Viral: ಆಲೂಗಡ್ಡೆ ಪದಾರ್ಥ ಎಸೆದು ಕಿತ್ತಾಡಿಕೊಂಡ ಮಹಿಳಾ ಖೈದಿಗಳು; ಅವರಿಗೆ ನ್ಯಾಯಾಲಯ ವಿಧಿಸಿದ ದಂಡವೆಷ್ಟು ಗೊತ್ತಾ?

ಜರ್ಮನಿಯ ಕಾರಾಗೃಹವೊಂದರಲ್ಲಿ ಮಹಿಳಾ ಖೈದಿಗಳು ಕಿತ್ತಾಡಿಕೊಂಡಿದ್ದಾರೆ. ಅವರಿಗೆ ನ್ಯಾಯಾಲಯ ಭಾರಿ ದಂಡ ವಿಧಿಸಿದೆ. ಈ ಸುದ್ದಿ ಈಗ ಸಖತ್ ವೈರಲ್ ಆಗಿದೆ.

Viral: ಆಲೂಗಡ್ಡೆ ಪದಾರ್ಥ ಎಸೆದು ಕಿತ್ತಾಡಿಕೊಂಡ ಮಹಿಳಾ ಖೈದಿಗಳು; ಅವರಿಗೆ ನ್ಯಾಯಾಲಯ ವಿಧಿಸಿದ ದಂಡವೆಷ್ಟು ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Jan 27, 2022 | 3:04 PM

ಜಗತ್ತಿನಾದ್ಯಂತ ಹಲವು ಅಚ್ಚರಿಯ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಇದೀಗ ಜರ್ಮನ್​ ಜೈಲಿನಲ್ಲಿ ನಡೆದ ಪ್ರಕರಣವೊಂದು ಸಖತ್ ಸುದ್ದಿಯಾಗಿದೆ. ಹೌದು. ಜರ್ಮನಿಯ ಮಹಿಳಾ ಜೈಲಿನಲ್ಲಿ ಇಬ್ಬರು ಮಹಿಳಾ ಖೈದಿಗಳು ಕಿತ್ತಾಡಿಕೊಂಡಿದ್ದಾರೆ. ನಂತರ ಅವರು ಆಲೂಗಡ್ಡೆ ಮ್ಯಾಶ್ ಬಳಸಿ, ತೀವ್ರವಾಗಿ ಕಿತ್ತಾಡಿಕೊಂಡಿದ್ದಾರೆ. ಪ್ರಕರಣ ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಿದ್ದು, ದೊಡ್ಡ ಸುದ್ದಿಯಾಗಿದೆ. ಜರ್ಮನಿಯಲ್ಲಿರುವ ಆಗ್ಸ್‌ಬರ್ಗ್‌ನ ಜೈಲಿನಲ್ಲಿ ಘಟನೆ ನಡೆದಿದೆ. ಇದನ್ನು ಅಲ್ಲಿನ ಸುದ್ದಿಸಂಸ್ಥೆ ಡಿಪಿಎ ವರದಿ ಮಾಡಿದೆ. ಜೈಲಿನಲ್ಲಿರುವ ಈರ್ವರು ಮಹಿಳಾ ಖೈದಿಗಳ ನಡುವೆ ಮೊದಲಿಗೆ ಭಿನ್ನಾಭಿಪ್ರಾಯ ಮೂಡಿದೆ. ವಾಗ್ವಾದ ನಂತರ ಜಗಳವಾಗಿ ಮಾರ್ಪಟ್ಟಿದೆ. ಆಗ ಓರ್ವ ಮಹಿಳೆ ಆಲೂಗಡ್ಡೆಯ ಮ್ಯಾಶ್​​ಅನ್ನು ಇನ್ನೊಬ್ಬರ ಮೇಲೆ ಎಸೆದಿದ್ದಾರೆ. ಅದೇ ಮಾದರಿಯಲ್ಲಿ ಮತ್ತೋರ್ವ ಮಹಿಳಾ ಖೈದಿಯೂ ತಿರುಗೇಟು ನೀಡಿದ್ದಾರೆ. ಇದು ದೊಡ್ಡ ಜಗಳಕ್ಕೆ ತಿರುಗಿದ್ದು, ಘಟನೆಯಲ್ಲಿ ಈರ್ವರೂ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಹೇಳಿದ್ದೇನು? ಇಬ್ಬರು ಮಹಿಳಾ ಖೈದಿಗಳು ಕಿತ್ತಾಡಿಕೊಂಡ ಪ್ರಕರಣವು ನಂತರದಲ್ಲಿ ನ್ಯಾಯಾಲಯದ ಮೆಟ್ಟಿಲನ್ನೇರಿತು. ಜರ್ಮನಿಯ ದಕ್ಷಿಣ ಪಟ್ಟಣವಾದ ಆರ್ಗ್ಸ್​​ಬರ್ಗ್​ನ ನ್ಯಾಯಾಲಯವು ವಿಚಾರಣೆ ನಡೆಸಿ ಕಠಿಣ ಆದೇಶ ನೀಡಿದೆ. ಜಗಳದಲ್ಲಿ ಭಾಗಿಯಾದ ಈರ್ವರು ಮಹಿಳೆಯರಲ್ಲಿ ಒಬ್ಬರಿಗೆ 2,700 ಯೂರೋ ದಂಡ ವಿಧಿಸಿದೆ ಅರ್ಥಾತ್ ಭಾರತೀಯ ಕರೆನ್ಸಿಯಲ್ಲಿ ಸುಮಾರು 2.27 ಲಕ್ಷ ರೂಗಳು.

ಮತ್ತೋರ್ವ ಮಹಿಳೆಗೆ 1,800 ಯೂರೋ ದಂಡ ವಿಧಿಸಲಾಗಿದೆ. ಅರ್ಥಾತ್ ಭಾರತೀಯ ಕರೆನ್ಸಿಯಲ್ಲಿ ಸುಮಾರು 1.51 ಲಕ್ಷ ರೂಗಳು. ಒಂದು ವೇಳೆ ಈರ್ವರು ದಂಡ ಪಾವತಿಸಲು ವಿಫಲರಾದರೆ ಕ್ರಮವಾಗಿ 180 ದಿನಗಳು ಅಥವಾ 120 ದಿನಗಳನ್ನು ಜೈಲಿನಲ್ಲಿ ಕಳೆಯಬೇಕು ಎಂದು ಆದೇಶ ಹೊರಡಿಸಲಾಗಿದೆ.

ಕಳೆದ ತಿಂಗಳು ವರದಿಯಾಗಿತ್ತು ಇಂಥದ್ದೇ ಮತ್ತೊಂದು ಗಲಾಟೆಯ ಪ್ರಕರಣ:

ಜರ್ಮನಿಯ ಟುರುಂಗಿಯಾದಲ್ಲಿ ಕಳೆದ ತಿಂಗಳು ಇಂಥದ್ದೇ ಒಂದು ಗಲಾಟೆಯ ಪ್ರಕರಣ ವರದಿಯಾಗಿತ್ತು. ಅದರಲ್ಲಿ 51 ವರ್ಷದ ಮಹಿಳೆಯೋರ್ವರು 27 ವರ್ಷದ ಯುವತಿಯೋರ್ವರಿಗೆ ಶ್ವಾನದ ವಿಚಾರದಲ್ಲಿ ಗಲಾಟೆ ಮಾಡುತ್ತಾ ಕಚ್ಚಿದ್ದರು. ಈ ಪ್ರಕರಣವೂ ದೊಡ್ಡ ಸುದ್ದಿಯಾಗಿತ್ತು. 27 ವರ್ಷದ ಯುವತಿ ಮಹಿಳೆಯೋರ್ವರು ತನ್ನ ನಾಯಿಗೆ ಹೊಡೆಯುವುದನ್ನು ಗಮನಿಸಿದ್ದರು. ಇದನ್ನು ಪ್ರಶ್ನಿಸಿದ ನಂತರ ಈರ್ವರ ನಡುವೆ ಗಲಾಟೆ ಆರಂಭವಾಗಿತ್ತು.

ಈರ್ವರ ನಡುವಿನ ಗಲಾಟೆಯಲ್ಲಿ ಹಿರಿಯ ಮಹಿಳೆ ಯುವತಿಗೆ ಕಚ್ಚಿ, ಗಾಯಗೊಳಿಸಿದ್ದರು. ನಂತರ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು ಈ ಕುರಿತು ಉಲ್ಲೇಖಿಸುತ್ತಾ, ಘಟನೆಯ ವೇಳೆ ಶ್ವಾನಗಳು ಕುಳಿತು ಇಬ್ಬರು ಮಹಿಳೆಯರನ್ನು ನೋಡುತ್ತಿದ್ದವು. ಅವು ಯಾರಿಗೂ ಕಚ್ಚಿಲ್ಲ ಎಂದು ತಿಳಿಸಿದ್ದರು.

ಇದನ್ನೂ ಓದಿ:

ಉತ್ಕೃಷ್ಟ ಭೋಜನ, ರತನ್ ಟಾಟಾ ಅವರಿಂದ ವಿಶೇಷ ಸಂದೇಶ: ಹೊಸ ಏರ್ ಇಂಡಿಯಾ ಪ್ರಯಾಣಿಕರಿಗೆ ಏನೇನು ನೀಡಲಿದೆ?

Sundar Pichai: ಚಿತ್ರ ನಿರ್ಮಾಪಕರಿಂದ ದೂರು: ಗೂಗಲ್ ಸಿಇಒ ಸುಂದರ್ ಪಿಚೈ ವಿರುದ್ಧ ಎಫ್‌ಐಆರ್ ದಾಖಲು