Video: ಎಮಿರೇಟ್ಸ್ನಿಂದ ಮತ್ತೊಂದು ವಿಶಿಷ್ಟ ಜಾಹೀರಾತು ಬಿಡುಗಡೆ; ಮತ್ತೆ ಬುರ್ಜ್ ಖಲೀಪಾ ತುತ್ತತುದಿಗೆ ನಿಂತ ನಿಕೋಲ್ ಸ್ಮಿತ್ ಲುಡ್ವಿಕ್
ಕಳೆದ ಬಾರಿ ಆಗಸ್ಟ್ನಲ್ಲಿ ಎಮಿರೇಟ್ಸ್ ಇಂಥದ್ದೇ ಒಂದು ಜಾಹೀರಾತನ್ನು ಸೃಷ್ಟಿಸಿತ್ತು. ಯುಕೆ (ಇಂಗ್ಲೆಂಡ್)ಯ ಕೆಂಪು ಲಿಸ್ಟ್ನಲ್ಲಿದ್ದ ಯುಎಇಯನ್ನು ಆಗಸ್ಟ್ನಲ್ಲಿ ಯುಕೆ ಅಂಬರ್ ಲಿಸ್ಟ್ಗೆ ಸೇರ್ಪಡೆಗೊಳಿಸಿತ್ತು. ಅದನ್ನು ಜಗತ್ತಿಗೆ ತಿಳಿಸಲು ಈ ಆ್ಯಡ್ ಮಾಡಲಾಗಿತ್ತು.
ಯುನೈಟೆಡ್ ಅರಬ್ ಎಮಿರೇಟ್ಸ್ನ (United Arab Emirates) ಅತಿದೊಡ್ಡ ಏರ್ಲೈನ್, ಧ್ವಜವಾಹಕ ಎಮಿರೇಟ್ಸ್ (Emirates) ಇದೀಗ ಮತ್ತೆ ತನ್ನ ಹೊಸ ಜಾಹೀರಾತಿನ ಮೂಲಕ ಗಮನ ಸೆಳೆದಿದೆ. ಕಳೆದ ಬಾರಿ ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಗೋಪುರ ಎನ್ನಿಸಿಕೊಂಡಿರುವ ಬುರ್ಜ್ ಖಲೀಪಾ (Burj Khalifa) ಗೋಪುರದ ತುತ್ತ ತುದಿಯಲ್ಲಿ ವೃತ್ತಿಪರ ಸ್ಕೈಡೈವಿಂಗ್ ಬೋಧಕರಾದ ನಿಕೋಲ್ ಸ್ಮಿತ್ ಲುಡ್ವಿಕ್ರನ್ನು ನಿಲ್ಲಿಸಿ ಜಾಹೀರಾತು ಮಾಡಿ, ವಿಡಿಯೋ ಹರಿಬಿಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದ ಎಮಿರೇಟ್ಸ್ ಇದೀಗ ಮತ್ತೊಮ್ಮೆ ಅಂಥದ್ದೇ ಸಾಹಸ ನಡೆಸಿದೆ. ಪ್ರಸಕ್ತ ಬಾರಿಯೂ ಕೂಡ ನಿಕೋಲ್ ಸ್ಮಿತ್ ಲುಡ್ವಿಕ್ ಬುರ್ಜ್ ಖಲೀಫಾದ ತುತ್ತತುದಿಯಲ್ಲಿಯೇ ಇದ್ದಾರೆ. ಆದರೆ ಈ ಬಾರಿ ಜಾಹೀರಾತು ಮತ್ತೊಂದು ಸ್ವರೂಪದಲ್ಲಿದೆ. ಬುರ್ಜ್ ಖಲೀಫಾ ತುತ್ತತುದಿಯಲ್ಲಿ ನಿಂತಿರುವ ನಿಕೋಲ್ ಸಮೀಪದಲ್ಲಿ ದೊಡ್ಡದಾದ ಎ 380 ವಿಮಾನ ಸುತ್ತುತ್ತಿದೆ. ನಿಕೋಲ್ರ ಹತ್ತಿರವೇ ಹಾರಾಟ ನಡೆಸುತ್ತಿದೆ.
ಹಿಂದಿನಂತೆಯೇ ಈ ಬಾರಿ ಕೂಡ ನಿಕೋಲ್ ಅವರು ಎಮಿರೇಟ್ಸ್ನ ಸಮವಸ್ತ್ರ ಧರಿಸಿದ್ದಾರೆ. ಕೈಯಲ್ಲಿ ಸಂದೇಶದ ಕಾರ್ಡ್ಗಳನ್ನು ಹಿಡಿದಿದ್ದಾರೆ..‘ನಾನಿನ್ನೂ ಇಲ್ಲಿಯೇ ಇದ್ದೇನೆ..ನನಗೆ ಇಲ್ಲಿಂದ ದುಬೈ ಎಕ್ಸ್ಪೋ ಕಾಣಿಸುತ್ತಿದೆ ಎಂಬ ಬೋರ್ಡ್ ತೋರಿಸುತ್ತಾರೆ. ಅಂದರೆ ವಿಶ್ವದ ಮಹಾನ್ ಶೋ ದುಬೈ ಎಕ್ಸ್ಪೋಕ್ಕೆ ಎಮಿರೇಟ್ಸ್ ಎ 380 ಎಂಬ ವಿಮಾನ ಹಾರಾಟ ನಡೆಸುತ್ತದೆ. ಅದರ ಅವಕಾಶ ಉಪಯೋಗಿಸಿಕೊಳ್ಳಬಹುದು ಎಂದು ಜಾಹೀರಾತು ಆಗಿದೆ. ನಿಕೋಲ್ ಒಂದುಕಡೆ ಸಂದೇಶದ ಬೋರ್ಡ್ಗಳನ್ನು ತೋರಿಸುತ್ತಿದ್ದರೆ, ಅಲ್ಲಿಯೇ ದುಬೈ ಎಕ್ಸ್ಪೋ ಎಂದು ಬರೆಯಲ್ಪಟ್ಟ, ವಿಮಾನ ಹಾರುವುದನ್ನು ವಿಡಿಯೋದಲ್ಲಿ ನೋಡಬಹುದು. ನಿಕೋಲ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಕೂಡ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಕಳೆದ ಬಾರಿ ಆಗಸ್ಟ್ನಲ್ಲಿ ಎಮಿರೇಟ್ಸ್ ಇಂಥದ್ದೇ ಒಂದು ಜಾಹೀರಾತನ್ನು ಸೃಷ್ಟಿಸಿತ್ತು. ಯುಕೆ (ಇಂಗ್ಲೆಂಡ್)ಯ ಕೆಂಪು ಲಿಸ್ಟ್ನಲ್ಲಿದ್ದ ಯುಎಇಯನ್ನು ಆಗಸ್ಟ್ನಲ್ಲಿ ಯುಕೆ ಅಂಬರ್ ಲಿಸ್ಟ್ಗೆ ಸೇರ್ಪಡೆಗೊಳಿಸಿತ್ತು. ಅದನ್ನು ಜಗತ್ತಿಗೆ ತಿಳಿಸಿ, ನೀವೂ ಎಮಿರೇಟ್ಸ್ನಲ್ಲಿ ಪ್ರಯಾಣಿಸಿ ಎಂದು ಹೇಳುವ ಸಲುವಾಗಿ ಅಂದು ನಿಕೋಸ್ 828 ಮೀಟರ್ ಎತ್ತರದಲ್ಲಿರುವ ಬುರ್ಜ್ ಖಲೀಪಾ ಏರಿದ್ದರು. ಹೀಗೆ ಬುರ್ಜ್ ಖಲೀಫಾ ಏರಿದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ನಿಕೋಲ್ ಪಾತ್ರರಾಗಿದ್ದರು. ಅವರೀಗ ಎಮಿರೇಟ್ಸ್ ಜಾಹೀರಾತಿಗಾಗಿ ಮತ್ತೊಮ್ಮೆ ಬುರ್ಜ್ ಖಲೀಫಾ ಏರಿದ್ದಾರೆ.
ಕಳೆದ ಬಾರಿ, ಆಗಸ್ಟ್ನಲ್ಲಿ ಚಿತ್ರೀಕರಿಸಲಾದ ಜಾಹೀರಾತು ಇಲ್ಲಿದೆ..
View this post on Instagram
ಇದನ್ನೂ ಓದಿ: ಮಕ್ಕಳ ಶೋನಲ್ಲಿ ನೋಟ್ ಬ್ಯಾನ್ ಮತ್ತು ಮೋದಿ ಬಗ್ಗೆ ತಮಾಷೆ: ಖಾಸಗಿ ವಾಹಿನಿಗೆ ಕೇಂದ್ರದಿಂದ ನೋಟಿಸ್
Published On - 9:32 am, Wed, 19 January 22