ಅಭಿಮಾನಿಗಳಿಗೆ ಕೈ ತುತ್ತು ತಿನ್ನಿಸಿದ ಶಿವಣ್ಣ; ದೊಡ್ಮನೆ ಸರಳತೆಗೆ ಈ ವಿಡಿಯೋ ಸಾಕ್ಷಿ

ಹಲವಾರು ಸಿನಿಮಾಗಳಲ್ಲಿ ಶಿವರಾಜ್​ಕುಮಾರ್​ ಬ್ಯುಸಿ ಆಗಿದ್ದಾರೆ. ಅದರ ನಡುವೆಯೂ ಅವರು ಅಭಿಮಾನಿಗಳಿಗಾಗಿ ಸಮಯ ನೀಡಿದ್ದಾರೆ.

TV9kannada Web Team

| Edited By: Madan Kumar

Jan 27, 2022 | 10:21 AM

ಕನ್ನಡ ಚಿತ್ರರಂಗದಲ್ಲಿ ನಟ ಶಿವರಾಜ್​ಕುಮಾರ್ (Shivarajkumar)​ ಅವರು ಸ್ಟಾರ್​ ಆಗಿ ಮೆರೆಯುತ್ತಿದ್ದರೂ ಕೂಡ ಸರಳತೆಯನ್ನು ಮರೆತಿಲ್ಲ. ಡಾ. ರಾಜ್​ಕುಮಾರ್​ ​ಕುಟುಂಬದ ಗುರುತೇ ಸರಳತೆ. ಅಣ್ಣಾವ್ರ ಮಕ್ಕಳು ಅದನ್ನು ಪಾಲಿಸುತ್ತಾ ಬಂದಿದ್ದಾರೆ. ಸಿಂಪ್ಲಿಸಿಟಿ ವಿಚಾರದಲ್ಲಿ ಶಿವರಾಜ್​ಕುಮಾರ್​ (Dr. Rajkumar) ಅವರದ್ದು ಒಂದು ಕೈ ಮೇಲೆ. ಅಭಿಮಾನಿಗಳ (Shivarajkumar Fans) ಜೊತೆ ಅವರು ತುಂಬ ಆಪ್ತವಾಗಿ ಬೆರೆಯುತ್ತಾರೆ. ಇತ್ತೀಚೆಗೆ ಅವರು ಮೈಸೂರಿನಲ್ಲಿ ಒಂದು ಹೋಟೆಲ್​ ಉದ್ಘಾಟನೆ ಮಾಡಿದರು. ಆ ವೇಳೆ ಅಲ್ಲಿನ ಊಟವನ್ನು ಸವಿದರು. ಜೊತೆಯಲ್ಲಿ ಇದ್ದ ಅಭಿಮಾನಿಗಳಿಗೆ ಶಿವಣ್ಣ ಕೈ ತುತ್ತು ತಿನಿಸಿದರು. ‘ಹ್ಯಾಟ್ರಿಕ್​ ಹೀರೋ’ ತೋರಿಸಿದ ಈ ಪರಿ ಪ್ರೀತಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಬಳಿಕ ಅಭಿಮಾನಿಗಳೆಲ್ಲರೂ ಶಿವಣ್ಣನ ಕಾಲಿಗೆ ನಮಸ್ಕರಿಸಿದರು. ಜ.26ರಂದು ಶಿವರಾಜ್​ಕುಮಾರ್​ ಅವರು ಶಕ್ತಿಧಾಮದ ಮಕ್ಕಳ ಜೊತೆ ಗಣರಾಜ್ಯೋತ್ಸವ ಆಚರಿಸಿದರು. ಧ್ವಜಾರೋಹಣ ಮಾಡಿದ ಬಳಿಕ ಮಕ್ಕಳಿಗೆ ಸಿಹಿ ಹಂಚಿದರು. ಆಶ್ರಮದ ಮಕ್ಕಳ ಜೊತೆ ಜಾಲಿ ರೈಡ್​ ಕೂಡ ಹೋಗಿದ್ದರು. ಈ ಎಲ್ಲ ವಿಡಿಯೋಗಳು ಈಗ ವೈರಲ್​ ಆಗುತ್ತಿವೆ. ದೊಡ್ಮನೆಯ ಸರಳತೆಗೆ ಸಾಕ್ಷಿ ಒದಗಿಸುತ್ತಿವೆ. ಹಲವಾರು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿ ಆಗಿದ್ದಾರೆ. ಅದರ ನಡುವೆಯೂ ಅವರು ಅಭಿಮಾನಿಗಳಿಗಾಗಿ ಸಮಯ ನೀಡಿದ್ದಾರೆ.

ಇದನ್ನೂ ಓದಿ:

ಸಂಕ್ರಾಂತಿ ಹಬ್ಬದಲ್ಲಿ ಪುನೀತ್​ ರಾಜ್​ಕುಮಾರ್​ ನೆನಪು; ಫ್ಯಾನ್ಸ್​ ಜೊತೆ ಹೊಸ ಸುದ್ದಿ ಹಂಚಿಕೊಂಡ ಶಿವಣ್ಣ

ಓಟಿಟಿಯಲ್ಲಿ ನೋಡಬಹುದು ‘ಭಜರಂಗಿ 2’ ಸಿನಿಮಾ; ಶಿವರಾಜ್​ಕುಮಾರ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​

Follow us on

Click on your DTH Provider to Add TV9 Kannada