ಪ್ರಜ್ವಲ್​ ದೇವರಾಜ್ ​- ರಾಗಿಣಿ ಚಂದ್ರನ್​ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಮದುವೆ ವಿಡಿಯೋ ವೈರಲ್​

Prajwal Devraj - Ragini Prajwal Wedding Anniversary: ತುಂಬ ರಾಯಲ್​ ಆಗಿ ಪ್ರಜ್ವಲ್​ ದೇವರಾಜ್​ ಮತ್ತು ರಾಗಿಣಿ ಚಂದ್ರನ್​ ಮದುವೆ ನೆರವೇರಿತ್ತು. ಕನ್ನಡ ಚಿತ್ರರಂಗದ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. ಪ್ರಜ್ವಲ್​-ರಾಗಿಣಿ ಈಗ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

ಪ್ರಜ್ವಲ್​ ದೇವರಾಜ್ ​- ರಾಗಿಣಿ ಚಂದ್ರನ್​ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಮದುವೆ ವಿಡಿಯೋ ವೈರಲ್​
ರಾಗಿಣಿ, ಪ್ರಜ್ವಲ್​ ದೇವರಾಜ್​​

Prajwal Devraj – Ragini Prajwal | ಸ್ಯಾಂಡಲ್​ವುಡ್​ ನಟ ಪ್ರಜ್ವಲ್​ ದೇವರಾಜ್​ ಮತ್ತು ರಾಗಿಣಿ ಚಂದ್ರನ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟು 6 ವರ್ಷ ಕಳೆದಿದೆ. 2015ರ ಅಕ್ಟೋಬರ್​ನಲ್ಲಿ ಈ ಜೋಡಿ ಸಪ್ತಪದಿ ತುಳಿದಿತ್ತು. ಈಗ ಆರನೇ ವರ್ಷದ ವಿವಾದ ವಾರ್ಷಿಕೋತ್ಸವ ಆಚರಿಸಿಕೊಳ್ಳಲಾಗಿದೆ. ಈ ಖುಷಿಯ ಪ್ರಯುಕ್ತ ಇಬ್ಬರೂ ಕೂಡ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮದುವೆ ವಿಡಿಯೋ ಅಪ್​ಲೋಡ್​ ಮಾಡಿಕೊಂಡಿದ್ದಾರೆ. ಇದು ಅಭಿಮಾನಿಗಳ ಕಣ್ಮನ ಸೆಳೆಯುತ್ತಿದೆ. ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ವೆಡ್ಡಿಂಗ್​ ಆ್ಯನಿವರ್ಸರಿ ಪ್ರಯುಕ್ತ ಆಪ್ತರು, ಅಭಿಮಾನಿಗಳು, ಸೆಲೆಬ್ರಿಟಿಗಳು ಈ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ. ತುಂಬ ರಾಯಲ್​ ಆಗಿ ಪ್ರಜ್ವಲ್​ ದೇವರಾಜ್​ ಮತ್ತು ರಾಗಿಣಿ ಚಂದ್ರನ್​ ಮದುವೆ ನೆರವೇರಿತ್ತು. ಕನ್ನಡ ಚಿತ್ರರಂಗದ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. ಅನಂತ್​ನಾಗ್​, ಅಂಬರೀಶ್​, ರಾಘವೇಂದ್ರ ರಾಜ್​ಕುಮಾರ್​, ದ್ವಾರಕೀಶ್​, ಉಪೇಂದ್ರ, ಶಿವರಾಜ್​ಕುಮಾರ್​, ಗಣೇಶ್, ಚಿರಂಜೀವಿ ಸರ್ಜಾ, ಅವಿನಾಶ್​, ಮಾಳವಿಕಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಬಂದು ದಂಪತಿಗೆ ಆಶೀರ್ವಾದ ಮಾಡಿದ್ದರು.

ರಾಗಿಣಿ ಚಂದ್ರನ್​ ಮತ್ತು ಪ್ರಜ್ವಲ್​ ದೇವರಾಜ್​ ಬಹುಕಾಲದ ಸ್ನೇಹಿತರು. ಇಬ್ಬರ ನಡುವಿನ ಸ್ನೇಹವು ನಂತರ ಪ್ರೀತಿಗೆ ತಿರುಗಿತು. ಈಗ ಖುಷಿಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಡ್ಯಾನ್ಸ್​​ ಮತ್ತು ಯೋಗದಲ್ಲಿ ಪರಿಣತಿ ಹೊಂದಿರುವ ರಾಗಿಣಿ ಅವರು ಉತ್ತಮ ನಟಿ ಕೂಡ ಹೌದು. ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಬಿಡುಗಡೆಯಾದ ‘ಲಾ’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ರಚಿತಾ ರಾಮ್​ ನಿರ್ಮಾಣ ಮಾಡಿದ್ದ ‘ರಿಷಭ ಪ್ರಿಯ’ ಕಿರುಚಿತ್ರದಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ರಾಗಿಣಿ ಆ್ಯಕ್ಟೀವ್​ ಆಗಿರುತ್ತಾರೆ. ಅವರಿಗೆ ಲಕ್ಷಾಂತರ ಫಾಲೋವರ್ಸ್​ ಇದ್ದಾರೆ.

 

View this post on Instagram

 

A post shared by Ragini Prajwal (@iamraginiprajwal)

ಪ್ರಜ್ವಲ್​ ದೇವರಾಜ್​ ಸದ್ಯ ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. 2020ರ ಆರಂಭದಲ್ಲಿ ತೆರೆಕಂಡ ‘ಜೆಂಟಲ್​ಮ್ಯಾನ್​’ ಸಿನಿಮಾ ಜನಮೆಚ್ಚುಗೆ ಪಡೆದುಕೊಂಡಿತು. 2021ರ ಫೆಬ್ರವರಿಯಲ್ಲಿ ‘ಇನ್ಸ್​ಪೆಕ್ಟರ್​ ವಿಕ್ರಂ’ ಬಿಡುಗಡೆ ಆಯಿತು. ಈಗ ಅವರು ‘ವೀರಂ’, ‘ಮಾಫಿಯಾ’, ‘ಅರ್ಜುನ್​ ಗೌಡ’ ಮುಂತಾದ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ:

‘ಅಪ್ಪ-ಅಮ್ಮನ ವೆಡ್ಡಿಂಗ್​ ಆ್ಯನಿವರ್ಸರಿಗೆ ವಿಶ್​ ಮಾಡ್ಬೇಕು, ವಿಡಿಯೋ ಕಾಲ್​ ಮಾಡಿಕೊಡಿ ಪ್ಲೀಸ್​’; ಆರ್ಯನ್​ ಅಳಲು?

ಮದುವೆ ಪ್ಲ್ಯಾನ್​ ಬಗ್ಗೆ ಮಾತನಾಡಿದ ನಟ ವಿಜಯ್​ ದೇವರಕೊಂಡ; ಅಚ್ಚರಿ ಮೂಡಿಸಿದ ಹೇಳಿಕೆ

Click on your DTH Provider to Add TV9 Kannada