ಮದುವೆ ಪ್ಲ್ಯಾನ್​ ಬಗ್ಗೆ ಮಾತನಾಡಿದ ನಟ ವಿಜಯ್​ ದೇವರಕೊಂಡ; ಅಚ್ಚರಿ ಮೂಡಿಸಿದ ಹೇಳಿಕೆ

‘ನನಗಿಂತಲೂ ಮೊದಲು ಇವನೇ ಮದುವೆ ಆಗುತ್ತಾನೆ’ ಎಂದು ಸಹೋದರನ ಮ್ಯಾರೇಜ್​ ಪ್ಲ್ಯಾನ್​ ಬಗ್ಗೆ ವಿಜಯ್​ ದೇವಕೊಂಡ ಹೇಳಿದ್ದಾರೆ. ಇದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಈ ಸಂದರ್ಶನದ ಪ್ರೋಮೋ ವೈರಲ್​ ಆಗುತ್ತಿದೆ.

ಮದುವೆ ಪ್ಲ್ಯಾನ್​ ಬಗ್ಗೆ ಮಾತನಾಡಿದ ನಟ ವಿಜಯ್​ ದೇವರಕೊಂಡ; ಅಚ್ಚರಿ ಮೂಡಿಸಿದ ಹೇಳಿಕೆ
ವಿಜಯ್ ದೇವರಕೊಂಡ
Follow us
TV9 Web
| Updated By: ಮದನ್​ ಕುಮಾರ್​

Updated on: Oct 24, 2021 | 4:31 PM

ನಟ ವಿಜಯ್​ ದೇವರಕೊಂಡ ಅವರಿಗೆ ಸಖತ್​ ಬೇಡಿಕೆ ಇದೆ. ‘ಅರ್ಜುನ್​ ರೆಡ್ಡಿ’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರ ಖ್ಯಾತಿ ಹೆಚ್ಚಿತು. ಈಗ ಅವರು ‘ಲೈಗರ್’ ಸಿನಿಮಾ ಮೂಲಕ ಬಾಲಿವುಡ್​ನಲ್ಲೂ ಸೌಂಡು ಮಾಡಲು ರೆಡಿಯಾಗುತ್ತಿದ್ದಾರೆ. ಸಿನಿಮಾಗಳ ಜೊತೆಗೆ ವಿಜಯ್​ ದೇವರಕೊಂಡ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಆಗಾಗ ಸುದ್ದಿ ಆಗುತ್ತಲೇ ಇರುತ್ತದೆ. ರಶ್ಮಿಕಾ ಮಂದಣ್ಣ ಜೊತೆಗಿನ ಅವರ ಆಪ್ತತೆ ಅನೇಕರ ಕಣ್ಣು ಕುಕ್ಕಿದ್ದುಂಟು. ಈಗ ವಿಜಯ್​ ದೇವರಕೊಂಡ ಅವರು ಮದುವೆ ಬಗ್ಗೆ ಒಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ವಿಜಯ್​ ದೇವರಕೊಂಡ ಅವರ ಕಿರಿಯ ಸಹೋದರ ಆನಂದ್​ ದೇವರಕೊಂಡ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ಸಿನಿಮಾ ಜರ್ನಿಗೆ ವಿಜಯ್​ ಬೆಂಬಲ ನೀಡುತ್ತಿದ್ದಾರೆ. ಅಚ್ಚರಿ ಎಂದರೆ ವಿಜಯ್​ಗಿಂತಲೂ ಮುನ್ನ ಆನಂದ್​ ಮದುವೆ ಆಗುವ ಸಾಧ್ಯತೆ ಇದೆಯಂತೆ! ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ದೇವರಕೊಂಡ ಸಹೋದರರು ಈ ಬಗ್ಗೆ ಮಾತನಾಡಿದ್ದಾರೆ.

ಆನಂದ್​ ದೇವರಕೊಂಡ ನಟನೆಯ ‘ಪುಷ್ಪಕ ವಿಮಾನಂ’ ಚಿತ್ರ ನ.12ರಂದು ಬಿಡುಗಡೆ ಆಗುತ್ತಿದೆ. ಆ ಸಿನಿಮಾವನ್ನು ವಿಜಯ್​ ದೇವರಕೊಂಡ ಅರ್ಪಿಸುತ್ತಿದ್ದಾರೆ. ತಮ್ಮನಿಗೆ ಬೆಂಬಲ ನೀಡುವ ಸಲುವಾಗಿ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ‘ನನಗಿಂತಲೂ ಮೊದಲು ಇವನೇ ಮದುವೆ ಆಗುತ್ತಾನೆ’ ಎಂದು ಸಹೋದರನ ಮ್ಯಾರೇಜ್​ ಪ್ಲ್ಯಾನ್​ ಬಗ್ಗೆ ವಿಜಯ್​ ದೇವಕೊಂಡ ಹೇಳಿದ್ದಾರೆ. ಇದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ವಿಜಯ್​ ದೇವರಕೊಂಡ ಅವರಿಗೆ 32 ವರ್ಷ ವಯಸ್ಸಾಗಿದೆ. ಆನಂದ್​ಗೆ​ ಈಗಿನ್ನೂ 25ರ ಪ್ರಾಯ. ವಾಡಿಕೆಯಂತೆ ಅಣ್ಣನ ಮದುವೆ ಮೊದಲು ಆಗುತ್ತದೆ. ಆದರೆ ಈ ನಿಯಮವನ್ನು ಆನಂದ್​ ಮುರಿಯುತ್ತಾರೆ ಎಂಬ ಅರ್ಥದಲ್ಲಿ ವಿಜಯ್​ ಮಾತನಾಡಿದ್ದಾರೆ. ಆದರೆ ಅವರ ಮಾತಿಗೆ ಆನಂದ್​ ಸಮ್ಮತಿ ಸೂಚಿಸಿಲ್ಲ. ಅದೆಲ್ಲ ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಅವರು ತಲೆ ಅಲ್ಲಾಡಿಸಿದ್ದಾರೆ. ಸಂದರ್ಶನದ ಪ್ರೋಮೋದಲ್ಲಿ ಈ ವಿಚಾರ ಹೈಲೈಟ್​ ಆಗಿದೆ. ಅಸಲಿ ವಿಷಯ ತಿಳಿಯಲು ಪೂರ್ತಿ ಸಂದರ್ಶನ ನೋಡಬೇಕು.

ವಿಜಯ್​ ದೇವರಕೊಂಡ ನಟಿಸುತ್ತಿರುವ ‘ಲೈಗರ್​’ ಚಿತ್ರಕ್ಕೆ ಪುರಿ ಜಗನ್ನಾಥ್​ ನಿರ್ದೇಶನ ಮಾಡುತ್ತಿದ್ದಾರೆ. ಅನನ್ಯಾ ಪಾಂಡೆ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಅನನ್ಯಾ ಹೆಸರು ಡ್ರಗ್ಸ್​ ಕೇಸ್​ನಲ್ಲಿ ತಳುಕು ಹಾಕಿಕೊಂಡಿದೆ. ಇದರಿಂದ ‘ಲೈಗರ್​’ ಚಿತ್ರದ ಶೂಟಿಂಗ್​ಗೆ ತೊಂದರೆ ಆದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ:

ವಿಜಯ್​ ದೇವರಕೊಂಡ ಜೊತೆ ಸೇರಿಕೊಂಡು ಸೈಲೆಂಟಾಗಿ ಮತ್ತೊಂದು ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ

ತುಂಬಾ ಕಿರಿಕಿರಿ ಮಾಡಿದ್ರೆ ರಶ್ಮಿಕಾ ಹೀಗೆ ಒದಿತಾರೆ; ವಿಡಿಯೋ ಸಮೇತ ವಿವರಿಸಿದ ನಟಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ