ಶಾಸಕ ಜಮೀರ್ ಅಹಮದ್​ ಪುತ್ರ ಝೈದ್​ ಖಾನ್​ ದಾಖಲೆ; ಭಾರಿ ಮೊತ್ತಕ್ಕೆ ಲಹರಿ, ಟಿ ಸಿರೀಸ್​ ಪಾಲಾಯ್ತು ‘ಬನಾರಸ್​’ ಆಡಿಯೋ

ಸ್ಟಾರ್​ ನಟರ, ದೊಡ್ಡ ಬ್ಯಾನರ್​ ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಕೋಟ್ಯಂತರ ರೂಪಾಯಿಗೆ ಖರೀದಿ ಮಾಡುವುದು ಸಹಜ. ಆದರೆ ಓರ್ವ ಹೊಸ ಹೀರೋ ನಟಿಸಿರುವ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತ ನೀಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ಶಾಸಕ ಜಮೀರ್ ಅಹಮದ್​ ಪುತ್ರ ಝೈದ್​ ಖಾನ್​ ದಾಖಲೆ; ಭಾರಿ ಮೊತ್ತಕ್ಕೆ ಲಹರಿ, ಟಿ ಸಿರೀಸ್​ ಪಾಲಾಯ್ತು ‘ಬನಾರಸ್​’ ಆಡಿಯೋ
ಸೋನಲ್ ಮಾಂಥೆರೋ, ಝೈದ್ ಖಾನ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 26, 2021 | 1:38 PM

ಶಾಸಕ ಜಮೀರ್​ ಅಹ್ಮದ್​ ಖಾನ್​ ಅವರ ಪುತ್ರ ಝೈದ್​ ಖಾನ್​ ನಟಿಸಿರುವ ಮೊದಲ ಸಿನಿಮಾ ‘ಬನಾರಸ್​’ ಅನೇಕ ಕಾರಣಗಳಿಂದ ಸದ್ದು ಮಾಡುತ್ತಿದೆ. ‘ಬೆಲ್​ ಬಾಟಂ’ ಸಿನಿಮಾ ಮೂಲಕ ದೊಡ್ಡ ಗೆಲುವು ಪಡೆದ ನಿರ್ದೇಶಕ ಜಯತೀರ್ಥ ಅವರು ‘ಬನಾರಸ್​’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿದ್ದು, ಈಗ ಆಡಿಯೋ ರಿಲೀಸ್​ಗೆ ಸಿದ್ಧತೆ ನಡೆಯುತ್ತಿದೆ. ಪ್ರತಿಷ್ಠಿತ ಲಹರಿ ಮ್ಯೂಸಿಕ್​, ಟಿ-ಸಿರೀಸ್​ ಸಂಸ್ಥೆಗಳು ಜಂಟಿಯಾಗಿ ‘ಬನಾರಸ್​’ ಚಿತ್ರದ ಆಡಿಯೋ ಹಕ್ಕುಗಳನ್ನು ದಾಖಲೆ ಮೊತ್ತಕ್ಕೆ ಖರೀದಿ ಮಾಡಿವೆ. ಇದು ಝೈದ್​ ಖಾನ್​ ಪಾಲಿಗೆ ಹೆಮ್ಮ ತರುವಂಥ ವಿಚಾರವಾಗಿದೆ.

ಸ್ಟಾರ್​ ನಟರ ಅಥವಾ ದೊಡ್ಡ ಬ್ಯಾನರ್​ ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಕೋಟ್ಯಂತರ ರೂಪಾಯಿ ಕೊಟ್ಟು ಖರೀದಿ ಮಾಡುವುದು ಸಹಜ. ಆದರೆ ಓರ್ವ ಹೊಸ ಹೀರೋ ನಟಿಸಿರುವ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತ ನೀಡಿರುವುದು ಇದೇ ಮೊದಲ ಎನ್ನಲಾಗುತ್ತಿದೆ. ಆ ಮೊತ್ತ ಎಷ್ಟು ಎಂಬುದನ್ನು ಲಹರಿ ಸಂಸ್ಥೆ ಬಹಿರಂಗಪಡಿಸಿಲ್ಲ. ಒಟ್ಟಿನಲ್ಲಿ ಝೈದ್​ ಖಾನ್​ ಚೊಚ್ಚಲ ಚಿತ್ರದಲ್ಲೇ ದಾಖಲೆ ಬರೆದಿರುವುದು ಗಮನಾರ್ಹ ಸಂಗತಿ ಎನ್ನುತ್ತಿದೆ ಚಿತ್ರತಂಡ. ಈ ಚಿತ್ರದ ಆಡಿಯೋ ಹಕ್ಕುಗಳು ಖರೀದಿಸಿರುವುದಕ್ಕೆ ಸಂತಸ ಇದೆ ಎಂದಿದೆ ಲಹರಿ ಸಂಸ್ಥೆ.

‘ಬನಾರಸ್​’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಝೈದ್​ ಖಾನ್​ ಗ್ರ್ಯಾಂಡ್​ ಎಂಟ್ರಿ ನೀಡಲಿದ್ದಾರೆ. ಅವರಿಗೆ ಜೋಡಿಯಾಗಿ ಸೋನಲ್​ ಮಾಂಥೆರೋ ನಟಿಸಿದ್ದಾರೆ. ಬಹುಪಾಲು ಚಿತ್ರೀಕರಣ ಕಾಶಿಯಲ್ಲಿ ನಡೆದಿದೆ. ‘ಒಲವೇ ಮಂದಾರ’ ಚಿತ್ರದಿಂದ ‘ಬೆಲ್​ ಬಾಟಂ’ ಸಿನಿಮಾದವರೆಗೆ ಪ್ರತಿ ಬಾರಿಯೂ ವಿಶೇಷ ಕಥಾಹಂದರವನ್ನು ಜನರ ಮುಂದೆ ಪ್ರಸ್ತುತ ಪಡಿಸುತ್ತಿರುವ ಜಯತೀರ್ಥ ಅವರು ಈಗ ‘ಬನಾರಸ್​’ ಮೂಲಕ ಯಾವ ಕಥೆಯನ್ನು ಹೇಳಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ಮುಡಿಬರಲಿದೆ. ಎಲ್ಲ ಭಾಷೆಯ ಆಡಿಯೋ ಹಕ್ಕುಗಳು ಸೇಲ್​ ಆಗಿವೆ. ‘ಬನಾರಸ್​’ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್​ ಬಿ. ಲೋಕನಾಥ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ:

Salaga: ನಿರೀಕ್ಷೆಗೂ ಮೀರಿ ‘ಸಲಗ’ ಸಕ್ಸಸ್​; ಹಾಗಾದ್ರೆ ಈವರೆಗಿನ ಕಲೆಕ್ಷನ್​ ಲೆಕ್ಕ ಹೇಳೋರು ಯಾರು?

ಉಪೇಂದ್ರ ಬಗ್ಗೆ ‘ಕೋಟಿಗೊಬ್ಬ 3’ ವೇದಿಕೆಯಲ್ಲಿ ಸುದೀಪ್​ ಮಾತು; ಉಪ್ಪಿ ಅಂದ್ರೆ ಸ್ಫೂರ್ತಿಯ ಕಿಚ್ಚು

Published On - 1:21 pm, Tue, 26 October 21

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ