ಕಚ್ಚಾ ಬಾದಾಮ್​ ಹಾಡಿಗೆ ಸಖತ್​ ಹೆಜ್ಜೆ ಹಾಕಿದ ಸ್ಪೈಸ್​ ಜೆಟ್​ನ ಗಗನಸಖಿ; ವಿಡಿಯೋ ವೈರಲ್​​

ಕಚ್ಚಾ ಬಾದಾಮ್​ ಹಾಡಿಗೆ ಸಖತ್​ ಹೆಜ್ಜೆ ಹಾಕಿದ ಸ್ಪೈಸ್​ ಜೆಟ್​ನ ಗಗನಸಖಿ; ವಿಡಿಯೋ ವೈರಲ್​​
ಗಗನಸಖಿ

ಕೆಂಪು ಉಡುಪು ಧರಿಸಿದ  ಗಗನಸಖಿ ಉಮಾ ಮೀನಾಕ್ಷಿ ಅವರು ಕಚ್ಚಾ ಬಾದಾಮ್​ ಹಾಡಿಗೆ ಸ್ಟೆಪ್ ​ಹಾಕಿರುವುದನ್ನು ಕಾಣಬಹುದು. ಉಮಾ ಅವರ ಸಹೋದ್ಯೋಗಿ  ಈ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಾರೆ.

TV9kannada Web Team

| Edited By: Pavitra Bhat Jigalemane

Jan 27, 2022 | 4:49 PM

ಸಾಮಾಜಿಕ ಜಾಲತಾಣದಲ್ಲಿ ಕಚ್ಚಾ ಬಾದಾಮ್​ (Kacha Badam) ಹಾಡು  ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದೀಗ ವಿಮಾನದಲ್ಲಿ ಗಗನಸಖಿಯೊಬ್ಬರು ಇದೇ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ಇದರ ವಿಡಿಯೋ ಹಂಚಿಕೊಳ್ಳಲಾಗಿದೆ. ಸ್ಪೈಸ್​ ಜೆಟ್ ವಿಮಾನ (Spice jet Flight) ದಲ್ಲಿ ಗಗನಸಖಿ (Air Hostess)  ಉಮಾ ಮೀನಾಕ್ಷಿ ( Uma Meenakshi)​ ಅವರು ಕಚ್ಚಾ ಬಾದಾಮ್​ ಹಾಡಿಗೆ ಸಖತ್​ ಸ್ಟೆಪ್​ ಹಾಕಿದ್ದಾರೆ. ಖಾಲಿ ಪ್ಲೈಟ್​ನಲ್ಲಿ ಕಚ್ಚಾ ಬಾದಾಮ್​ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಉಮಾ ಅವರ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು 23 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

View this post on Instagram

A post shared by Uma meenakshi (@yamtha.uma)

ವಿಡಿಯೋದಲ್ಲಿ ಕೆಂಪು ಉಡುಪು ಧರಿಸಿದ  ಗಗನಸಖಿ ಉಮಾ ಮೀನಾಕ್ಷಿ ಅವರು ಕಚ್ಚಾ ಬಾದಾಮ್​ ಹಾಡಿಗೆ ಸ್ಟೆಪ್ ​ಹಾಕಿರುವುದನ್ನು ಕಾಣಬಹುದು. ಉಮಾ ಅವರ ಸಹೋದ್ಯೋಗಿ  ಈ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಅಗಿದೆ.

ಕೆಲವು ದಿನಗಳ ಹಿಂದೆ ದಕ್ಷಿಣ ಕೊರಿಯಾದ ಅಮ್ಮ ಮಗಳು ಇದೇ ಕಚ್ಚಾ ಬಾದಾಮ್​ ಹಾಡಿಗ ಹೆಜ್ಜೆ ಹಾಕಿದ್ದರು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಮಗಳಂತೆಯೇ ಅಮ್ಮನೂ ಹೆಜ್ಜೆ ಹಾಕಿದ್ದನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜತೆಗೆ ಭಾರತದ ಹಾಡು ವಿದೇಶದಲ್ಲೂ ಸದ್ದು ಮಾಡುತ್ತಿರುವುದನ್ನು ಕಂಡು  ಅಚ್ಚರಿ ವ್ಯಕ್ತಪಡಿಸಿದ್ದರು.

ಕಚ್ಚಾ ಬಾದಾಮ್​ ಹಾಡನ್ನು ಪಶ್ವಿಮ ಬಂಗಾಳದ ಬ್ರಿಬುರ್ಮ್ ಎನ್ನುವ​ ಹಳ್ಳಿಯೊಂದರಲ್ಲಿ ಕಡಲೆಕಾಯಿ ಮಾರಾಟ ಮಾಡುವ ವ್ಯಕ್ತಿಯೊಬ್ಬ ಹೇಳಿದ್ದನು. ಬೂಬನ್​ ಬಡ್ಯಾಕರ್​ ಎನ್ನುವ ವ್ಯಕ್ತಿ ಬರಿಗಾಲಿನಲ್ಲಿ ಸೈಕಲ್​ ತುಳಿದುಕೊಂಡು ಮನೆಮನೆಗೆ ತೆರಳಿ ಕಡಲೆಕಾಯಿ ಮಾರುತ್ತಾನೆ. ಹೀಗೆ ಕಡಲೆಕಾಯಿ ಮಾರುವ ವೇಳೆ ಹಾಡುತ್ತಿದ್ದ ಹಾಡನ್ನು ಕಚ್ಚಾ ಬಾದಾಮ್​ ಹಾಡು ಎಂದೇ ವೈರಲ್​ ಆಗಿದೆ.

ಇದನ್ನೂ ಓದಿ:

ಕ್ಷೀರಪಥದಲ್ಲಿ ಕಂಡುಬಂತು ಇದುವರೆಗೆ ಕಂಡೇ ಇರದ ವಸ್ತು; ಏನಿದು? ಇಲ್ಲಿದೆ ಕುತೂಹಲಕರ ಹೊಸ ಸಮಾಚಾರ!

Follow us on

Related Stories

Most Read Stories

Click on your DTH Provider to Add TV9 Kannada