Viral Video; ಕಲರ್​ಫುಲ್ ಸೋಯಾಬಿನ್​​ ವೆಜ್​ ಫಿಶ್​ ನೋಡಿ ‘ವಾವ್​’ ಎಂದ ನೆಟ್ಟಿಗರು

ಸೋಯಾಬಿನ್​ನಿಂದ ತಯಾರಿಸಿದ ಮೀನಿನ ಆಕೃತಿಯ ತಿನಿಸು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದಕ್ಕೆ ವೆಜ್​ ಫಿಶ್​ ಎಂದು ಕರೆದಿದ್ದಾರೆ.

Viral Video; ಕಲರ್​ಫುಲ್ ಸೋಯಾಬಿನ್​​ ವೆಜ್​ ಫಿಶ್​ ನೋಡಿ 'ವಾವ್​' ಎಂದ ನೆಟ್ಟಿಗರು
ವೆಜ್​ ಫಿಶ್​
Follow us
TV9 Web
| Updated By: Pavitra Bhat Jigalemane

Updated on:Jan 27, 2022 | 2:57 PM

ಇತ್ತೀಚೆಗೆ ಫುಡ್​ ಬ್ಲಾಗರ್ (Food Blogger) ​ಗಳ ಸಂಖ್ಯೆ ಹೆಚ್ಚುತ್ತಿದೆ. ದೇಶದ ವಿವಿಧ ಪ್ರದೇಶಗಳಲ್ಲಿ ಓಡಾಡಿ  ವಿವಿಧ ರೀತಿಯ ಆಹಾರಗಳನ್ನು ಟೇಸ್ಟ್​ ಮಾಡುವ ಮೂಲಕ ತಮ್ಮ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳುತ್ತಾರೆ. ಇದರಿಂದ ಬಳಕೆದಾರರಿಗೂ ಹೊಸಹೊಸ ರೀತಿಯ ತಿನಿಸುಗಳ ಪರಿಚಯವಾಗುತ್ತದೆ. ಕಳೆದ ಕೆಲವು ದಿನಗಳಿಂದ ನೂರಾರು ರೀತಿಯ ಆಹಾರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದ್ದವು, ಮಿರಿಂಡಾ ಗೋಲಗಪ್ಪಾ(Mirinda Golgappa) , ಪಾಂಟಾ ಮ್ಯಾಗಿ, ಓರಿಯೋ ಬಿಸ್ಕತ್​ ಪಕೋಡಾ, ರಸಗುಲ್ಲಾ ಚಾಟ್​, ಮಿರ್ಚಿ ಐಸ್​ಕ್ರೀಮ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದೀಗ ಸೋಯಾಬಿನ್​ (Soya Bean)ನಿಂದ ತಯಾರಿಸಿದ ಮೀನಿನ ಆಕೃತಿಯ ತಿನಿಸು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದಕ್ಕೆ ವೆಜ್​ ಫಿಶ್ (Veg Fish)​ ಎಂದು ಕರೆದಿದ್ದಾರೆ.

ಇನ್ಸ್ಟಾಗ್ರಾಮ್​ನಲ್ಲಿ ವೆಜ್​ ಫಿಶ್​​ ತಯಾರಿಸುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಫುಡ್​ ಬ್ಲಾಗರ್​ ಅಮರ್​ ಸಿರೋಹಿ ಎನ್ನುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸೋಯಾಬಿನ್​ ಅನ್ನು ಬೇಯಿಸಿ ಮೀನಿನ ಆಕಾರಕ್ಕೆ ಬರುವಂತೆ ಮಾಡಿ ಎಣ್ಣೆಯಲ್ಲಿ ಬೇಯಿಸುತ್ತಾರೆ. ಈ ವೆಜ್​ ಫಿಶ್​ಗೆ ಜತೆಯಾಗಿ ಚಟ್ನಿಯನ್ನು ಕೂಡ ನೀಡುತ್ತಾರೆ. ಇದನ್ನು ಫುಡ್​ ಬ್ಲಾಗರ್​ ಬಳಕೆದಾರರಿಗೆ ವಿವರಿಸಿ ತಿನ್ನುವ ವಿಡಿಯೋವನ್ನು ಹಂಚಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ಸಖತ್​ ವೈರಲ್​ ಆಗಿದೆ. ವಿಡಿಯೋ ಹಂಚಿಕೊಂಡಾಗಿನಿಂದ  ​ 3.8 ಲಕ್ಷ ವಿಕ್ಷಣೆ ಪಡೆದಿದ್ದು ಸಾವಿರಾರು ಲೈಕ್ಸ್​ಗಳನ್ನು ಪಡೆದಿದೆ. ವೆಜ್​ ಫಿಶ್​ ತಯಾರಿಕೆಯ ವಿಡಿಯೋ ನೆಟ್ಟಿಗರು ಬಾಯಿಚಪ್ಪರಿಸಿದ್ದಾರೆ. ಒಮ್ಮೆಯಾದರೂ ಪ್ರಯತ್ನಿಸಬೇಕು, ರುಚಿ ನೋಡಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ;

ಅಲ್ಲು ಅರ್ಜುನ ಅವರ ಶ್ರೀವಲ್ಲಿ ಹುಕ್ ಸ್ಟೆಪ್​ಗೆ ಹೆಜ್ಜೆ ಹಾಕಿದ ಫ್ರೆಂಚ್ ವ್ಯಕ್ತಿ ಜಿಕಾ

Published On - 2:55 pm, Thu, 27 January 22

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ