21ನೇ ವಯಸ್ಸಿನಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದ ರವೀನಾ ಟಂಡನ್​ ಆ ವಿಚಾರ ಮುಚ್ಚಿಟ್ಟಿದ್ದೇಕೆ?

ಅದು 1995ರ ಸಮಯ. ಆಗ ರವೀನಾ ಟಂಡನ್​ ಅವರಿಗೆ 21 ವರ್ಷ ವಯಸ್ಸು. ಇನ್ನೂ ಮದುವೆ ಆಗಿರಲಿಲ್ಲ. ಆಗಲೇ ಅವರು ಛಾಯಾ ಮತ್ತು ಪೂಜಾ ಎಂಬಿಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದುಕೊಂಡಿದ್ದರು.

21ನೇ ವಯಸ್ಸಿನಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದ ರವೀನಾ ಟಂಡನ್​ ಆ ವಿಚಾರ ಮುಚ್ಚಿಟ್ಟಿದ್ದೇಕೆ?
ಮಕ್ಕಳ ಜೊತೆ ರವೀನಾ ಟಂಡನ್​
Follow us
TV9 Web
| Updated By: ಮದನ್​ ಕುಮಾರ್​

Updated on: Jan 27, 2022 | 9:05 AM

ನಟಿ ರವೀನಾ ಟಂಡನ್​ (Raveena Tandon) ಅವರು ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. 1990ರ ದಶಕದಲ್ಲಿ ಅವರು ಬ್ಯಾಕ್​ ಟು ಬ್ಯಾಕ್​ ಹಿಟ್​ ಸಿನಿಮಾಗಳನ್ನು ನೀಡಿದರು. ಈಗಲೂ ಅವರಿಗೆ ಸಖತ್​ ಬೇಡಿಕೆ ಇದೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾದಲ್ಲಿ ರಮಿಕಾ ಸೇನ್​ ಎಂಬ ಪಾತ್ರದಲ್ಲಿ ಅವರು ನಟಿಸಿದ್ದು, ಆ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ‘ಉಪೇಂದ್ರ’ ಚಿತ್ರದ ಬಳಿಕ ಇದು ಕನ್ನಡದಲ್ಲಿ ರವೀನಾ ಟಂಡನ್​ ಅವರಿಗೆ 2ನೇ ಸಿನಿಮಾ. ಇನ್ನು, ಅವರ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್​ ಸದಾ ಆಸಕ್ತಿ ತೋರಿಸುತ್ತಾರೆ. ಒಂದು ಕಾಲದಲ್ಲಿ ರವೀನಾ ಟಂಡನ್​ ಅವರು ತಮ್ಮ ವೈಯಕ್ತಿಕ ಜೀವನದ ಅತಿ ಮುಖ್ಯ ವಿಚಾರವನ್ನೇ ಮುಚ್ಚಿಟ್ಟಿದ್ದರು. ಅಚ್ಚರಿ ಎಂದರೆ ತಮ್ಮ 21ನೇ ವಯಸ್ಸಿನಲ್ಲಿಯೇ ಅವರು ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡಿದ್ದರು. ಆದರೆ ಆ ವಿಷಯವನ್ನು ಅವರು ಹಲವು ವರ್ಷಗಳ ಕಾಲ ಗುಟ್ಟಾಗಿ ಇಟ್ಟಿದ್ದರು. ದತ್ತು ಪುತ್ರಿಯರ ವಿಚಾರದಲ್ಲಿ ತಾವು ಗೌಪ್ಯತೆ ಕಾಪಾಡಿಕೊಂಡಿದ್ದು ಯಾಕೆ ಎಂಬುದರ ಕುರಿತು ರವೀನಾ ಟಂಡನ್​ ಮಾತನಾಡಿದ್ದಾರೆ. ಈ ಕುರಿತು ‘ಹಿಂದುಸ್ತಾನ್​ ಟೈಮ್ಸ್​’ ಲೇಖನ ಪ್ರಕಟಿಸಿದೆ.

ಅದು 1995ರ ಸಮಯ. ಆಗ ರವೀನಾ ಟಂಡನ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು ನಾಲ್ಕು ವರ್ಷ ಕಳೆದಿತ್ತು. ಅಷ್ಟರಲ್ಲಾಗಲೇ ಅವರು ತುಂಬ ಫೇಮಸ್​ ಆಗಿದ್ದರು. ಪತ್ತರ್​ ಕೆ ಫೂಲ್​, ಮೊಹ್ರಾ, ದಿಲ್​ವಾಲೆ, ಲಾಡ್ಲಾ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ಕೇವಲ 21 ವರ್ಷ ವಯಸ್ಸು. ಇನ್ನೂ ಮದುವೆ ಆಗಿರಲಿಲ್ಲ. ಆಗ ಅವರು ಛಾಯಾ ಮತ್ತು ಪೂಜಾ ಎಂಬಿಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದುಕೊಂಡರು. ಆದರೆ ಮಕ್ಕಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ನಿರಾಕರಿಸಿದರು. ಅದಕ್ಕೆ ಕಾರಣ; ಟ್ಯಾಬ್ಲಾಯ್ಡ್ ​ಪ್ರತಿಕೆಗಳ ಭಯ. ಮದುವೆ ಆಗದೆಯೇ ಮಕ್ಕಳನ್ನು ದತ್ತು ಪಡೆದ ನಟಿಯ ಬಗ್ಗೆ ಆ ಪತ್ರಿಕೆಗಳು ಕೆಟ್ಟ ವರದಿ ಪ್ರಕಟ ಮಾಡುತ್ತವೆ ಎಂಬ ಅಳುಕು ರವೀನಾ ಟಂಡನ್​ ಅವರಿಗೆ ಇತ್ತು.

‘ಅದು ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ಕೆಟ್ಟ ಕಾಲ ಆಗಿತ್ತು. ತುಂಬ ಕೆಟ್ಟ ಹೆಡ್​ಲೈನ್​ ಮತ್ತು ಲೇಖನಗಳನ್ನು ಬರೆಯುತ್ತಿದ್ದರು. ಯಾವ ವಿಚಾರ ಇಟ್ಟುಕೊಂಡು ಬೇಕಿದ್ದರೂ ಹಗರಣ ಸೃಷ್ಟಿ ಮಾಡುತ್ತಿದ್ದರು. ನಾನು ಹೆಣ್ಣುಮಕ್ಕಳನ್ನು ದತ್ತು ಪಡೆದಾಗ ಅವರ ಬಗ್ಗೆ ಮಾತನಾಡಲು ಇಷ್ಟಪಡಲಿಲ್ಲ. ಅವರು 10ನೇ ತರಗತಿ ಮುಗಿಸಿದ ನಂತರವೇ ನನ್ನ ಜೊತೆ ಶೂಟಿಂಗ್​ಗೆ ಬರಲು ಆರಂಭಿಸಿದರು. ಈ ಹುಡುಗಿಯರು ಯಾರು ಅಂತ ಎಲ್ಲರೂ ಕೇಳಲು ಶುರು ಮಾಡಿದರು. ಆಗ ನಾನು ಎಲ್ಲವನ್ನೂ ಹೇಳಿದೆ’ ಎಂದಿದ್ದಾರೆ ರವೀನಾ ಟಂಡನ್​.

‘ಮಕ್ಕಳ ಬಗ್ಗೆ ಏನೇ ಹೇಳಿದರೂ ಅದನ್ನು ಇಟ್ಟುಕೊಂಡು ಕೆಟ್ಟದಾಗಿ ಬರೆಯುತ್ತಾರೆ ಎಂಬ ಭಯ ನನ್ನಲ್ಲಿ ಇತ್ತು. ಈಕೆ ಗುಟ್ಟಾಗಿ ಮಗು ಮಾಡಿಕೊಂಡಿದ್ದಾಳೆ ಅಂತ ಮ್ಯಾಗಜಿನ್​ನವರು ಹೇಳಿಬಿಡುತ್ತಿದ್ದರು. ಮಕ್ಕಳ ತಂದೆ ಯಾರು ಅಂತಲೂ ಊಹಿಸಲು ಶುರು ಮಾಡುತ್ತಿದ್ದರು. ಅದು ಅಂಥ ಕಾಲ ಆಗಿತ್ತು. ಅದರಿಂದ ತಪ್ಪಿಸಿಕೊಳ್ಳಲು ನಾನು ಮೌನವಾಗಿದ್ದೆ’ ಎಂದು ರವೀನಾ ಟಂಡನ್​ ಹೇಳಿದ್ದಾರೆ.

ಇದನ್ನೂ ಓದಿ:

‘ಕೆಜಿಎಫ್​ 2’ ರಿಲೀಸ್​ಗೂ ಮುನ್ನವೇ ಗುಡ್​ ನ್ಯೂಸ್​; ಮತ್ತೆ ಒಂದಾಗ್ತಾರೆ ಸಂಜಯ್​ ದತ್​-ರವೀನಾ ಟಂಡನ್

ರವೀನಾ ಟಂಡನ್​ ಜನ್ಮದಿನ; ‘ಕೆಜಿಎಫ್​ 2’, ‘ಉಪೇಂದ್ರ’ ಚಿತ್ರದ ನಟಿಗೆ ದೊಡ್ಡ ಪಾರ್ಟಿ ಅಂದ್ರೆ ಹಿಡಿಸಲ್ಲ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ