ರವಿಚಂದ್ರನ್​ ಪುತ್ರರ ಬಗ್ಗೆ ಕಾಕ್ರೋಚ್​ ಸುಧಿ ವಿಶೇಷ ಮಾತು; ‘ಕನಸುಗಾರ’ ನೆನಪಿಸಿದ ಮನು-ವಿಕ್ರಮ್​

ಭರತ್​ ನಾವುಂದ ನಿರ್ದೇಶನ ಮಾಡಿರುವ ‘ಮುಗಿಲ್​ಪೇಟೆ’ ಚಿತ್ರದಲ್ಲಿ ಮನು ರವಿಚಂದ್ರನ್​ಗೆ ಜೋಡಿಯಾಗಿ ಖಯಾದು ಲೋಹರ್​ ನಟಿಸಿದ್ದಾರೆ. ಕಾಕ್ರೋಚ್​​ ಸುಧಿಗೆ ವಿಲನ್​ ಪಾತ್ರವಿದೆ.

‘ಕ್ರೇಜಿ ಸ್ಟಾರ್​’ ರವಿಚಂದ್ರನ್​ ಪುತ್ರ ಮನು ರವಿಚಂದ್ರನ್​ ನಟಿಸಿರುವ ‘ಮುಗಿಲ್​ಪೇಟೆ’ ಚಿತ್ರತಂಡ ರಿಲೀಸ್​ ದಿನಾಂಕ ಘೋಷಿಸಿದೆ. ನ.19ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ‘ಟಗರು’ ಖ್ಯಾತಿಯ ನಟ ಕಾಕ್ರೋಚ್​ ಸುಧಿ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ಮನು ಸಲುವಾಗಿ ಅವರ ಸಹೋದರ ವಿಕ್ರಮ್​ ರವಿಚಂದ್ರನ್​ ಸಾಕಷ್ಟು ಶ್ರಮಪಡುತ್ತಿದ್ದಾರೆ. ಅದನ್ನು ನೋಡಿದ ಸುಧಿ ಅವರು ‘ಕನಸುಗಾರ’ ಸಿನಿಮಾದ ಪಾತ್ರಗಳನ್ನು ನೆನಪಿಸಿಕೊಂಡರು.

ಭರತ್​ ನಾವುಂದ ನಿರ್ದೇಶನ ಮಾಡಿರುವ ‘ಮುಗಿಲ್​ಪೇಟೆ’ ಚಿತ್ರದಲ್ಲಿ ಮನುಗೆ ಜೋಡಿಯಾಗಿ ಖಯಾದು ಲೋಹರ್​ ನಟಿಸಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಕಾವ್ಯಾ ಶಾ, ತಾರಾ ಅನುರಾಧ ಮುಂತಾದವರು ಪೋಷಕ ಪಾತ್ರಗಳನ್ನು ನಿಭಾಯಿಸಿದ್ದಾರೆ. 17 ಗೆಟಪ್​ಗಳಲ್ಲಿ ಸಾಧು ಕೋಕಿಲ ಕಾಣಿಸಿಕೊಂಡಿದ್ದಾರೆ. ರಕ್ಷಾ ವಿಜಯ್​ ಕುಮಾರ್​ ಮತ್ತು ಮೋತಿ ಮಹೇಶ್​ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:

‘ಸಲಗ’ ಚಿತ್ರದ ಸಾವಿತ್ರಿ-ಚಿನ್ನು ಲವ್​ಸ್ಟೋರಿ ಬಗ್ಗೆ ಕಾಕ್ರೋಚ್​​ ಸುಧಿ ಫನ್ನಿ ಮಾತುಕತೆ

‘ಮೆಗಾ ಸ್ಟಾರ್’​ ಚಿರಂಜೀವಿ ಮತ್ತು ರವಿಚಂದ್ರನ್​ ನಡುವಿನ ಸ್ನೇಹ ವಿವರಿಸಲು ಈ ಒಂದು ಘಟನೆ ಸಾಕು

Click on your DTH Provider to Add TV9 Kannada