ಮಕ್ಕಳ ಶೋನಲ್ಲಿ ನೋಟ್​ ಬ್ಯಾನ್​ ಮತ್ತು ಮೋದಿ ಬಗ್ಗೆ ತಮಾಷೆ: ಖಾಸಗಿ ವಾಹಿನಿಗೆ ಕೇಂದ್ರದಿಂದ ನೋಟಿಸ್​

Junior Super Star Season 4: ಕಪ್ಪು ಹಣವನ್ನು ನಿರ್ಮೂಲನೆ ಮಾಡುವ ಸಲುವಾಗಿ ಒಬ್ಬ ರಾಜನು ನೋಟ್​ ಬ್ಯಾನ್​ ಮಾಡುತ್ತಾನೆ. ಆದರೂ ಕಪ್ಪು ಹಣ ತೊಲಗುವುದೇ ಇಲ್ಲ ಎಂಬುದನ್ನು ಆ ಸ್ಕಿಟ್​ನಲ್ಲಿ ಹೇಳಲಾಗಿತ್ತು.

ಮಕ್ಕಳ ಶೋನಲ್ಲಿ ನೋಟ್​ ಬ್ಯಾನ್​ ಮತ್ತು ಮೋದಿ ಬಗ್ಗೆ ತಮಾಷೆ: ಖಾಸಗಿ ವಾಹಿನಿಗೆ ಕೇಂದ್ರದಿಂದ ನೋಟಿಸ್​
ನರೇಂದ್ರ ಮೋದಿ
Follow us
TV9 Web
| Updated By: ಮದನ್​ ಕುಮಾರ್​

Updated on: Jan 19, 2022 | 9:51 AM

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಆಡಳಿತದ ಬಗ್ಗೆ ಪರ-ವಿರೋಧದದ ಚರ್ಚೆ ಇದ್ದೇ ಇದೆ. ಅವರು ಕೈಕೊಂಡ ಕೆಲವು ಕ್ರಮಗಳಿಗೆ ಮೊದಲಿನಿಂದಲೂ ಟೀಕೆ ಕೇಳಿಬಂದಿರುವುದು ಸಹಜ. ನೋಟ್​ ಬ್ಯಾನ್​, ಸಡನ್​ ಲಾಕ್​ಡೌನ್​ ಸೇರಿದಂತೆ ಅನೇಕ ವಿಚಾರಗಳನ್ನು ಜನರು ಖಂಡಿಸಿದ್ದುಂಟು. ಈಗ ಡಿಮಾನಿಟೈಸೇಷನ್​ (Demonetization) ಕುರಿತು ಮನರಂಜನಾ ಟಿವಿ ಕಾರ್ಯಕ್ರಮದಲ್ಲಿ ಸ್ಕಿಟ್​ ಮಾಡಲಾಗಿದೆ. ‘ಜೂನಿಯರ್​ ಸೂಪರ್​ ಸ್ಟಾರ್​ ಸೀಸನ್​ 4’ ರಿಯಾಲಿಟಿ ಶೋನಲ್ಲಿ ಮಕ್ಕಳಿಂದ ಅಭಿನಯಿಸಲ್ಪಟ್ಟ ಈ ಕಿರು ನಾಟಕಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ (Information And broadcasting Ministry) ದೂರು ನೀಡಲಾಗಿದೆ. ಹಾಗಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಖಾಸಗಿ ಟಿವಿ ವಾಹಿನಿಗೆ ನೋಟಿಸ್​ ಜಾರಿ ಆಗಿದೆ. 7 ದಿನದೊಳಗೆ ಪ್ರತಿಕ್ರಿಯಿಸಬೇಕು, ಇಲ್ಲವಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ. ಸದ್ಯ ಈ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ.

ತಮಿಳಿನ ಖಾಸಗಿ ವಾಹಿನಿಯಲ್ಲಿ ‘ಜೂನಿಯರ್​ ಸೂಪರ್​ ಸ್ಟಾರ್​ ಸೀಸನ್​ 4’ ಪ್ರಸಾರ ಆಗುತ್ತಿದೆ. ಜ.15ರಂದು ಈ ಶೋನಲ್ಲಿ ಒಂದು ಸ್ಕಿಟ್​ ಅನ್ನು ಮಕ್ಕಳು ಅಭಿನಯಿಸಿ ತೋರಿಸಿದರು. ಅದರಲ್ಲಿ ನರೇಂದ್ರ ಮೋದಿಯರವರ ಡಿಮಾನಿಟೈಸೇಷನ್​ ನಿರ್ಧಾರದ ಬಗ್ಗೆ ತಮಾಷೆ ಮಾಡಲಾಗಿತ್ತು. ಅದನ್ನು ತಮಿಳುನಾಡು ಬಿಜೆಪಿ ಐಟಿ ಮತ್ತು ಸೋಶಿಯಲ್​ ಮೀಡಿಯಾ ಘಟಕ ಖಂಡಿಸಿದೆ. ಘಟಕದ ಸಿಟಿಆರ್​ ನಿರ್ಮಲ್​ ಕುಮಾರ್​ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ಅದರ ಅನ್ವಯ ಸಚಿವಾಲಯದಿಂದ ವಾಹಿನಿಗೆ ನೋಟಿಸ್​ ಜಾರಿ ಮಾಡಲಾಗಿದೆ.

ಕಪ್ಪು ಹಣವನ್ನು ನಿರ್ಮೂಲನೆ ಮಾಡುವ ಸಲುವಾಗಿ ಒಬ್ಬ ರಾಜನು ನೋಟ್​ ಬ್ಯಾನ್​ ಮಾಡುತ್ತಾನೆ. ಆದರೂ ಕಪ್ಪು ಹಣ ತೊಲಗುವುದೇ ಇಲ್ಲ ಎಂಬುದನ್ನು ಆ ಸ್ಕಿಟ್​ನಲ್ಲಿ ಹೇಳಲಾಗಿತ್ತು. ಅದಕ್ಕೆ ಬಿಜೆಪಿಯಿಂದ ವಿರೋಧ ವ್ಯಕ್ತಿವಾಗಿದೆ. ಈ ಸ್ಕಿಟ್​ನ ವಿಡಿಯೋ ತುಣುಕು ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಮಕ್ಕಳಿಂದ ಉದ್ದೇಶಪೂರ್ವಕವಾಗಿಯೇ ಈ ಸ್ಕಿಟ್​ ಮಾಡಿಸಲಾಗಿದೆ ಎಂದು ಸಿಟಿಆರ್​ ನಿರ್ಮಲ್​ ಕುಮಾರ್​ ಆಕ್ಷೇಪಿಸಿದ್ದಾರೆ.

ಮಕ್ಕಳು ಈ ರೀತಿಯ ಸ್ಕಿಟ್​ ಮಾಡಿದಾಗ ಆ ಕಾರ್ಯಕ್ರಮದ ಜರ್ಡ್​ಗಳು ಜೋರಾಗಿ ನಕ್ಕಿರುವ ದೃಶ್ಯ ಪ್ರಸಾರ ಆಗಿದೆ. ಆದರೆ ಅದು ಎಡಿಟೆಡ್​​ ಎಂದು ಹೇಳಲಾಗುತ್ತಿದೆ. ‘ಮಕ್ಕಳ ಸ್ಕಿಟ್​ಗೆ ನಾವು ಹಾಗೆ ಪ್ರತಿಕ್ರಿಯೆ ನೀಡಿರಲಿಲ್ಲ. ವಾಹಿನಿಯ ಫೈನಲ್​ ಎಡಿಟ್​ ನೋಡಿ ನಮಗೆ ಶಾಕ್​ ಆಯ್ತು’ ಅಂತ ಕಾರ್ಯಕ್ರಮದ ಜಡ್ಜ್​ಗಳು ತಮಗೆ ಹೇಳಿದ್ದಾರೆ ಎಂದು ಸಿಟಿಆರ್​ ನಿರ್ಮಲ್​ ಕುಮಾರ್ ಅವರು ವಾಹಿನಿಗೆ ಬರೆದ ಪತ್ರದಲ್ಲಿ ತಿಳಿಸಿರುವ ಬಗ್ಗೆ ವರದಿ ಆಗಿದೆ.

ಇದನ್ನೂ ಓದಿ:

ಏಕಾಏಕಿ ರಿಯಾಲಿಟಿ ಶೋನಿಂದ ಹೊರ ನಡೆದ ಖ್ಯಾತ ನಿರೂಪಕ; ಮತ್ತೆ ಮರಳಲ್ಲ ಎಂದ ನಟ

ಬೇರೆಲ್ಲ ರಿಯಾಲಿಟಿ ಶೋಗಳಿಗೆ ಬೈಯ್ಯುವ ಸೋನು ನಿಗಮ್​ ಈ ಒಂದು ಶೋಗೆ ಜಡ್ಜ್​ ಆಗಲು ಒಪ್ಪಿದ್ದೇಕೆ?

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು