129 ಮಕ್ಕಳ ಜನನಕ್ಕೆ ಕಾರಣವಾದ ಜಗತ್ತಿನ ಆರೋಗ್ಯವಂತ ವೀರ್ಯ ದಾನಿ ಕ್ಲೈವ್ ಜೋನ್ಸ್
ವೀರ್ಯವನ್ನು ದಾನ ಮಾಡುವ ಯುಕೆ ಮೂಲದ ಕ್ಲೈವ್ ಜೋನ್ಸ್ ಅವರು ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ. 66 ವರ್ಷದ ಕ್ಲೈವ್ ಜಾನ್ಸ್ ಇದುವರೆಗೆ 129 ಮಕ್ಕಳ ಜನನಕ್ಕೆ ವೀರ್ಯವನ್ನು ದಾನ ಮಾಡಿದ್ದಾರೆ.
ಜಗತ್ತಿನಲ್ಲಿ ಅನೇಕ ತಂದೆ ತಾಯಿಗಳು ಮಕ್ಕಳಿಲ್ಲದೆ ನೋವು ಅನುಭವಿಸುತ್ತಿದ್ದಾರೆ. ಅಂತವರಿಗೆ ವೀರ್ಯ(Sperm) ವನ್ನು ದಾನ ಮಾಡುವ ಯುಕೆ ಮೂಲದಕ್ಲೈವ್ ಜೋನ್ಸ್ (Clive Jones) ಅವರು ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ. 66 ವರ್ಷದಕ್ಲೈವ್ ಜೋನ್ಸ್ ಇದುವರೆಗೆ 129 ಮಕ್ಕಳ ಜನನಕ್ಕೆ ವೀರ್ಯವನ್ನು ದಾನ ಮಾಡಿದ್ದಾರೆ. ಫೇಸ್ಬುಕ್ ಮೂಲಕ ಸಂಪರ್ಕ ಸಾಧಿಸಿ, ತಮ್ಮದೇ ಆದ ವ್ಯಾನ್ ಒಂದನ್ನು ಇಟ್ಟುಕೊಂಡ ಅವರು ಕಳೆದ 10 ವರ್ಷಗಳಿಂದ ವಿವಿಧ ಪ್ರದೇಶಗಳಿಗೆ ತೆರಳಿ ವೀರ್ಯವನ್ನು ದಾನ ಮಾಡಿದ್ದಾರೆ. ಕ್ಲೈವ್ ಜೋನ್ಸ್ ಅವರ ವೀರ್ಯವನ್ನು ಜಗತ್ತಿನ ಸಮೃದ್ಧ ವೀರ್ಯ ದಾನಿ( world’s most prolific sperm donor) ಎಂದೇ ಹೇಳಿಕೊಂಡಿದ್ದಾರೆ. ಇದೀಗ ಆರೋಗ್ಯ ತಜ್ಞರು ಇವರ ವೀರ್ಯ ದಾನದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕ್ಲೈವ್ ಅವರು ವ್ಯಾನ್ನಲ್ಲಿ ವೀರ್ಯವನ್ನು ಸಂಗ್ರಹಿಸಿ ನೀಡುವುದು ಅಷ್ಟು ಸುರಕ್ಷಿತವಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಈ ಕುರಿತು ನ್ಯೂಯಾರ್ಕ್ ಫೋಸ್ಟ್ ವರದಿ ಮಾಡಿದ್ದು ಕ್ಲೈವ್ ಜೋನ್ಸ್ ಇದುವರೆಗೆ ದಾನ ಮಾಡಿದ ವೀರ್ಯಕ್ಕೆ ಯಾವುದೇ ಹಣವನ್ನು ಪಡೆದುಕೊಂಡಿಲ್ಲ. ಈ ರೀತಿಯ ಕೆಲಸಗಳಿಗೆ ಹಣ ಪಡೆಯುವುದು ಅಪರಾಧ ಎಂದು ಭಾವಿಸುವ ಅವರು ಕೆಲವೊಮ್ಮೆ ದೂರದ ಸ್ಥಳಗಳಿಗೆ ತೆರಳಿ ವೀರ್ಯವನ್ನು ದಾನಮಾಡುವ ಸಂದರ್ಭ ಒದಗಿ ಬಂದಾಗ ಪೆಟ್ರೋಲ್ಅನ್ನು ಪಡೆದಿದ್ದಾರಂತೆ. ಈ ಕುರಿತು ಕ್ಲೈವ್ ಜೋನ್ಸ್ ಮಾತನಾಡಿ, ಈ ವರೆಗೆ ಒಟ್ಟು 138 ಶಿಶುಗಳ ಜನನಕ್ಕೆ ವೀರ್ಯವನ್ನು ನೀಡಿದ್ದೇನೆ. ಅದರಲ್ಲಿ 128 ಶಿಶುಗಳ ಜನನವಾಗಿದೆ. ಇನ್ನೂ 9 ಮಹಿಳೆಯರು ಗರ್ಭಿಣಿಯಾಗಿದ್ದಾರೆ. ವೀರ್ಯ ದಾನವನ್ನು ಮುಂದುವರೆಸುವ ಆಸೆಯಿದ್ದು 150 ಮಕ್ಕಳ ಜನನಕ್ಕೆ ವೀರ್ಯವನ್ನು ದಾನ ಮಾಡಬೇಕು ಎಂದಿದ್ದಾರೆ.
ಮುಂದುವರೆದು ಮಾತನಾಡಿ, ಮಕ್ಕಳನ್ನು ಪಡೆದ ದಂಪತಿ ಫೇಸ್ಬುಕ್ನಲ್ಲಿ ಮಗುವಿನ ಫೋಟೊವನ್ನು ಹಂಚಿಕೊಳ್ಳುತ್ತಾರೆ. ಇದನ್ನು ನೋಡಿ ನಾನು ಕೂಡ ಸಂತಸಗೊಂಡಿದ್ದೇನೆ. 9 ವರ್ಷಗಳ ಹಿಂದೆ ಮೇ ತಿಂಗಳಿನಲ್ಲಿ ಈ ಕೆಲಸ ಆರಂಭಿಸಿದ್ದೇನೆ. ಇಂದು ಹಲವಾರು ಮಂದಿ ನನ್ನನ್ನು ಸಂಪರ್ಕಿಸುತ್ತಾರೆ ಎಂದಿದ್ದಾರೆ.
ಕ್ಲೈವ್ ಜೋನ್ಸ್ ಅವರ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಮಕ್ಕಳಿಲ್ಲದೆ ಎಷ್ಟೋ ಮಂದಿ ಇವರ ಮೂಲಕ ಮಗುವನ್ನು ಪಡೆದು ಸಂತಸವಾಗಿದ್ದಾರೆ. ಆದರೆ ತಜ್ಞ ವೈದ್ಯರು ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ಸರಿಯಾದ ಉಪಕರಣಗಳ ವ್ಯವಸ್ಥೆ ಇಲ್ಲದೆ ವ್ಯಾನ್ಗಳಲ್ಲಿ ವೀರ್ಯವನ್ನು ಸಂಗ್ರಹಿಸಿ ಮಗು ಪಡೆಯವ ದಂಪತಿಗೆ ನೀಡುವುದು ಅಪಾಯಕಾರಿಯಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ;
Viral; ಕೊಲಂಬಿಯಾದಲ್ಲೊಂದು ಉಲ್ಟಾ ಮನೆ ನಿರ್ಮಾಣ; ತಲೆಕೆಳಗಾಗಿರುವ ಮನೆ ನೋಡಲು ಪ್ರವಾಸಿಗರ ದಂಡು
Published On - 11:18 am, Thu, 27 January 22