Divya Suresh: ಬಿಗ್​ ಬಾಸ್​ ಖ್ಯಾತಿಯ ದಿವ್ಯಾ ಸುರೇಶ್​ಗೆ ಅಪಘಾತ; ಈಗ ಹೇಗಿದೆ ಪರಿಸ್ಥಿತಿ?

ಸೋಮವಾರ ಅವರು ಬೈಕ್​ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.  ಅಪಘಾತದಲ್ಲಿ ಸಣ್ಣ ಪುಟ್ಟ ಗಾಯ ಆಗಿದೆ. ಅವರು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

Divya Suresh: ಬಿಗ್​ ಬಾಸ್​ ಖ್ಯಾತಿಯ ದಿವ್ಯಾ ಸುರೇಶ್​ಗೆ ಅಪಘಾತ; ಈಗ ಹೇಗಿದೆ ಪರಿಸ್ಥಿತಿ?
ದಿವ್ಯಾ ಸುರೇಶ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 19, 2022 | 5:26 PM

ನಟಿ ದಿವ್ಯಾ ಸುರೇಶ್ (Divya Suresh)​ ಅವರು ‘ಕನ್ನಡ ಬಿಗ್​ ಬಾಸ್​ ಸೀಸನ್​ 8’ಕ್ಕೆ  (Kannada Bigg Boss) ಎಂಟ್ರಿ ಕೊಡುವ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡರು. ಫಿನಾಲೆ ಪ್ರವೇಶಿಸುವ ಮೂಲಕ ದಿವ್ಯಾ ಸುರೇಶ್​ ಜನಪ್ರಿಯತೆ ಹೆಚ್ಚಿತು. ಮಂಜು ಪಾವಗಡ ಅವರ ಜತೆಗಿನ ಫ್ರೆಂಡ್​ಶಿಪ್​ ಮೂಲಕವೂ ಅವರು ಹೆಚ್ಚು ಸುದ್ದಿ ಆದರು. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ಅವರಿಗೆ ಸಾಕಷ್ಟು ಸಿನಿಮಾ ಆಫರ್​ಗಳು ಬರುತ್ತಿವೆ. ಕಲರ್ಸ್​ ಕನ್ನಡದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದಾರೆ. ಈಗ ಅವರಿಗೆ ರಸ್ತೆ ಅಪಘಾತವಾಗಿದೆ. ಅದೃಷ್ಟವಶಾತ್​ ಯಾವುದೇ ಅಪಾಯ ಸಂಭವಿಸಿಲ್ಲ. ಸಣ್ಣಪುಟ್ಟ ಗಾಯಗಳಾಗಿದೆ. ಈ ಬಗ್ಗೆ ದಿವ್ಯಾ ಮಾಹಿತಿ ಹಂಚಿಕೊಂಡಿದ್ದಾರೆ.

ಸೋಮವಾರ ಅವರು ಬೈಕ್​ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.  ಅಪಘಾತದಲ್ಲಿ ಸಣ್ಣ ಪುಟ್ಟ ಗಾಯ ಆಗಿದೆ. ಅವರು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ, ದಿವ್ಯಾ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೊರೊನಾ ವ್ಯಾಕ್ಸಿನ್ ಪಡೆದು ಬರುವಾಗ ಅಪಘಾತವಾಗಿದೆ ಎಂದು ತಿಳಿದು ಬಂದಿದೆ.

ಮುಖದ ಮೇಲೆ ದಿವ್ಯಾಗೆ ಸಣ್ಣ ಗಾಯ ಆಗಿದೆ. ಪ್ರಾಣಾಪಾಯದಿಂದ ದಿವ್ಯಾ ಸುರೇಶ್ ಪಾರಾಗಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೇಟಸ್​ ಮೂಲಕ ದಿವ್ಯಾ ಈ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ.

ಇತ್ತೀಚೆಗೆ ದಿವ್ಯಾ ಕಿರಿಕ್​ ಮಾಡಿಕೊಂಡಿದ್ದರು. ನೈಟ್ ಕರ್ಫ್ಯೂ ವೇಳೆ ಎಂಜಿ ರಸ್ತೆಯಲ್ಲಿ ಅವರು ಓಡಾಡುತ್ತಿದ್ದರು. ಈ ವೇಳೆ ದಿವ್ಯಾ ಸುರೇಶ್ ಹಾಗೂ ಅವರ ಸ್ನೇಹಿತರನ್ನು  ಪೊಲೀಸರು ಮನೆಗೆ ಕಳುಹಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ದಿವ್ಯಾ ಹಾಗೂ ಅವರ ಸ್ನೇಹಿತರು ಹೈಡ್ರಾಮಾ ನಡೆಸಿದ್ದು ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಅಲ್ಲದೇ ದಿವ್ಯಾ ಸ್ನೇಹಿತರು ಮಾಧ್ಯಮಗಳ ಕ್ಯಾಮೆರಾ ಕಿತ್ತುಕೊಳ್ಳಲು ಮುಂದಾಗಿದ್ದು, ಗೊಂದಲದ ವಾತಾವರಣಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: Divya Suresh: ನೈಟ್ ಕರ್ಫ್ಯೂ ವೇಳೆ ಬಿಗ್​ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್?; ವಿಡಿಯೋ ಇಲ್ಲಿದೆ

ಕುಡಿದ ಮತ್ತಿನಲ್ಲಿ ತಾನು ಸೆಲಿಬ್ರಿಟಿ ಎಂಬುದನ್ನು ಮರೆತ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್!

Published On - 2:10 pm, Wed, 19 January 22

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ