ಲತಾಜೀ ಮೃತದೇಹಕ್ಕೆ ಶಾರುಖ್ ಉಗಿದರು ಎಂಬ ಆರೋಪ; ವೈರಲ್ ವಿಡಿಯೋದಲ್ಲಿ ನಿಜಕ್ಕೂ ಇರೋದೇನು?
ಹರಿಯಾಣದ ಬಿಜೆಪಿ ಮುಖಂಡ ಅರುಣ್ ಯಾದವ್ ಮಾಡಿದ ಒಂದು ಟ್ವೀಟ್ನಿಂದಾಗಿ ವಿವಾದ ಹುಟ್ಟಿಕೊಂಡಿದೆ. ಶಾರುಖ್ ಖಾನ್ ಪ್ರಾರ್ಥನೆ (ದುವಾ) ಮಾಡಿ, ಮಾಸ್ಕ್ ತೆಗೆದು ಗಾಳಿ ಊದಿದ ವಿಡಿಯೋ ವೈರಲ್ ಆಗಿದೆ.
ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರ ನಿಧನದ ಸುದ್ದಿ ಕೇಳಿ ಎಲ್ಲರಿಗೂ ನೋವಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಜೊತೆಗೆ ಲತಾಜೀ ಅವರಿಗೆ ಹೆಚ್ಚು ಒಡನಾಟ ಇತ್ತು. ಹಾಗಾಗಿ ಅವರ ಅಂತ್ಯಕ್ರಿಯೆಯಲ್ಲಿ (, Lata Mangeshkar Funeral) ಅನೇಕ ಮಂದಿ ಸ್ಟಾರ್ ಕಲಾವಿದರು ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಶಾರುಖ್ ಖಾನ್, ಆಮಿರ್ ಖಾನ್, ರಣಬೀರ್ ಕಪೂರ್, ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವರು ಲತಾ ಮಂಗೇಶ್ಕರ್ಗೆ ಅಂತಿಮ ನಮನ ಸಲ್ಲಿಸಿದರು. ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಭಾನುವಾರ (ಫೆ.6) ಸಂಜೆ ಅಂತ್ಯಕ್ರಿಯೆ ನೆರವೇರಿತು. ಈ ಸಂದರ್ಭದಲ್ಲಿ ನಟ ಶಾರುಖ್ ಖಾನ್ (Shah Rukh Khan) ನಡೆದುಕೊಂಡ ರೀತಿ ಕೆಲವರಿಗೆ ಅಚ್ಚರಿ ಮೂಡಿಸಿದೆ. ಮ್ಯಾನೇಜರ್ ಪೂಜಾ ದದ್ಲಾನಿ ಜೊತೆ ಬಂದ ಅವರು ಲತಾಜೀ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು. ಅದರ ವಿಡಿಯೋ ಕೂಡ ವೈರಲ್ ಆಗಿದೆ. ಅಂತಿಮ ನಮನ ಸಲ್ಲಿಸುವ ವೇಳೆ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರದ ಮೇಲೆ ಶಾರುಖ್ ಉಗಿದರು ಎಂಬ ಆರೋಪವನ್ನು ಕೆಲವರು ಹೊರಿಸಿದ್ದಾರೆ. ಈ ಕುರಿತಂತೆ ಚರ್ಚೆ ಶುರುವಾಗಿದೆ.
ಲತಾ ಮಂಗೇಶ್ಕರ್ ಅವರ ಮೃತದೇಹದ ಎದುರಿನಲ್ಲಿ ನಿಂತು ಪ್ರಾರ್ಥನೆ ಮಾಡುವಾಗ ಶಾರುಖ್ ಖಾನ್ ಅವರು ಮಾಸ್ಕ್ ಧರಿಸಿದ್ದರು. ಲೆಜೆಂಡರಿ ಗಾಯಕಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥನೆ (ದುವಾ) ಮಾಡಿದರು. ಬಳಿಕ ಮಾಸ್ಕ್ ತೆಗೆದು ಪಾರ್ಥಿವ ಶರೀರದ ಕಡೆಗೆ ಗಾಳಿ ಊದಿದರು. ಮುಸ್ಲಿಂ ಸಮುದಾಯದಲ್ಲಿ ಈ ರೀತಿ ಮಾಡುವ ಪದ್ಧತಿ ಇದೆ. ಆದರೆ ಅವರು ಗಾಳಿ ಊದಿದ್ದನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಲತಾಜೀ ಪಾರ್ಥಿವ ಶರೀರಕ್ಕೆ ಶಾರುಖ್ ಖಾನ್ ಉಗಿದರು ಎಂದು ಕೆಲವರು ಆರೋಪಿಸಿದ್ದಾರೆ.
ಹರಿಯಾಣದ ಬಿಜೆಪಿ ಮುಖಂಡ ಅರುಣ್ ಯಾದವ್ ಮಾಡಿದ ಒಂದು ಟ್ವೀಟ್ನಿಂದಾಗಿ ವಿವಾದ ಹುಟ್ಟಿಕೊಂಡಿದೆ. ಶಾರುಖ್ ಪ್ರಾರ್ಥನೆ (ದುವಾ) ಮಾಡಿ, ಮಾಸ್ಕ್ ತೆಗೆದು ಗಾಳಿ ಊದಿದ ವಿಡಿಯೋವನ್ನು ಅರುಣ್ ಯಾದವ್ ಶೇರ್ ಮಾಡಿಕೊಂಡಿದ್ದಾರೆ. ‘ಅವರು ಉಗಿದ್ರಾ’ ಎಂದು ಆ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ. ಇದನ್ನು ನೋಡಿದ ಅನೇಕರು ಶಾರುಖ್ ವಿರುದ್ಧ ಕಿಡಿ ಕಾರಿದ್ದಾರೆ. ಲೆಜೆಂಡರಿ ಗಾಯಕಿಗೆ ಶಾರುಖ್ ಅಗೌರವ ತೋರಿದ್ದಾರೆ ಎಂದು ಕೆಲವರು ಗರಂ ಆಗಿದ್ದಾರೆ. ಆದರೆ ಗಾಳಿ ಊದಿದ್ದನ್ನು ತಪ್ಪಾಗಿ ಅರ್ಥೈಸಿ, ವಿವಾದಕ್ಕೆ ಕಾರಣ ಆಗುವಂತೆ ಮಾಡಿದ ಅರುಣ್ ಯಾದವ್ ಅವರನ್ನು ಅನೇಕರು ತರಾಟೆಗೆ ತೆಗೆದುಕೊಂಡಿದ್ದಾರೆ.
क्या इसने थूका है ❓ pic.twitter.com/RZOa2NVM5I
— Arun Yadav (@beingarun28) February 6, 2022
Shah Rukh Khan reading a dua and blowing on Lata ji’s mortal remains for protection and blessings in the next life. Cannot comprehend the level of bitterness of those saying he is spitting. pic.twitter.com/JkCTcesl86
— Samina ✨ (@SRKsSamina_) February 6, 2022
ಲತಾ ಮಂಗೇಶ್ಕರ್ ನಿಧನಕ್ಕೆ ಕಾರಣವೇನು?
ಕೊವಿಡ್ ಮತ್ತು ನ್ಯೂಮೋನಿಯ ಕಾರಣದಿಂದ ಇತ್ತೀಚೆಗೆ ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 29 ದಿನಗಳ ಕಾಲ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಅವರಿಗೆ 92 ವರ್ಷ ವಯಸ್ಸಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸುವುದು ಕಷ್ಟವಾಯಿತು. ಹಲವು ದಿನಗಳ ಕಾಲ ಅವರು ಐಸಿಯುನಲ್ಲಿದ್ದರು. ವೈದ್ಯರ ಸತತ ಪ್ರಯತ್ನದ ನಡುವೆಯೂ ಲತಾ ಮಂಗೇಶ್ಕರ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ:
‘ಬೆಳ್ಳನೆ ಬೆಳಗಾಯಿತು..’ ಎಂದು ಕನ್ನಡಿಗರ ಮನ ಗೆದ್ದಿದ್ದ ಲತಾ ಮಂಗೇಶ್ಕರ್; ಇಲ್ಲಿದೆ ಅವರ ಕನ್ನಡ ಗೀತೆ ಬಗ್ಗೆ ವಿವರ
ಲತಾ ಮಂಗೇಶ್ಕರ್ ಜತೆ ಬಾಲಿವುಡ್ ತಾರೆಯರ ಸವಿ ನೆನಪು; ಆ ಕ್ಷಣಗಳನ್ನು ನೆನಪಿಸಿದ ಫೋಟೋಗಳು
Published On - 11:51 am, Mon, 7 February 22