ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಶಾರುಖ್ ಫೋಟೋ ಸಾಕ್ಷಿ; ಆದರೆ ಅವರ ಪಕ್ಕ ಇರೋದು ಗೌರಿ ಖಾನ್ ಅಲ್ಲ
Lata Mangeshkar Funeral | Shah Rukh Khan: ಶಾರುಖ್ ಖಾನ್ ಜೊತೆ ನಿಂತಿರುವ ಮಹಿಳೆಯನ್ನು ಗೌರಿ ಖಾನ್ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಅದು ಗೌರಿ ಅಲ್ಲ. ಹಾಗಾದರೆ ಆ ಮಹಿಳೆ ಯಾರು?
ಭಾರತೀಯ ಚಿತ್ರರಂಗಕ್ಕೆ ಲತಾ ಮಂಗೇಶ್ಕರ್ ನೀಡಿದ ಕೊಡುಗೆ ದೊಡ್ಡದು. ಜಾತಿ, ಧರ್ಮ, ಗಡಿ, ಭಾಷೆಯನ್ನು ಮೀರಿ ಬೆಳೆದ ಮಹಾನ್ ಗಾಯಕಿ ಅವರು. ಅಂಥ ಲೆಜೆಂಡರಿ ವ್ಯಕ್ತಿಯನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ. ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ (Lata Mangeshkar Funeral) ಭಾನುವಾರ (ಫೆ.6) ಸಂಜೆ ನೆರವೇರಿತು. ಸಿನಿಮಾ, ರಾಜಕೀಯ, ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರಗಳ ಗಣ್ಯರು ಬಂದು ಲತಾಜೀ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ, ಸಚಿನ್ ತೆಂಡುಲ್ಕರ್, ಶಾರುಖ್ ಖಾನ್, ರಣಬೀರ್ ಕಪೂರ್, ಆಮಿರ್ ಖಾನ್ ಸೇರಿದಂತೆ ಅನೇಕರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಶಾರುಖ್ ಖಾನ್ (Shah Rukh Khan) ಅವರು ಪ್ರಾರ್ಥನೆ ಸಲ್ಲಿಸಿದ ರೀತಿ ತುಂಬ ಹೈಲೈಟ್ ಆಗಿದೆ. ಆ ಕ್ಷಣದ ಫೋಟೋ ಸಹ ವೈರಲ್ ಆಗಿದ್ದು. ಶಾರುಖ್ ಜೊತೆ ನಿಂತಿರುವ ಮಹಿಳೆಯನ್ನು ಗೌರಿ ಖಾನ್ (Gauri Khan) ಎಂದು ಅನೇಕರು ಭಾವಿಸಿದ್ದಾರೆ. ಆದರೆ ಅದು ಗೌರು ಖಾನ್ ಅಲ್ಲ. ಹಾಗಾದರೆ ಆ ಮಹಿಳೆ ಯಾರು? ಈ ಫೋಟೋ ವೈರಲ್ ಆಗಲು ಕಾರಣ ಏನು? ಇಲ್ಲಿದೆ ಫುಲ್ ಡಿಟೇಲ್ಸ್..
ಶಾರುಖ್ ಖಾನ್ ಅವರ ಸಿನಿಮಾಗಳ ಅನೇಕ ಗೀತೆಗಳಿಗೆ ಲತಾ ಮಂಗೇಶ್ಕರ್ ಧ್ವನಿ ಆಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಲತಾ ಬಗ್ಗೆ ಬಾಲಿವುಡ್ನ ಎಲ್ಲ ತಾರೆಯರಿಗೂ ಅಪಾರ ಗೌರವ ಮತ್ತು ಅಭಿಮಾನ. ಆ ಕಾರಣದಿಂದ ಶಾರುಖ್ ಖಾನ್ ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಈ ವೇಳೆ ಅವರು ಮುಸ್ಲಿಂ ಧರ್ಮದ ಪದ್ಧತಿಯಂತೆ ಪ್ರಾರ್ಥನೆ (ದುವಾ) ಸಲ್ಲಿಸಿದರು. ಅವರ ಪಕ್ಕದಲ್ಲಿ ಇದ್ದಿದ್ದು ಮ್ಯಾನೇಜರ್ ಪೂಜಾ ದದ್ಲಾನಿ. ಹಿಂದೂ ಧರ್ಮದವರಾದ ಪೂಜಾ ಅವರು ಹಿಂದೂ ಪದ್ಧತಿಯಂತೆ ಕೈ ಮುಗಿದು ಪ್ರಾರ್ಥಿಸಿದರು.
Correction: I have been informed that this is not Gauri Khan but his manager Pooja Dadlani. The idea of an inclusive, secular India paying homage to possibly one of the greatest Indians still remains poignant in an increasingly polarising nation.
— Bodhisattva #DalitLivesMatter ???️? (@insenroy) February 6, 2022
ಎರಡೂ ಧರ್ಮಗಳ ಸಂಪ್ರದಾಯ ಈ ಫೋಟೋದಲ್ಲಿ ಸೆರೆಯಾಗಿದೆ. ಇದೇ ಭಾರತದ ಸೌಂದರ್ಯ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ವಿವಿಧತೆಯಲ್ಲಿ ಏಕತೆ ಸಾರುವ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ತುಂಬ ವೈರಲ್ ಆಗುತ್ತಿದೆ. ಆದರೆ ಶಾರುಖ್ ಪಕ್ಕದಲ್ಲಿ ಇರುವುದು ಗೌರಿ ಖಾನ್ ಎಂದು ಅನೇಕರು ಭಾವಿಸಿದ್ದಾರೆ. ಶಾರುಖ್ ಜೊತೆ ಗೌರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರೂ ಸಹ ಅವರು ಹಿಂದೂ ಧರ್ಮದ ಸಂಪ್ರದಾಯಗಳನ್ನು ಬಿಟ್ಟಿಲ್ಲ. ಹಾಗಾಗಿ ಈ ಫೋಟೋದಲ್ಲಿ ಮಾಸ್ಕ್ ಧರಿಸಿರುವ ಮಹಿಳೆ ಗೌರಿ ಎಂದು ಬಹುತೇಕರು ಅಂದುಕೊಂಡರು. ಗಮನಿಸಿ ನೋಡಿದಾಗ ಅದು ಗೌರಿ ಅಲ್ಲ ಎಂಬುದು ತಿಳಿಯಿತು. ಮ್ಯಾನೇಜರ್ ಪೂಜಾ ದದ್ಲಾನಿ ಅವರ ಜೊತೆಯಲ್ಲಿ ಬಂದು ಶಾರುಖ್ ಖಾನ್ ಅವರು ಲತಾ ಮಂಗೇಶ್ಕರ್ಗೆ ನಮನ ಸಲ್ಲಿಸಿದ್ದಾರೆ.
ವಿವಾದ ಸೃಷ್ಟಿಸಿದ ವಿಡಿಯೋ:
ಲತಾ ಮಂಗೇಶ್ಕರ್ ಅವರ ಮೃತದೇಹದ ಎದುರಿನಲ್ಲಿ ನಿಂತು ಪ್ರಾರ್ಥನೆ ಮಾಡುವಾಗ ಶಾರುಖ್ ಖಾನ್ ಅವರು ಮಾಸ್ಕ್ ಧರಿಸಿದ್ದರು. ಲೆಜೆಂಡರಿ ಗಾಯಕಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥನೆ (ದುವಾ) ಮಾಡಿದರು. ಬಳಿಕ ಮಾಸ್ಕ್ ತೆಗೆದು ಪಾರ್ಥಿವ ಶರೀರದ ಕಡೆಗೆ ಗಾಳಿ ಊದಿದರು. ಮುಸ್ಲಿಂ ಸಮುದಾಯದಲ್ಲಿ ಈ ರೀತಿ ಮಾಡುವ ಪದ್ಧತಿ ಇದೆ. ಆದರೆ ಅವರು ಗಾಳಿ ಊದಿದ್ದನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಲತಾಜೀ ಪಾರ್ಥಿವ ಶರೀರಕ್ಕೆ ಶಾರುಖ್ ಖಾನ್ ಉಗಿದರು ಎಂದು ಕೆಲವರು ಆರೋಪಿಸಿದ್ದಾರೆ.
ಇದನ್ನೂ ಓದಿ:
ಲತಾಜೀ ಮೃತದೇಹಕ್ಕೆ ಶಾರುಖ್ ಉಗಿದರು ಎಂಬ ಆರೋಪ; ವೈರಲ್ ವಿಡಿಯೋದಲ್ಲಿ ನಿಜಕ್ಕೂ ಇರೋದೇನು?
ಲತಾಜೀ ಹಾಡೋದು ಕಡಿಮೆ ಮಾಡಿದ್ದಕ್ಕೆ ಇದೆ ಮುಖ್ಯ ಕಾರಣ; ಲೆಜೆಂಡರಿ ಗಾಯಕಿಯ ನೇರ ಮಾತು ಇಲ್ಲಿದೆ..