ್ದಾರೆ.

ಮೇಕೆದಾಟು ಯೋಜನೆ ಜಾರಿ ಆಗಬೇಕು ಎಂದು ರಾಜ್ಯ ಕಾಂಗ್ರೆಸ್​ ನಾಯಕರು ಪಟ್ಟು ಹಿಡಿದಿದ್ದಾರೆ. ಅದಕ್ಕಾಗಿ ಪಾದಯಾತ್ರೆ ಕೂಡ ನಡೆಯಿತು. ಆದರೆ ಮೇಕೆದಾಟು (Mekedatu) ಅಣೆಕಟ್ಟು ನಿರ್ಮಾಣ ಆಗಬಾರದು ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಲು ನಟ ‘ಆ ದಿನಗಳು’ ಚೇತನ್ (Chetan Ahimsa)​ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ನಾಗೇಶ್​ ಹೆಗಡೆ, ಮೇದಾ ಪಾಟ್ಕರ್ (Medha Patkar)​ ಕೂಡ ಹಾಜರಿದ್ದರು. ಅಣೆಕಟ್ಟು ನಿರ್ಮಾಣ ಆಗುವುದರಿಂದ ಅನೇಕ ತೊಂದರೆಗಳು ಆಗುತ್ತವೆ ಎಂಬುದು ಚೇತನ್​ ಅಭಿಪ್ರಾಯ. ಆ ಬಗ್ಗೆ ಅವರು ವಿವರಣೆ ನೀಡಿದ್ದಾರೆ. ‘ಮೂರು ರಾಜಕೀಯ ಪಕ್ಷಗಳು ಈ ಯೋಜನೆಯಲ್ಲಿ ಅವಕಾಶವಾದ ರಾಜಕಾರಣ ಮಾಡುತ್ತಿವೆ. ಅದು ಬೆಳಕಿಗೆ ಬಂದಿದೆ. ಇಡೀ ಕರ್ನಾಟಕವೇ ಮೇಕೆದಾಟು ಅಣೆಕಟ್ಟು ಪರವಾಗಿದೆ ಎಂದು ಬಿಂಬಿಸಲಾಗುತ್ತಿದೆ. ಇದನ್ನು ನಾವು ಒಪ್ಪಲ್ಲ. ನಾಳೆ ರಸ್ತೆಗೆ ಬಂದು ಪ್ರತಿಭಟನೆ ಮಾಡುತ್ತೇವೆ. ಕರ್ನಾಟಕದ ನೆಲ, ಜಲದ ಪರವಾಗಿ ನಾವೂ ಇದ್ದೇವೆ. ಆದರೆ ಅಣೆಕಟ್ಟು ನಿರ್ಮಾಣಕ್ಕೆ ನಮ್ಮ ವಿರೋಧ ಇದೆ. ಜನಪರ, ಪರಸರ ಸ್ನೇಹಿ ವಿಚಾರಗಳನ್ನು ತರಬೇಕು’ ಎಂದು ಚೇತನ್ ಕುಮಾರ್​​ ಹೇಳಿದ್ದಾರೆ.

ಇದನ್ನೂ ಓದಿ:

‘ಇದು ಪರಿಸರದ ಮೇಲಿನ ಯುದ್ಧ’; ಮೇಕೆದಾಟು ಯೋಜನೆ ಬಗ್ಗೆ ನಟ ಚೇತನ್​ ಕಿಡಿ

‘ಅಧಿಕಾರ ದಾಹಕ್ಕಾಗಿ ಮತಾಂತರ ನಿಷೇಧ ಕಾಯ್ದೆ’: ಬೊಮ್ಮಾಯಿ ವಿರುದ್ಧ ಚೇತನ್​ ಗರಂ