AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನೂನು ಸಚಿವ ಮಾಧುಸ್ವಾಮಿ ಗಣರಾಜ್ಯೋತ್ಸವ ದಿನ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಮನೆಯಲ್ಲುಳಿದರು!!

ಕಾನೂನು ಸಚಿವ ಮಾಧುಸ್ವಾಮಿ ಗಣರಾಜ್ಯೋತ್ಸವ ದಿನ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಮನೆಯಲ್ಲುಳಿದರು!!

TV9 Web
| Edited By: |

Updated on:Jan 27, 2022 | 5:05 PM

Share

ತುಮಕೂರು ಜಿಲ್ಲೆಯ ಉಸ್ತುವಾರಿ ತನಗೆ ಸಿಗದ ಕಾರಣ ಮಾಧುಸ್ವಾಮಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮುನಿಸಿಕೊಂಡಿದ್ದಾರಂತೆ. ನಿಮಗೆ ನೆನಪಿರಬಹುದು. ಇತ್ತೀಚಿಗೆ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದ ಒಂದು ಕಾರ್ಯಕ್ರಮ ನಡೆಯುತ್ತಿದ್ದಾಗ ಮಾಧುಸ್ವಾಮಿ ಅರ್ಧದಲ್ಲೇ ವೇದಿಕೆಯಿಂದ ಹೊರನಡೆದಿದ್ದರು.

ಕಾನೂನು ಸಚಿವ ಜೆಸಿ ಮಾಧುಸ್ವಾಮಿ (JC Madhuswamy) ಏನೂ ಮಾಡದೆ ಮನೆಯಲ್ಲಿ ತೆಪ್ಪಗೆ ಕೂತಿದ್ದರೂ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಅವರು ಮಾಡಿರುವ ಕೆಲಸವೇ ಹಾಗಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮಾಧುಸ್ವಾಮಿ ಕಳೆದೆರಡು ದಿನಗಳಿಂದ ತಮ್ಮ ಸ್ವಗ್ರಾಮ ಚಿಕ್ಕನಾಯಕನಹಳ್ಳಿ (Chikkanayakanahalli) ತಾಲ್ಲೂಕಿನ ಜೆಸಿ ಪುರನಲ್ಲಿದ್ದಾರೆ. ಬುಧವಾರ ಇಡೀ ದೇಶ ಗಣರಾಜ್ಯೋತ್ಸವ ದಿನದ (Republic Day) ಆಚರಣೆಯ ಸಂಭ್ರಮದಲ್ಲಿ ಮುಳುಗಿದ್ದರೆ, ರಾಜ್ಯ ಸಚಿವ ಸಂಪುಟ ಒಬ್ಬ ಹಿರಿಯ ಸಚಿವ ಅದರಲ್ಲೂ ವಿಶೇಷವಾಗಿ ಕಾನೂನು ಸಚಿವರಾಗಿದ್ದರೂ ಮಾಧುಸ್ವಾಮಿ ಮನೆಯಲ್ಲೇ ಕುಳಿತಿದ್ದರು. ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೆಂದ್ರದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ಕಾನೂನು ಸಚಿವರು ಹಾಜರಾಗಬೇಕಿತ್ತು. ಆದರೆ ಸಚಿವರು ಅದಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ಮನೆಯಲ್ಲಿ ಇದ್ದುಬಿಟ್ಟರು! ನಮಗಿಂತ ಅವರಿಗೆ ಚೆನ್ನಾಗಿ ಗೊತ್ತಿದೆ, ಜನೆವರಿ 26, 1950 ರಂದು ಭಾರತದಲ್ಲಿ ಜಾರಿಗೆ ಬಂದ ಸಂವಿಧಾನವನ್ನು ರಚಿಸಿದ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು ಸಹ ಸ್ವತಂತ್ರ ಭಾರತ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದರು. ಒಂದು ಸಭ್ಯವಲ್ಲದ ಸಂಸ್ಕೃತಿಗೆ ಸಚಿವ ಮಾಧುಸ್ವಾಮಿ ಮುನ್ನುಡಿ ಬರೆದಿದ್ದಾರೆ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು.

ತುಮಕೂರು ಜಿಲ್ಲೆಯ ಉಸ್ತುವಾರಿ ತನಗೆ ಸಿಗದ ಕಾರಣ ಮಾಧುಸ್ವಾಮಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮುನಿಸಿಕೊಂಡಿದ್ದಾರಂತೆ. ನಿಮಗೆ ನೆನಪಿರಬಹುದು. ಇತ್ತೀಚಿಗೆ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದ ಒಂದು ಕಾರ್ಯಕ್ರಮ ನಡೆಯುತ್ತಿದ್ದಾಗ ಮಾಧುಸ್ವಾಮಿ ಅರ್ಧದಲ್ಲೇ ವೇದಿಕೆಯಿಂದ ಹೊರನಡೆದಿದ್ದರು. ಅವರ ವರ್ತನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ ಕಾಲೇಜು ಮಕ್ಕಳಲ್ಲಿ ಹೇವರಿಕೆ ಹುಟ್ಟಿಸಿತ್ತು.

ಸಚಿವರಿಗೆ ಬೊಮ್ಮಾಯಿ ಅಥವಾ ಸಂಪುಟದ ಯಾವುದೇ ಸಹೋದ್ಯೋಗಿ ಬಗ್ಗೆ ಅಸಮಾಧಾನವಿದ್ದರೆ ಅದನ್ನು ಸಾರ್ವಜನಿಕವಾಗಿ ಹೊರಹಾಕುವುದು ಸರಿಯಲ್ಲ. ಅವರು ಕೇವಲ ಪಕ್ಷದ ಒಬ್ಬ ಕಾರ್ಯಕರ್ತರಲ್ಲ, ಅವರ ಮೇಲಿರುವ ಹೊಣೆಗಾರಿಕೆ ದೊಡ್ಡದು. ಬಿಜೆಪಿ ಪಕ್ಷ ಶಿಸ್ತಿಗೆ ಹೆಸರಾಗಿದೆ.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಗಮನಕ್ಕೆ ಮಾಧುಸ್ವಾಮಿಯವರ ವರ್ತನೆ ಬರುತ್ತಿದೆಯೋ ಇಲ್ಲವೋ ಎಂಬ ಸಂಶಯ ಮೂಡುತ್ತದೆ. ನನ್ನಿಂದ ಸರ್ಕಾರಕ್ಕೆ ಪಕ್ಷಕ್ಕೆ ಕೆಟ್ಟ ಹೆಸರು ಬಂದಿದ್ದರೆ, ಪಕ್ಷದಿಂದ ಕಿತ್ತು ಹಾಕಿ ಅಂತ ಸವಾಲೆಸೆಯುವ ದಾರ್ಷ್ಟ್ಯತೆಯನ್ನು ಮಾಧುಸ್ವಾಮಿ ಪ್ರದರ್ಶಿಸುತ್ತಾರೆ.

ಅಧಿಕಾರಿಗಳನ್ನು ಬಾಯಿಗೆ ಬಂದಂತೆ ಬಯ್ಯುವ ಪರಿಪಾಠವನ್ನೂ ಮಾನ್ಯ ಕಾನೂನು ಸಚಿವರು ಜಾರಿಯಲ್ಲಿಟ್ಟಿದ್ದಾರೆ. ಬೊಮ್ಮಾಯಿ ಅಥವಾ ಕಟೀಲ್ ಅವರು ಮಾಧುಸ್ವಾಮಿಗಳ ಕೃತ್ಯಗಳನ್ನು ಪ್ರಶ್ನಿಸದಿದ್ದರೆ ಅವರ ನಡವಳಿಕೆಯಲ್ಲಿ ಬದಲಾವಣೆ ಬಾರದು.

ಇದನ್ನೂ ಓದಿ:   ಕಚ್ಚಾ ಬಾದಾಮ್​ ಹಾಡಿಗೆ ಸಖತ್​ ಹೆಜ್ಜೆ ಹಾಕಿದ ಸ್ಪೈಸ್​ ಜೆಟ್​ನ ಗಗನಸಖಿ; ವಿಡಿಯೋ ವೈರಲ್​​

Published on: Jan 27, 2022 05:04 PM