AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್​ ಖಾನ್​ ವಿರುದ್ಧ ರವೀನಾ ಟಂಡನ್​ ಸೇಡು; ದಶಕಗಳ ಬಳಿಕ ಬಾಯ್ಬಿಟ್ಟ ‘ಕೆಜಿಎಫ್​ 2’ ನಟಿ

‘ಅಂದಾಜ್​ ಅಪ್ನ ಅಪ್ನ’ ಶೂಟಿಂಗ್​ ಸಮಯದಲ್ಲಿ ಒಂದು ಘಟನೆ ನಡೆಯಿತು. ಆ ಬಳಿಕ ರವೀನಾ ಟಂಡನ್​ ಅವರು ಆಮಿರ್​ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದರು.

ಆಮಿರ್​ ಖಾನ್​ ವಿರುದ್ಧ ರವೀನಾ ಟಂಡನ್​ ಸೇಡು; ದಶಕಗಳ ಬಳಿಕ ಬಾಯ್ಬಿಟ್ಟ ‘ಕೆಜಿಎಫ್​ 2’ ನಟಿ
ಆಮಿರ್​ ಖಾನ್​, ರವೀನಾ ಟಂಡನ್​
TV9 Web
| Edited By: |

Updated on:Feb 06, 2022 | 8:20 AM

Share

ಹಲವು ಸ್ಟಾರ್​ ಕಲಾವಿದರ ಜೊತೆಗೆ ನಟಿಸಿದ ರವೀನಾ ಟಂಡನ್ (Raveena Tandon) ಅವರು ಒಂದು ಕಾಲದಲ್ಲಿ ಬಾಲಿವುಡ್​ನ ಬಹುಬೇಡಿಕೆಯ ಹೀರೋಯಿನ್​ ಆಗಿದ್ದರು. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದರು. ಈಗ ಅವರು ‘ಕೆಜಿಎಫ್​: ಚಾಪ್ಟರ್​ 2’ (KGF 2) ಚಿತ್ರದಲ್ಲಿ ಅಭಿನಯಿಸಿದ್ದು, ಆ ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ರವೀನಾ ಟಂಡನ್​ ಅವರು ಹಿಂದಿಯ ‘ಸರಿಗಮಪ’ ರಿಯಾಲಿಟಿ ಶೋಗೆ ಜಡ್ಜ್​ ಆಗಿ ಹೋಗಿದ್ದರು. ಆಗ ಅವರು ಹಳೇ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ರವೀನಾ ಮತ್ತು ಆಮಿರ್​ ಖಾನ್ (Aamir Khan)​ ನಟನೆಯ ‘ಅಂದಾಜ್​ ಅಪ್ನ ಅಪ್ನ’ ಸಿನಿಮಾದ ಹಾಡನ್ನು ಸ್ಪರ್ಧಿಯೊಬ್ಬರು ಈ ಶೋನಲ್ಲಿ ಹಾಡಿದರು. ಆಗ ರವೀನಾ ಟಂಡನ್​ ಅವರು ನೆನಪಿನ ಪುಟ ತೆರೆದರು. ಆ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ಆಮಿರ್​ ಖಾನ್​ ವಿರುದ್ಧ ರವೀನಾ ಟಂಡನ್​ ಸೇಡು ತೀರಿಸಿಕೊಂಡಿದ್ದರು. ಆದರೆ ಅದು ದ್ವೇಷದ ಸೇಡಲ್ಲ. ಎಲ್ಲವೂ ನಡೆದಿದ್ದು ತಮಾಷೆಗಾಗಿ. ಆ ಘಟನೆಯನ್ನು ಈಗ ರವೀನಾ ಟಂಡನ್​ ನೆನಪು ಮಾಡಿಕೊಂಡಿದ್ದಾರೆ.

‘ಅಂದಾಜ್​ ಅಪ್ನ ಅಪ್ನ’ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ಆಮಿರ್​ ಖಾನ್​ ಅವರು ಪ್ರ್ಯಾಂಕ್​ ಮಾಡುತ್ತಿದ್ದರು. ಒಮ್ಮೆ ರವೀನಾಗೂ ಪ್ರ್ಯಾಂಕ್​ ಮಾಡಲಾಗಿತ್ತು. ‘ಕುದರೆ ಗಾಡಿಯ ಮೇಲೆ ನಾವು ಚಿತ್ರೀಕರಣ ಮಾಡುತ್ತಿದ್ದೆವು. ಆಮಿರ್​ ಖಾನ್​ ಅವರಿ ಇಡೀ ತಂಡದ ಜೊತೆ ಸೇರಿಕೊಂಡು ನನ್ನ ಮೇಲೆ ಪ್ರ್ಯಾಂಕ್​ ಮಾಡಲು ಸಿದ್ಧರಾಗಿದ್ದರು. ಬಿಸಿ ಟೀ ಲೋಟ ನನ್ನ ಮೇಲೆ ಬೀಳುತ್ತಿರುವಂತೆ ಅವರು ನಟಿಸಿದರು. ಆ ಪ್ರ್ಯಾಂಕ್​ನಿಂದ ನಾನು ಹೆದರಿದೆ’ ಎಂದು ತಾವು ಪ್ರ್ಯಾಂಕ್​ಗೆ ಒಳಗಾದ ಘಟನೆನ್ನು ರವೀನಾ ಟಂಡನ್​ ಮೆಲುಕು ಹಾಕಿದ್ದಾರೆ.

ಈ ಘಟನೆ ನಡೆದ ಬಳಿಕ ರವೀನಾ ಟಂಡನ್​ ಅವರು ಆಮಿರ್​ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು. ‘ಎಲ್ಲರೂ ನನ್ನನ್ನು ನೋಡಿ ನಕ್ಕರು. ಅದೇ ರೀತಿ ನಾನು ಕೂಡ ಆಮಿರ್​ ಖಾನ್​ಗೆ ಪ್ರ್ಯಾಂಕ್​ ಮಾಡಿದೆ. ಆಗ ವ್ಯಾನಿಟಿ ವ್ಯಾನ್​ ಇರುತ್ತಿರಲಿಲ್ಲ. ವಾಶ್​ರೂಮ್​ಗಾಗಿ ಆಮಿರ್​ ಖಾನ್​ ಸ್ವಲ್ಪ ದೂರಕ್ಕೆ ತೆರಳಿದ್ದರು. ಆಗ ವಾತಾವರಣ ಸರಿಯಿಲ್ಲ ಎಂಬ ಕಾರಣಕ್ಕೆ ನಿರ್ದೇಶಕರು ಶೂಟಿಂಗ್​ ಪ್ಯಾಕಪ್​ ಮಾಡಿದರು. ಆದರೆ ಅದು ಆಮಿರ್​​ ಖಾನ್​ಗೆ ಗೊತ್ತಿರಲಿಲ್ಲ. ಅವರಿಗೆ ಕಷ್ಟ ಆಗುವಂತಹ ಒಂದು ಡ್ಯಾನ್ಸ್​ ಸ್ಟೆಪ್​ ಅನ್ನು ಪ್ರಾಕ್ಟೀಸ್​ ಮಾಡಲು ಹೇಳಿ ಎಂದು ನೃತ್ಯನಿರ್ದೇಶಕರ ಬಳಿ ಮನವಿ ಮಾಡಿಕೊಂಡೆ. ಅದಕ್ಕೆ ಕೊರಿಯೋಗ್ರಾಫರ್​ ಒಪ್ಪಿದರು. ಅದನ್ನು ನಿಜ ಎಂದು ತಿಳಿದ ಆಮಿರ್​ ಖಾನ್​ ಸತತ 30 ನಿಮಿಷ ನಿಮಿಷ ಡ್ಯಾನ್ಸ್​ ಪ್ರಾಕ್ಟೀಸ್​ ಮಾಡಿದ್ದರು. ಆ ಘಟನೆ ನೆನಪಿಸಿಕೊಂಡಾಗಲೆಲ್ಲ ನನಗೆ ನಗು ಬರುತ್ತದೆ’ ಎಂದು ರವೀನಾ ಟಂಡನ್​ ಹೇಳಿದ್ದಾರೆ.

ಇದನ್ನೂ ಓದಿ:

21ನೇ ವಯಸ್ಸಿನಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದ ರವೀನಾ ಟಂಡನ್​ ಆ ವಿಚಾರ ಮುಚ್ಚಿಟ್ಟಿದ್ದೇಕೆ?

‘ಕೆಜಿಎಫ್​ 2’ ರಿಲೀಸ್​ಗೂ ಮುನ್ನವೇ ಗುಡ್​ ನ್ಯೂಸ್​; ಮತ್ತೆ ಒಂದಾಗ್ತಾರೆ ಸಂಜಯ್​ ದತ್​-ರವೀನಾ ಟಂಡನ್

Published On - 8:11 am, Sun, 6 February 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್