Viral Post; ಮಗಳ ತಲೆಯ ಮೇಲಿನ ಹೊಲಿಗೆಯ ಆಕಾರದಲ್ಲಿ ಹೇರ್ಕಟ್ ಮಾಡಿಸಿಕೊಂಡ ತಂದೆ
ಪುಟ್ಟ ಮಗಳು ಮೆದುಳು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಕಾರಣ ತಲೆಯ ಮೇಲೆ ಹೊಲಿಗೆ ಹಾಕಿದ್ದರು. ಅದೇ ರೀತಿ ತಂದೆಯೂ ಹೇರ್ ಕಟ್ ಮಾಡಿಸಿಕೊಂಡು ಮಗಳಿಗೆ ಮುಜುಗರ ಉಂಟಾಗಬಾರದು ಎಂಬ ಪ್ರಯತ್ನ ಮಾಡಿದ್ದಾರೆ.
ತಂದೆ (Father) ಮಗಳ(Daughter) ಬಾಂಧವ್ಯ ಎಂದಿಗೂ ಪದಗಳಿಗೂ ನಿಲುಕದ್ದು. ಜಗತ್ತಿನಲ್ಲಿ ಕಲ್ಮಶವಿಲ್ಲದ ಅನುಬಂಧ. ಮಗಳ ಸಂತೋಷಕ್ಕಾಗಿ, ಆಕೆಯ ಒಳಿತಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ಜೀವ. ಯಾವ ಕೆಲಸಕ್ಕೂ ಹಿಂಜರಿಯದೆ ಮಗಳಿಗಾಗಿ ಸರ್ವಸ್ವವನ್ನೂ ಮುಡಿಪಿಡುವ ವ್ಯಕ್ತಿ ಎಂದರೆ ಅದು ತಂದೆ ಮಾತ್ರ. ಅದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ತಂದೆ ಮಗಳ ಅನುಬಂಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಟ್ಟ ಮಗಳು ಮೆದುಳು ಶಸ್ತ್ರ ಚಿಕಿತ್ಸೆ ( Brain Surgery) ಮಾಡಿಸಿಕೊಂಡ ಕಾರಣ ತಲೆಯ ಮೇಲೆ ಹೊಲಿಗೆ ಹಾಕಿದ್ದರು. ಅದೇ ರೀತಿ ತಂದೆಯೂ ಹೇರ್ ಕಟ್ ಮಾಡಿಸಿಕೊಂಡು ಮಗಳಿಗೆ ಮುಜುಗರ ಉಂಟಾಗಬಾರದು ಎಂಬ ಪ್ರಯತ್ನ ಮಾಡಿದ್ದಾರೆ. ಇದರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
The little baby had brain surgery and her dad did the same to his own hair! Made me cry! ❤️pic.twitter.com/S5VDhK8HPn
— Figen (@TheFigen) January 25, 2022
Figen ಎನ್ನುವ ಟ್ವಿಟರ್ ಬಳಕೆದಾರರು ತಂದೆ ಮಗಳ ಪೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಪುಟ್ಟ ಬಾಲಕಿಯ ತಲೆಯ ಮೇಲೆ ಶಸ್ತ್ರ ಚಿಕಿತ್ಸೆ ಮಾಡಿದ ಮೇಲೆ ಹೊಲಿಗೆ ಹಾಕಿರುವುದನ್ನು ಕಾಣಬಹುದು. ಅದೇ ರೀತಿ ಆಕೆಯ ತಂದೆ ಕೂಡ ಮಗಳ ತಲೆಗೆ ಹೊಲಿಗೆ ಹಾಕಿದ ರೀತಿಯಲ್ಲಿಯೇ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ಬಳಿಕ 7 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಸಾವಿರಾರು ರೀ ಶೇರ್ ಕೂಡ ಆಗಿದೆ. ಫೋಟೋ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂದೆ ಮಗಳ ಬಾಂಧವ್ಯ ಎಲ್ಲದಕ್ಕಿಂತ ದೊಡ್ಡದು ಎಂದು ಕಾಮೆಂಟ್ ಮಾಡಿದ್ದಾರೆ. ಪುಟ್ಟ ಮಗು ಆರೋಗ್ಯ ಸಮಸ್ಯೆಯಿಂದ ಬೇಗ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ;
ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರೀ ಅನಾಹುತ
Published On - 9:49 am, Thu, 27 January 22