‘ಜೇಮ್ಸ್’​ ಚಿತ್ರದಲ್ಲಿ ಪುನೀತ್​, ಶಿವಣ್ಣ, ರಾಘಣ್ಣ; ​ಫ್ಯಾನ್ಸ್​ ಕನಸು ಈಡೇರಿಸಲು ನಿರ್ದೇಶಕರ ಪ್ಲ್ಯಾನ್​

‘ಜೇಮ್ಸ್’​ ಚಿತ್ರದಲ್ಲಿ ಪುನೀತ್​, ಶಿವಣ್ಣ, ರಾಘಣ್ಣ; ​ಫ್ಯಾನ್ಸ್​ ಕನಸು ಈಡೇರಿಸಲು ನಿರ್ದೇಶಕರ ಪ್ಲ್ಯಾನ್​
ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​, ಪುನೀತ್​ ರಾಜ್​ಕುಮಾರ್​

Puneeth Rajkumar: ಪುನೀತ್​ ರಾಜ್​ಕುಮಾರ್​ ಅವರ ನಿಧನದ ನಂತರ ‘ಜೇಮ್ಸ್​’ ಚಿತ್ರತಂಡ ಹೀಗೊಂದು ಪ್ಲ್ಯಾನ್​ ಮಾಡಿದೆ. ಅಣ್ಣಾವ್ರ ಮಕ್ಕಳನ್ನು ಒಟ್ಟಿಗೆ ತೋರಿಸಲು ನಿರ್ದೇಶಕರು ಮುಂದಾಗಿದ್ದಾರೆ.

TV9kannada Web Team

| Edited By: Madan Kumar

Jan 20, 2022 | 4:24 PM


ಅಣ್ಣಾವ್ರ ಮಕ್ಕಳಾದ ಪುನೀತ್​ ರಾಜ್​ಕುಮಾರ್​, ಶಿವರಾಜ್​ಕುಮಾರ್​ (Shivarajkumar) ಹಾಗೂ ರಾಘವೇಂದ್ರ ರಾಜ್​ಕುಮಾರ್​ ಒಟ್ಟಿಗೆ ಅಭಿನಯಿಸಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಆದರೆ ಆ ಆಸೆ ಈಡೇರುವುದಕ್ಕೂ ಮುನ್ನವೇ ಪುನೀತ್​ ರಾಜ್​ಕುಮಾರ್ (Puneeth Rajkumar) ಅವರು ಹೃದಯಾಘಾತದಿಂದ ಕಳೆದ ವರ್ಷ ಅ.29ರಂದು​ ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಡಾ. ರಾಜ್​ಕುಮಾರ್​ ಕುಟುಂಬದ ಕುಡಿಗಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎನ್ನುವ ಅಭಿಮಾನಿಗಳ ಕನಸನ್ನು ನನಸು ಮಾಡಲು ‘ಜೇಮ್ಸ್​’ (James Kannada Movie) ಚಿತ್ರತಂಡ ಪ್ರಯತ್ನಿಸುತ್ತಿದೆ. ಆ ಬಗ್ಗೆ ಈಗೊಂದು ಸ್ಪೆಷಲ್​ ನ್ಯೂಸ್​ ಸಿಕ್ಕಿದೆ. ಇದನ್ನು ಕೇಳಿ ಫ್ಯಾನ್ಸ್​ ಥ್ರಿಲ್​ ಆಗೋದು ಗ್ಯಾರಂಟಿ. ಹೌದು, ‘ಜೇಮ್ಸ್​’ ಸಿನಿಮಾ ನಿರ್ದೇಶಕ ಚೇತನ್​ ಕುಮಾರ್​ ಅವರು ಹೀಗೊಂದು ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ಪುನೀತ್​ ರಾಜ್​ಕುಮಾರ್​ ನಟನೆಯ ಈ ಸಿನಿಮಾದಲ್ಲಿ ಶಿವಣ್ಣ ಮತ್ತು ರಾಘಣ್ಣ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಚಿತ್ರತಂಡ ಈಗಾಗಲೇ ತಯಾರಿ ಮಾಡಿಕೊಂಡಿದೆ.

ಪುನೀತ್​ ರಾಜ್​ಕುಮಾರ್​ ಅವರ ನಿಧನದ ನಂತರ ‘ಜೇಮ್ಸ್​’ ಚಿತ್ರತಂಡ ಈ ಪ್ಲ್ಯಾನ್​ ಮಾಡಿದೆ. ಅಣ್ಣಾವ್ರ ಮಕ್ಕಳನ್ನು ಒಟ್ಟಿಗೆ ತೋರಿಸಲು ನಿರ್ದೇಶಕರು ಮುಂದಾಗಿದ್ದಾರೆ. ಶಿವರಾಜ್​ಕುಮಾರ್​ ಹಾಗೂ ರಾಘವೇಂದ್ರ ರಾಜ್​ಕುಮಾರ್​ ಅವರು ‘ಜೇಮ್ಸ್​’ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಮಾಹಿತಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಜ.21ರಿಂದ ‘ಜೇಮ್ಸ್​’ ಸಿನಿಮಾದ ಶೂಟಿಂಗ್​ನಲ್ಲಿ ರಾಘವೇಂದ್ರ ರಾಜ್​ಕುಮಾರ್​ ಮತ್ತು ಶಿವರಾಜ್​ಕುಮಾರ್​ ಅವರು ಭಾಗವಹಿಸಲಿದ್ದಾರೆ. ಆದರೆ ಇಲ್ಲೊಂದು ಸಸ್ಪೆನ್ಸ್​ ಇದೆ. ಈ ಮೂವರೂ ಸಿನಿಮಾದ ಯಾವುದಾದರೊಂದು ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರಾ ಅಥವಾ ಬಾಕಿ ಉಳಿದಿರುವ ಒಂದು ಹಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರಾ ಎಂಬುದು ತಿಳಿದುಬಂದಿಲ್ಲ. ಅದೇನೇ ಇರಲಿ, ಇದು ಅಭಿಮಾನಿಗಳಿಗೆ ಸಖತ್​ ಖುಷಿ ನೀಡಲಿರುವುದಂತೂ ನಿಜ.

‘ಜೇಮ್ಸ್​’ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಲು ಅನೇಕ ಕಾರಣಗಳಿವೆ. ಇದೇ ಮೊದಲ ಬಾರಿಗೆ ಪುನೀತ್​ ರಾಜ್​ಕುಮಾರ್​ ಅವರಿಗೆ ಚೇತನ್​ ಕುಮಾರ್​ ಆ್ಯಕ್ಷನ್​-ಕಟ್​ ಹೇಳಿದ ಚಿತ್ರವಿದು. ಪುನೀತ್​ ನಿಧನಕ್ಕೂ ಮುನ್ನ ಬಿಡುಗಡೆಯಾಗಿದ್ದ ಪೋಸ್ಟರ್​ಗಳಿಂದ ಭಾರಿ ಹೈಟ್​ ಸೃಷ್ಟಿ ಆಗಿತ್ತು. ಅದ್ದೂರಿ ಆ್ಯಕ್ಷನ್​ ಸಿನಿಮಾಗಳನ್ನು ಕಟ್ಟಿಕೊಡುವಲ್ಲಿ ಚೇತನ್​ ಕುಮಾರ್​ ಫೇಮಸ್​. ಈಗ ಈ ಕಾಂಬಿನೇಷನ್​ಗೆ ಶಿವರಾಜ್​ಕುಮಾರ್​ ಮತ್ತು ರಾಘವೇಂದ್ರ ರಾಜ್​ಕುಮಾರ್​ ಕೂಡ ಸೇರಿಕೊಳ್ಳುತ್ತಿರುವುದು ವಿಶೇಷ.

ಈ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಅವರ ದೃಶ್ಯಗಳ ಶೂಟಿಂಗ್​ ಮುಕ್ತಾಯ ಆಗಿದೆ. ಅವರ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡುವ ಸಾಧ್ಯತೆ ದಟ್ಟವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷ ಪುನೀತ್​ ರಾಜ್​ಕುಮಾರ್​ ಹುಟ್ಟುಹಬ್ಬದ ದಿನವೇ (ಮಾ.17) ‘ಜೇಮ್ಸ್​’ ರಿಲೀಸ್​ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ:

ಸಂಕ್ರಾಂತಿ ಹಬ್ಬದಲ್ಲಿ ಪುನೀತ್​ ರಾಜ್​ಕುಮಾರ್​ ನೆನಪು; ಫ್ಯಾನ್ಸ್​ ಜೊತೆ ಹೊಸ ಸುದ್ದಿ ಹಂಚಿಕೊಂಡ ಶಿವಣ್ಣ

‘ಪುನೀತ್​ ಇಲ್ಲದೇ ‘ಜೇಮ್ಸ್​’ ಶೂಟಿಂಗ್​ ಮಾಡೋದು ಕಷ್ಟ ಆಗ್ತಿದೆ’: ನಟ ಅವಿನಾಶ್​ ಭಾವುಕ ನುಡಿ

Follow us on

Related Stories

Most Read Stories

Click on your DTH Provider to Add TV9 Kannada