24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪಟ್ಟಿ ಸೇರಿದ ಸೈಕಲ್
ಆಡಮ್ ಗುಜರಿ ವಸ್ತುಗಳನ್ನು ಬಳಸಿ ಈ ಸೈಕಲ್ ಅನ್ನು ನಿರ್ಮಿಸಿದ್ದಾರೆ. 3 ವಾರಗಳಲ್ಲಿ ಈ ಸೈಕಲ್ ನಿರ್ಮಾಣವಾಗಿದ್ದು ಅತೀ ಎತ್ತರದ ಓಡಿಸಬಲ್ಲ ಸೈಕಲ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಪಟ್ಟಿಗೂ ಸೇರಿದೆ.
ಸಾಮಾಜಿಕ ಜಾಲತಾಣ ( Social media) ದಲ್ಲಿ ವಿಭಿನ್ನ ರೀತಿಯ ವಿಡಿಯೋಗಳು ವೈರಲ್ ಅಗುತ್ತಲೇ ಇರುತ್ತವೆ. ಹೊಸ ವಿಚಾರಗಳ, ಹೊಸ ಆವಿಷ್ಕಾರಗಳ ಕುರಿತಾದ ಮಾಹಿತಿ ವಿಡಿಯೋಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈಗೊಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ವಿಡಿಯೋವೊ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಅತಿ ಎತ್ತರದ ಸೈಕಲ್ ( Tallest Rideable Bicycle) ತಯಾರಿಸಿದ ವ್ಯಕ್ತಿ ಅದನ್ನು ರೈಡ್ ಮಾಡುತ್ತಿರುವ ವಿಡಿಯೋ ಇದಾಗಿದೆ. ಹಳೆಯ ಗುಜರಿ ವಸ್ತುಗಳಿಂದ ತಯಾರಿಸಿದ ಈ ಸೈಕಲ್ ಸದ್ಯ ಎಲ್ಲರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ವೈರಲ್ ಆಗಿದೆ.
View this post on Instagram
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಇನ್ಸ್ಟಾಗ್ರಾಮ್ ಖಾತೆ ಈ ವಿಡಿಯೋವನ್ನು ಹಂಚಕೊಂಡಿದ್ದು, ಜಗತ್ತಿನ ಅತೀ ಎತ್ತರದ ಬೈಸಿಕಲ್ ತಯಾರಿಸಿ ಅದನ್ನು ಓಡಿಸವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ಹಂಚಿಕೊಂಡ ಮೇಲೆ ಈ ವರೆಗೆ 57 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಆಡಮ್ ಝಡಾನೋವಿಚ್ ಎನ್ನುವ ವ್ಯಕ್ತಿ ಇದನ್ನು ತಯಾರಿಸಿದ್ದಾರೆ. ಜಗತ್ತಿನ ಅತೀ ಎತ್ತರದ ಈ ಬೈಸಿಕಲ್ 24ಅಡಿಗಳಷ್ಟು ಎತ್ತರವಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಇನ್ಸ್ಟಾಗ್ರಾಮ್ ಖಾತೆ ವಿಡಿಯೋ ಜತೆಗೆ ಆಡಮ್ ಹಂಚಿಕೊಂಡ ಒದಷ್ಟು ಮಾಹಿತಿಗಳನ್ನು ಸೇರಿಸಿದೆ.
ಆಡಮ್ ತಮ್ಮ ಕನಸಿನ ಬಗ್ಗೆ ನನ್ನ ಆಲೋಚನೆಗಳನ್ನು ಎತ್ತರಕ್ಕೆ ಹೋಲಿಸಿಕೊಳ್ಳುವುದು ದೊಡ್ಡ ತೃಪ್ತಿಯನ್ನು ನೀಡುತ್ತದೆ. ನನ್ನ ದೊಡ್ಡ ಕನಸುಗಳ ಸಾಕಾರಕ್ಕೆ ಈ ಅತೀ ಎತ್ತರದ ಸೈಕಲ್ ನಿರ್ಮಾಣ ಮಾಡಿರುವುದು ಹೊಸ ಸ್ಪೂರ್ತಿ ನೀಡಿದೆ ಎಂದಿದ್ದಾರೆ. ಆಡಮ್ ಗುಜರಿ ವಸ್ತುಗಳನ್ನು ಬಳಸಿ ಈ ಸೈಕಲ್ ಅನ್ನು ನಿರ್ಮಿಸಿದ್ದಾರೆ. 3 ವಾರಗಳಲ್ಲಿ ಈ ಸೈಕಲ್ ನಿರ್ಮಾಣವಾಗಿದ್ದು ಅತೀ ಎತ್ತರದ ಓಡಿಸಬಲ್ಲ ಸೈಕಲ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಪಟ್ಟಿಗೂ ಸೇರಿದೆ.
ಇದನ್ನೂ ಓದಿ:
Viral Video: ಬಾಲ್ ತಳ್ಳಿದಂತೆ 4 ಜನರಿದ್ದ ಕಾರನ್ನು ತಳ್ಳಿ ಪಲ್ಟಿಯಾಗಿಸಿದ ಆನೆ