‘ಮಾಸಿಕ ದಿನಗಳ ರಕ್ತವನ್ನು ಆರೋಗ್ಯ ವೃದ್ಧಿಗೆ ಸೇವಿಸುತ್ತೇನೆ, ಫೇಸ್​ ಮಾಸ್ಕ್​ ಆಗಿಯೂ ಬಳಸುತ್ತೇನೆ: ಸಂಚಲನ ಸೃಷ್ಟಿಸಿದ ಸ್ಪ್ಯಾನಿಷ್​ ಯುವತಿಯ ಹೇಳಿಕೆ

'ಮಾಸಿಕ ದಿನಗಳ ರಕ್ತವನ್ನು ಆರೋಗ್ಯ ವೃದ್ಧಿಗೆ ಸೇವಿಸುತ್ತೇನೆ, ಫೇಸ್​ ಮಾಸ್ಕ್​ ಆಗಿಯೂ ಬಳಸುತ್ತೇನೆ: ಸಂಚಲನ ಸೃಷ್ಟಿಸಿದ ಸ್ಪ್ಯಾನಿಷ್​ ಯುವತಿಯ ಹೇಳಿಕೆ
ಸ್ಪ್ಯಾನಿಷ್​ ಮಹಿಳೆ

ಸ್ಪ್ಯಾನಿಷ್​ನ ಯುವತಿಯೊಬ್ಬಳು ಮಾಸಿಕ ದಿನಗಳ ಬಗ್ಗೆ ನೀಡಿರುವ ಹೇಳಿಕೆ ಜಗತ್ತಿನಾದ್ಯಂತ ಜನರನ್ನು ಬೆಚ್ಚಿ ಬೀಳಿಸಿದೆ. ಅಲ್ಲದೆ ಜನ ಅಸಹ್ಯಪಡುತ್ತಿದ್ದಾರೆ.

TV9kannada Web Team

| Edited By: Pavitra Bhat Jigalemane

Jan 26, 2022 | 4:46 PM

ಸಮಾಜದಲ್ಲಿ ಹೆಣ್ಣುಮಕ್ಕಳು ಮತ್ತು ಅವರ ಮಾಸಿಕ ದಿನಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ. ಹೀಗಿದ್ದರೂ ಸ್ಪ್ಯಾನಿಷ್ (Spanish) ​ನ ಯುವತಿಯೊಬ್ಬಳು ಮಾಸಿಕ ದಿನಗಳ (Periods) ಬಗ್ಗೆ ನೀಡಿರುವ ಹೇಳಿಕೆ ಜಗತ್ತಿನಾದ್ಯಂತ ಜನರನ್ನು ಬೆಚ್ಚಿ ಬೀಳಿಸಿದೆ. ಅಲ್ಲದೆ ಜನ ಅಸಹ್ಯಪಡುತ್ತಿದ್ದಾರೆ. ಹೌದು. ಈಕೆಯ ಹೆಸರು ಜಾಸ್ಮಿನಾ ಎಲಿಸಾ ಕಾರ್ಟರ್​ ( Jasmine Alicia Carter). ಈಕೆ 30 ವರ್ಷದ ಯುವತಿ. ಇವಳು ಮಾಸಿಕ ದಿನಗಳಲ್ಲಿ ಬರುವ ರಕ್ತವನ್ನು ದೇಹದಲ್ಲಿ ಪೋಷಕಾಂಶಗಳನ್ನು ಹೆಚ್ಚಿಸಿಕೊಳ್ಳು ಕುಡಿಯುತ್ತಾಳಂತೆ. ಜತೆಗೆ ಮುಖದ ಸೌಂದರ್ಯವರ್ಧನೆಗೆ ಫೇಸ್​ ಮಾಸ್ಕ್​ ರೀತಿ ಬಳಸುತ್ತಾಳಂತೆ. ಅಷ್ಟೇ ಅಲ್ಲದೆ ಮಾಸಿಕ ದಿನಗಳ ರಕ್ತವನ್ನು ಬಳಸಿ ಪಿರಿಯಡ್​​ ಪೇಂಟಿಂಗ್ಸ್​ (period paintings) ಎಂದು ಅದೇ ರಕ್ತದಲ್ಲಿ ಚಿತ್ರವನ್ನೂ ಬಿಡಿಸಿದ್ದಾಳೆ. ಈಕೆಯ ಈ ಹೇಳಿಕೆ ಈಗ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ. ಸದ್ಯ ನೆಟ್ಟಿಗರು ಈಕೆಯನ್ನು ನೋಡಿ ಅಸಹ್ಯ ವ್ಯಕ್ತಡಿಸಿದ್ದಾರೆ. 

ಈ ಕುರಿತು ನ್ಯೂಯಾರ್ಕ್​ ಪೋಸ್ಟ್​ ವರದಿ ಉಲ್ಲೇಖಿಸಿ ಇಂಡಿಯಾ.ಕಾಂ ವರದಿ ಮಾಡಿದೆ. ಈಕೆ  ಮಹಿಳೆಯರ ಋತುಚಕ್ರದ ಕುರಿತು ಮಾಹಿತಿ ನೀಡುವ ತರಬೇತುದಾರಳೂ ಆಗಿದ್ದು, ಒಂದು ಮಗುವಿನ ತಾಯಿಯೂ ಹೌದು. ಈ ಕುರಿತು ಜಾಸ್ಮಿನಾ ಮಹಿಳೆಯರ ವೆಜಿನಾದಿಂದಲೇ ನಾವು ಇಲ್ಲಿರಲು ಸಾಧ್ಯವಾಗಿದೆ.  ಅದರಲ್ಲಿ ರಕ್ತದ ಪಾತ್ರವೂ ಸಾಕಷ್ಟಿದೆ. ಪುರಾತನ ಕಾಲದಿಂದಲೂ ಮಾಸಿಕ ದಿನಗಳ ಬಗೆಗೆ ಮುಚ್ಚಿಡುವ ಪ್ರವೃತ್ತಿಯನ್ನು ಬೆಳೆಸಲಾಗಿದೆ. ಮಹಿಳೆಯರು ಬಳಸುವ ಪ್ಯಾಡ್​ಗಳಲ್ಲಿ ಸಾಕಷ್ಟು ಪ್ರಮಾಣದ ರಾಸಾಯನಿಕಗಳಿರುತ್ತವೆ. ಅದರಿಂದ ಮಹಿಳೆಯರಿಗೆ ಹಾನಿಯೇ ಹೆಚ್ಚು ಎಂದು ಹೇಳಿದ್ದಾಳೆ.

ಜಾಸ್ಮಿನ್​ ಹೇಳಿಕೆಯ ಪ್ರಕಾರ ಮಾಸಿಕ ದಿನಗಳ ರಕ್ತವು ಹೆಚ್ಚು ಕಬ್ಬಿಣಾಂಶ ಮತ್ತು ಪೋಷಕಾಂಶಗಳನ್ನು ಹೊಂದಿರುತ್ತದೆ. ಮಾಸಿಕ ದಿನಗಳ ರಕ್ತ ಸಂಗ್ರಹಣೆಯ ಬಗ್ಗೆ ಹೇಳುವ ಜಾಸ್ಮಿನ್​, ಮೆನ್ಸ್ಟುವಲ್​ ಕಪ್​ ಮೂಲಕ ರಕ್ತವನ್ನು ಶೇಖರಿಸಿ ಸೇವಿಸುತ್ತೇನೆ. ದೇಹಕ್ಕೆ ಎಷ್ಟು ಪೋಷಕಾಂಶಗಳ ಅಗತ್ಯವಿದೆಯೋ ಅಷ್ಟು ಮಾತ್ರ ಸೇವಿಸುತ್ತೇನೆ. ಕೆಲವೊಮ್ಮೆ ಒಂದು ಸಿಪ್​ಗಳಷ್ಟು ಮಾತ್ರ ಸೇವಿಸುತ್ತೇನೆ. ಇನ್ನು ಅದೇ ರಕ್ತವನ್ನು ಮುಖಕ್ಕೆ ಹಚ್ಚುತ್ತೇನೆ. ಇದು ನನಗೆ ನ್ಯಾಚುರಲ್​ ಫೀಲ್​ ಕೊಡುತ್ತದೆ ಎಂದಿದ್ದಾಳೆ. ಸದ್ಯ ಜಾಸ್ಮಿನ್​ ಹೇಳಿಕೆ ಜಗತ್ತಿನಾದ್ಯಂತ ವಿವಾದಕ್ಕೆ ಕಾರಣವಾಗಿದೆ.

ಜಾಸ್ಮಿನ್​ ಎಲಿಸಾ ಕಾರ್ಟರ್ ಹೇಳಿಕೆಯ ಬಗ್ಗೆ ಚರ್ಮಶಾಸ್ತ್ರಜ್ಞರೊಬ್ಬರು ಪೀರಿಯಡ್​ ಬ್ಲಡ್​ ಅನ್ನು ಪೇಸ್​ ಮಾಸ್ಕ್​ ರೀತಿ ಬಳಸುವುದಕ್ಕೆ ಅಥವಾ ಸೇವಿಸಿದರೆ ಪೋಷಕಾಂಶಗಳು ದೊರೆಯುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಹಲವು ಸಿದ್ಧಾಂತದ ಪ್ರಕಾರ  ಮಾಸಿಕ ದಿನಗಳ ರಕ್ತವು ಉರಿಯೂತದ ಲಕ್ಷಣಗಳನ್ನು ಹೊಂದಿದೆ ಎನ್ನಲಾಗುತ್ತದೆ ಎಂದಿದ್ದಾರೆ ಎಂದು ವರದಿಯಾಗಿದೆ.

(ಮೇಲಿನ ವರದಿಯು ಟಿವಿ9 ಡಿಜಿಟಲ್​ನ ವರದಿಯಲ್ಲ. ಇಂಡಿಯಾ.ಕಾಂ ಸುದ್ದಿ ಸಂಸ್ಥೆಯ ಮಾಹಿತಿಯನ್ನು ಆಧರಿಸಿ ವರದಿ ಮಾಡಲಾಗಿದೆ.)

ಇದನ್ನೂ ಓದಿ;

ಗುಜರಿ ವಸ್ತುಗಳಿಂದ ತಯಾರಾದ ವಾಹನ​ ಖರೀದಿಸಿ ಹೊಸ ಬೊಲೆರೋ ಉಡುಗೊರೆಯಾಗಿ ನೀಡಿದ ಆನಂದ್​ ಮಹೀಂದ್ರಾ

Follow us on

Related Stories

Most Read Stories

Click on your DTH Provider to Add TV9 Kannada