ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಜನ ಪಾರ್ಸೆಲ್ ಕಟ್ಟಿಸಿಕೊಳ್ಳಲು ಸಹ ಹೋಟೆಲ್​ಗಳಿಗೆ ಬರುತ್ತಿಲ್ಲ!

ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಜನ ಪಾರ್ಸೆಲ್ ಕಟ್ಟಿಸಿಕೊಳ್ಳಲು ಸಹ ಹೋಟೆಲ್​ಗಳಿಗೆ ಬರುತ್ತಿಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 15, 2022 | 4:15 PM

ಹೋಟೆಲ್ ಗಳಲ್ಲಿ ಇದೇ ಸ್ಥಿತಿ ನಾಳೆಯೂ ಮುಂದುವರಿಯಲಿದೆ. ವೀಕೆಂಡ್ ಕರ್ಫ್ಯೂ ತಳ್ಳುಗಾಡಿಗಳಲ್ಲಿ ತಿಂಡಿ ಮಾರುವವರ ಬದುಕನ್ನು ನರಕ ಮಾಡಿಬಿಟ್ಟಿದೆ. ದಿನಗೂಲಿ ನೌಕರರು ಸಹ ಅದೇ ಮಾತನ್ನು ಹೇಳುತ್ತಿದ್ದಾರೆ. ವೀಕೆಂಡ್ ಕರ್ಫ್ಯೂ ಮತ್ತು ಲಾಕ್ಡೌನ್ ಹೆಸರಲ್ಲಿ ನಮ್ಮನ್ನು ಯಾಕೆ ಉಪವಾಸ ಕೆಡವುಲಾಗುತ್ತಿದೆ?

ಕರ್ನಾಟಕ ಸರ್ಕಾರ ವಾರಾಂತ್ಯದ ಕರ್ಫ್ಯೂ (week-end Curfew) ಅನ್ನು ಜನೆವರಿ ಅಂತ್ಯದವರೆಗೆ ವಿಸ್ತರಿಸಿದೆ. ಶನಿವಾರ ಮತ್ತ ರವಿವಾರ ಎಲ್ಲ ಅಂಗಡಿ ಮುಂಗಟ್ಟುಗಳು, ಪಬ್, ಬಾರ್, ರೆಸ್ಟುರಾಂಟ್ ಗಳು ಮುಚ್ಚಿರುತ್ತವೆ. ಹೋಟೆಲ್ ಗಳಲ್ಲಿ ಕೇವಲ ಪಾರ್ಸೆಲ್ (parcel) ತೆಗೆದುಕೊಂಡು ಹೋಗಲು ಮಾತ್ರ ಅವಕಾಶವಿದೆ. ಟಿವಿ9 ಬೆಂಗಳೂರು ವರದಿಗಾರರೊಬ್ಬರು ನಗರದ ಒಂದು ಹೋಟೆಲ್ ನಲ್ಲಿ ಬೆಳಗಿನ ಸ್ಥಿತಿ ಹೇಗಿತ್ತು ಅಂತ ತೋರುವ ಒಂದು ವಿಡಿಯೋ ಮಾಡಿದ್ದಾರೆ. ಬೇರೆ ದಿನಗಳಾಗಿದ್ದರೆ, ಈ ಹೋಟೆಲ್ ಗ್ರಾಹಕರಿಂದ ಗಿಜಿಗಿಡುತಿತ್ತು ಮತ್ತು ಕುಳಿತುಕೊಂಡು ತಿಂಡಿ ತಿನ್ನಲು ಕುರ್ಚಿ ಖಾಲಿಯಾಗುವವರೆಗೆ ಕಾಯಬೇಕಾಗುತಿತ್ತು. ಶನಿವಾರ ಗ್ರಾಹಕರ ಮಾತು ಹಾಗಿರಲಿ, ಹೋಟೆಲ್ ಸಿಬ್ಬಂದಿ ಸಹ ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಪಾರ್ಸೆಲ್ ತೆಗೆದುಕೊಳ್ಳಲು ಸಹ ಜನರು ಮೊದಲಿನ ಹಾಗೆ ವಿಪುಲ ಸಂಖ್ಯೆಯಲ್ಲಿ ಬರುತ್ತಿಲ್ಲ. ವಿಡಿಯೋನಲ್ಲಿ ನಿಮಗೆ ಅದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು (Covid-19 cases) ದಿನೇದಿನೆ ಹೆಚ್ಚುತ್ತಿವೆ. ಆಸ್ಪತ್ರೆ ದಾಖಲಾತಿಯಲ್ಲಿ ಗಣನೀಯ ಹೆಚ್ಚಳ ಕಂಡುಬರುತ್ತಿಲ್ಲವಾದರೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ.

ಹೋಟೆಲ್ ಗಳಲ್ಲಿ ಇದೇ ಸ್ಥಿತಿ ನಾಳೆಯೂ ಮುಂದುವರಿಯಲಿದೆ. ವೀಕೆಂಡ್ ಕರ್ಫ್ಯೂ ತಳ್ಳುಗಾಡಿಗಳಲ್ಲಿ ತಿಂಡಿ ಮಾರುವವರ ಬದುಕನ್ನು ನರಕ ಮಾಡಿಬಿಟ್ಟಿದೆ. ದಿನಗೂಲಿ ನೌಕರರು ಸಹ ಅದೇ ಮಾತನ್ನು ಹೇಳುತ್ತಿದ್ದಾರೆ. ವೀಕೆಂಡ್ ಕರ್ಫ್ಯೂ ಮತ್ತು ಲಾಕ್ಡೌನ್ ಹೆಸರಲ್ಲಿ ನಮ್ಮನ್ನು ಯಾಕೆ ಉಪವಾಸ ಕೆಡವುಲಾಗುತ್ತಿದೆ?

ಸೋಂಕು ನಮಗೆ ತಾನೆ ತಾಕೋದು, ನಮ್ಮ ಹಣೆಬರಹದಲ್ಲಿ ಏನು ಬರೆದಿದೆಯೋ ಅದು ಆಗುತ್ತದೆ. ಕೆಲಸ ಮಾಡದೆ ಮನೆಯಲ್ಲಿ ಕೂತರೆ ನಮ್ಮ ಕುಟುಂಬಗಳು ಬದುಕುವುದು ಹೇಗೆ? ಅವರು ಉಪವಾಸ ಮಲಗುವುದನ್ನು ನೋಡಲಾಗುತ್ತದೆಯೇ ಎಂದು ಯಾದಗಿರಿ, ರಾಯಚೂರು, ಕಲ್ಬುರ್ಗಿ ಕಡೆಯಿಂದ ಬೆಂಗಳೂರಿಗೆ ಬದಕು ಅರಸಿಕೊಂಡು ಬಂದಿರುವ ಜನ ಕೇಳುತ್ತಿದ್ದಾರೆ.

ಇದನ್ನೂ ಓದಿ:   ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಬನಶಂಕರಿ ಜಾತ್ರೆಗೆ ಪಾದಯಾತ್ರೆ ಹೊರಟ ಸಾವಿರಾರು ಭಕ್ತರು; ವಿಡಿಯೋ ನೊಡಿ