AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raveena Tandon Birthday: ರವೀನಾ ಟಂಡನ್​ ಜನ್ಮದಿನ; ‘ಕೆಜಿಎಫ್​ 2’, ‘ಉಪೇಂದ್ರ’ ಚಿತ್ರದ ನಟಿಗೆ ದೊಡ್ಡ ಪಾರ್ಟಿ ಅಂದ್ರೆ ಹಿಡಿಸಲ್ಲ

Happy Birthday Raveena Tandon: ಖ್ಯಾತ ನಟಿ ರವೀನಾ ಟಂಡನ್​ ಅವರ 47ನೇ ವರ್ಷದ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ‘ಉಪೇಂದ್ರ’ ಸಿನಿಮಾದಲ್ಲಿ ಕೀರ್ತಿ ಪಾತ್ರ ಮಾಡಿದ್ದ ರವೀನಾ ಅವರು ‘ಕೆಜಿಎಫ್​ 2’ ಚಿತ್ರದಲ್ಲಿ ರಮೀಕಾ ಸೇನ್​ ಆಗಿ ಮಿಂಚಲಿದ್ದಾರೆ.

Raveena Tandon Birthday: ರವೀನಾ ಟಂಡನ್​ ಜನ್ಮದಿನ; ‘ಕೆಜಿಎಫ್​ 2’, ‘ಉಪೇಂದ್ರ’ ಚಿತ್ರದ ನಟಿಗೆ ದೊಡ್ಡ ಪಾರ್ಟಿ ಅಂದ್ರೆ ಹಿಡಿಸಲ್ಲ
ರವೀನಾ ಟಂಡನ್​
TV9 Web
| Edited By: |

Updated on:Oct 26, 2021 | 12:49 PM

Share

Raveena Tandon Birthday | ಬಾಲಿವುಡ್​ ಬೆಡಗಿ ರವೀನಾ ಟಂಡನ್ (Raveena Tandon)​ ಅವರಿಗೆ ಇಂದು (ಅ.26) ಹುಟ್ಟುಹಬ್ಬದ ಸಂಭ್ರಮ. ‘ಉಪೇಂದ್ರ’ ಸಿನಿಮಾದಲ್ಲಿ ಕೀರ್ತಿ ಎಂಬ ಪಾತ್ರ ಮಾಡಿ ಕನ್ನಡ ಸಿನಿಪ್ರಿಯರಿಗೆ ಪರಿಚಿತರಾಗಿದ್ದ ಅವರು ಈಗ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಚಿತ್ರದಲ್ಲಿ ರಮಿಕಾ ಸೇನ್​ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಮತ್ತೆ ಸ್ಯಾಂಡಲ್​ವುಡ್​ ಕಡೆಗೆ ಮುಖ ಮಾಡುತ್ತಿದ್ದಾರೆ. 47ನೇ ವಸಂತಕ್ಕೆ ಕಾಲಿಟ್ಟಿರುವ ಅವರಿಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ‘ಕೆಜಿಎಫ್​ 2’ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಸ್​ ಕೂಡ ಬರ್ತ್​ಡೇ ವಿಶ್​ ಮಾಡಿದೆ.

90ರ ದಶಕದಲ್ಲಿ ಬಾಲಿವುಡ್​ನಲ್ಲಿ ಕಿಚ್ಚು ಹಚ್ಚಿದವರು ರವೀನಾ ಟಂಡನ್​. ‘ಅಂದಾಜ್​ ಅಪ್ನ ಅಪ್ನ’, ‘ಮೊಹ್ರಾ’, ‘ಲಾಡ್ಲಾ’ ಮುಂತಾದ ಸಿನಿಮಾಗಳಲ್ಲಿ ಅವರು ಮಿಂಚಿದರು. ‘ತು ಚೀಸ್​ ಬಡೀ ಹೈ ಮಸ್ತ್​ ಮಸ್ತ್​..’ ಎಂದು ಬಾಲಿವುಡ್​ನಲ್ಲಿ ಫೇಮಸ್​ ಆಗಿದ್ದ ಅವರನ್ನು ಕನ್ನಡಕ್ಕೆ ಕರೆತಂದವರು ಉಪೇಂದ್ರ. ಅವರ ಬೆಡಗು-ಬಿನ್ನಾಣ ಕಂಡು ‘ಮಸ್ತ್​ ಮಸ್ತ್​ ಹುಡುಗಿ ಬಂದ್ಲು..’ ಎಂದು ಕನ್ನಡ ಸಿನಿಪ್ರಿಯರು ಕುಣಿದಾಡಿದ್ದರು. ಆ ಚಿತ್ರದಿಂದ ಭರ್ಜರಿ ಯಶಸ್ಸು ಸಿಕ್ಕರೂ ಕೂಡ ಅವರು ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಲು 20 ವರ್ಷ ಕಳೆಯಬೇಕಾಯಿತು. ಈಗ ‘ಕೆಜಿಎಫ್​ 2’ ಸಿನಿಮಾದಲ್ಲಿ ರಮಿಕಾ ಸೇನ್​ ಆಗಿ ಮಿಂಚಲಿದ್ದಾರೆ.

ಸದ್ಯ ಮಗಳ ಜೊತೆ ರವೀನಾ ಟಂಡನ್​ ಅವರು ಅಮೆರಿಕಾಕ್ಕೆ ತೆರಳಿದ್ದಾರೆ. ಹಾಗಾಗಿ ಭಾರತದಲ್ಲಿ ಯಾವುದೇ ಪಾರ್ಟಿ ಆಯೋಜಿಸುತ್ತಿಲ್ಲ. ಅಷ್ಟಕ್ಕೂ ಅವರಿಗೆ ದೊಡ್ಡ ಪಾರ್ಟಿಗಳೆಂದರೆ ಅಷ್ಟಕ್ಕಷ್ಟೇ. ಈ ವಿಶೇಷ ದಿನವನ್ನು ಕೇವಲ ಆಪ್ತರ ಜೊತೆ ಸಂಭ್ರಮಿಸಲು ಅವರು ಬಯಸುತ್ತಾರೆ. ಹಾಗಾಗಿ ನೂರಾರು ಜನರನ್ನು ಕರೆದು ಪಾರ್ಟಿ ನೀಡುವ ಅಭ್ಯಾಸವನ್ನು ಅವರು ಇಟ್ಟುಕೊಂಡಿಲ್ಲ.

ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲದೇ, ಕಿರುತೆರೆಯ ಅನೇಕ ರಿಯಾಲಿಟಿ ಶೋಗಳಲ್ಲಿ ಜಡ್ಜ್​ ಆಗಿಯೂ ರವೀನಾ ಟಂಡನ್​ ಕಾಣಿಸಿಕೊಂಡಿದ್ದಾರೆ. ಈಗ ಅವರು ಓಟಿಟಿ ಪ್ಲಾಟ್​ಫಾರ್ಮ್​ಗೂ ಕಾಲಿಡುತ್ತಿದ್ದಾರೆ. ನೆಟ್​ಫ್ಲಿಕ್ಸ್​​ನಲ್ಲಿ ಪ್ರಸಾರ ಆಗಲಿರುವ ಹೊಸ ವೆಬ್​ ಸರಣಿಯಲ್ಲಿ ಅವರು ನಟಿಸುತ್ತಿದ್ದಾರೆ. ಅದರಲ್ಲಿ ಅವರಿಗೆ ಪೊಲೀಸ್​ ಅಧಿಕಾರಿಯ ಪಾತ್ರ ನೀಡಲಾಗಿದೆ. ಹೊಸ ಹೊಸ ಪ್ರಾಜೆಕ್ಟ್​ಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

KGF Chapter 2: ‘ಕೆಜಿಎಫ್​​ 2’ ಚಿತ್ರೀಕರಣದ​ ಫೋಟೋ ವೈರಲ್; ಅಪ್​ಡೇಟ್​ಗಾಗಿ ಕಾದು ಕುಳಿತ ಯಶ್​ ಫ್ಯಾನ್ಸ್​

ಕೆಜಿಎಫ್​ ಬೆಡಗಿಗೆ ಶೀಘ್ರವೇ ಮದುವೆ; ಬಾಯ್​ಫ್ರೆಂಡ್​ ಜತೆ ಇಟಲಿಯಲ್ಲಿ ವಿವಾಹ?

Published On - 12:26 pm, Tue, 26 October 21

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್