ಸಿದ್ಧಾರ್ಥ್ ಮಲ್ಹೋತ್ರಾ ಅವರ ಮುಂದಿನ ಚಿತ್ರವನ್ನು ಶಾರುಖ್ ಖಾನ್ ನಿರ್ಮಿಸಲಿದ್ದಾರೆಯೇ..?

ಸಿದ್ಧಾರ್ಥ್ ಮಲ್ಹೋತ್ರಾ ಅವರ ಮುಂದಿನ ಚಿತ್ರವನ್ನು ಶಾರುಖ್ ಖಾನ್ ನಿರ್ಮಿಸಲಿದ್ದಾರೆಯೇ..?
ನಟ ಶಾರುಖ್ ಖಾನ್ ಮತ್ತು ನಟ ಸಿದ್ಧಾರ್ಥ ಮಲ್ಹೋತ್ರ.

ನಟ ಸಿದ್ಧಾರ್ಥ್ ಮಲ್ಹೋತ್ರಾ ಶೇರ್ಷಾ ಚಿತ್ರದ ಯಶಸ್ಸಿನಲ್ಲಿದ್ದಾರೆ. ಸದ್ಯ ಮೂಲಗಳ ಪ್ರಕಾರ ಅವರು ಶಾರಖ್ ಖಾನ್ ನಿರ್ಮಾಣದ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳ ಪ್ರಕಾರ ಹೇಳಲಾಗುತ್ತಿದೆ. ಆ ಕುರಿತು ಒಂದು ಮಾಹಿತಿ ಇಲ್ಲಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jan 27, 2022 | 1:30 PM

ಕಳೆದ ವರ್ಷ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಶೇರ್ಷಾ ಚಿತ್ರವೂ  ವ್ಯಾಪಕ ಮೆಚ್ಚುಗೆ ಗಳಿಸಿತ್ತು. ಚಿತ್ರದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಪಾತ್ರವನ್ನು ನಿರ್ವಹಿಸಿದ ನಟ ಸಿದ್ಧಾರ್ಥ್ ಮಲ್ಹೋತ್ರಾ  ಚಲನಚಿತ್ರ ಬಂಧುಗಳು ಮತ್ತು ವಿಮರ್ಶಕರು ಮತ್ತು ಪ್ರೇಕ್ಷಕರು ಸೇರಿದಂತೆ ಅನೇಕರು ಅವರ ವೃತ್ತಿಜೀವನದ ಅತ್ಯುತ್ತಮ ಅಭಿನಯವಾಗಿದೆ ಎಂದು ಬಣ್ಣಿಸಿದ್ದರು. ಸದ್ಯ ನಟ ಸಿದ್ಧಾರ್ಥ್ ಮಲ್ಹೋತ್ರಾ ಸಿನಿಮಾ ಜಗತ್ತಿಗೆ ಬಂದ್ದು 10 ವರ್ಷ ಪೂರೈಸಿದ್ದಾರೆ. ಈಗ ಅವರ ಕೈಯಲ್ಲಿ ಥ್ಯಾಂಕ್ ಯೂ,  ಮಿಷನ್ ಮಜ್ನು ಮತ್ತು ಯೋಧಾ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.  

ಗೌರಿ ಶಿಂಧೆ ನಿರ್ದೇಶಿಸಲಿರುವ ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನೊಂದಿಗೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಚಿತ್ರವೊಂದು ಮಾಡುತ್ತಿದ್ದು ಅದರ ಮಾತುಕತೆ ನಡೆಯುತ್ತಿದೆ ಎನ್ನುವ ಸುದ್ದಿಯು ಮೂಲಗಳಿಂದ ತಿಳಿದುಬಂದಿದೆ. ಶೇರ್ಷಾನ ಮೇಲೆ ಅನೇಕ ಚಿತ್ರ ನಿರ್ಮಾಪಕರು ಹಣ ಹೂಡಲು ಸಿದ್ಧರಿದ್ದಾರೆ ಎನ್ನಲಾಗುತ್ತಿದೆ. ಆದರೆ,  ಇಂಗ್ಲಿಷ್ ವಿಂಗ್ಲಿಷ್ ಚಿತ್ರದ ನಿರ್ದೇಶಕಿಯಾದ ಗೌರಿ ಶಿಂಧೆ ಹಾಗೂ ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಾಣದಲ್ಲಿ ಕಾಮಿಡಿ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ನಟ ಸಿದ್ಧಾರ್ಥ್ ಮಲ್ಹೋತ್ರಾ ಸ್ಕ್ರಿಪ್ಟ್ ಇಷ್ಟಪಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಬೇಕಿದೆ ಎಂದು ಮೂಲಗಳು ಹೇಳುತ್ತಿವೆ.

ಈ ಚಿತ್ರವು 2022 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಮೂಲವು ಹೇಳುತ್ತಿದ್ದು, “ಸಿದ್ಧಾರ್ಥ್ ಪ್ರಸ್ತುತ ಯೋಧ ಚಿತ್ರದಲ್ಲಿ ನಿರತರಾಗಿದ್ದಾರೆ.  ಅದರಲ್ಲಿ ಅವರು ಮತ್ತೆ ಸೈನಿಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಂತರ ಮೇ 13 ರಂದು ಬಿಡುಗಡೆಯಾಗಲಿರುವ ಮಿಷನ್ ಮಜ್ನು ಚಿತ್ರದ ಪ್ರಚಾರದಲ್ಲಿ ತೋಡಗಿಕೊಳ್ಳಲಿದ್ದಾರೆ. ಜುಲೈ 2022 ರಲ್ಲಿ ಆಗಮಿಸುವ ನಿರೀಕ್ಷೆಯಿರುವ ಥ್ಯಾಂಕ್ ಯೂ ಚಿತ್ರ.  ನಂತರ ಸೆಪ್ಟೆಂಬರ್‌ನಲ್ಲಿ ಗೌರಿ ಶಿಂಧೆ ಅವರ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ನಟ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಯೋಧ ಚಿತ್ರಕ್ಕಾಗಿ ಅವರು ಮತ್ತೆ ಚಿತ್ರ ನಿರ್ಮಾಪಕರೊಂದಿಗೆ ಕೈಜೋಡಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಈ ಚಿತ್ರವು ರಾಷ್ಟ್ರವನ್ನು ಉಳಿಸುವ ಕಾರ್ಯಾಚರಣೆಯಲ್ಲಿರುವ ಸೈನಿಕನ ಬಗ್ಗೆ ಮತ್ತೊಂದು ಆಕ್ಷನ್ ಚಿತ್ರಯಿದಾಗಿದೆ. ಇನ್ನೂ ಈ ಚಿತ್ರವನ್ನು ಸಾಗರ್ ಅಂಬರ್ ಮತ್ತು ಪುಷ್ಕರ್ ಓಜಾ ಅವರು ನಿರ್ದೇಶಿಸುತ್ತಿದ್ದಾರೆ.  ಸಿದ್ಧಾರ್ಥ್ ಜೊತೆಗೆ ನಟಿಯರಾದ ದಿಶಾ ಪಟಾನಿ ಮತ್ತು ರಾಶಿ ಖನ್ನಾ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ;

ರಿಲೀಸ್​ ದಿನಾಂಕ ಲಾಕ್​ ಮಾಡಿದ ‘ವೀರಂ’; ಮೇ 6ಕ್ಕೆ ಪ್ರಜ್ವಲ್​ ದೇವರಾಜ್​ ಸಿನಿಮಾ ಬಿಡುಗಡೆ

ಅಭಿಮಾನಿಗಳಿಗೆ ಕೈ ತುತ್ತು ತಿನ್ನಿಸಿದ ಶಿವಣ್ಣ; ದೊಡ್ಮನೆ ಸರಳತೆಗೆ ಈ ವಿಡಿಯೋ ಸಾಕ್ಷಿ

Follow us on

Related Stories

Most Read Stories

Click on your DTH Provider to Add TV9 Kannada