ಗಣರಾಜ್ಯೋತ್ಸವದಂದು ವಿಶೇಷ ದೀಪಾಲಂಕಾರದಲ್ಲಿ ಕಂಗೊಳಿಸಿದ ವಿಧಾನ ಸೌಧ; ಕುಟುಂಬ ಸಮೇತ ವೀಕ್ಷಿಸಿ ಕಣ್ತುಂಬಿಕೊಂಡ ಜನತೆ
Republic Day 2022: ಗಣರಾಜ್ಯೋತ್ಸವದ ಪ್ರಯುಕ್ತ ವಿಧಾನಸೌಧಕ್ಕೆ ವಿಶೇಷ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿತ್ತು. ಜನರು ಕುಟುಂಬ ಸಮೇತರಾಗಿ ಆಗಮಿಸಿ ಈ ಸೊಬಗನ್ನು ಕಣ್ತುಂಬಿಕೊಂಡರು.
ಬೆಂಗಳೂರು: ದೇಶಾದ್ಯಂತ ನಿನ್ನೆ ಅಂದರೆ ಬುಧವಾರದಂದು ಅತ್ಯಂತ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ರಾಜ್ಯದಲ್ಲೂ ಸಡಗರ ಜೋರಾಗಿತ್ತು. ಈ ವಿಶೇಷ ದಿನದಂದು ವಿಧಾನಸೌಧದಲ್ಲಿ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿತ್ತು. ಗಣರಾಜ್ಯೋತ್ಸವದ ದೀಪಾಲಂಕಾರದಲ್ಲಿ ಕಂಗೊಳಿಸುವ ವಿಧಾನಸೌಧ ನೋಡಲು ಜನರು ತಂಡೋಪತಂಡವಾಗಿ ವಿಧಾನಸೌಧದ ಬಳಿ ಆಗಮಿಸಿದ್ದರು. ರಾತ್ರಿ ವೇಳೆ ಕಲರ್ ಕಲರ್ ಬೆಳಕಿನಲ್ಲಿ ಮಿಂಚುತ್ತಿದ್ದ ವಿಧಾನಸೌಧವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ ಜನರು, ಹಿನ್ನೆಲೆಯಲ್ಲಿ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಮಕ್ಕಳು- ಹಿರಿಯರು ಸೇರಿದಂತೆ ಕುಟುಂಬ ಸಮೇತರಾಗಿ ಜನರು ಆಗಮಿಸಿದ್ದರು. ಸಂಜೆಯಿಂದ ತಡರಾತ್ರಿಯವರೆಗೆ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ:
Published on: Jan 27, 2022 08:36 AM
Latest Videos