ಗುಜರಿ ವಸ್ತುಗಳಿಂದ ತಯಾರಾದ ವಾಹನ​ ಖರೀದಿಸಿ ಹೊಸ ಬೊಲೆರೋ ಉಡುಗೊರೆಯಾಗಿ ನೀಡಿದ ಆನಂದ್​ ಮಹೀಂದ್ರಾ

ಗುಜರಿ ವಸ್ತುಗಳಿಂದ ತಯಾರಾದ ವಾಹನ​ ಖರೀದಿಸಿ ಹೊಸ ಬೊಲೆರೋ ಉಡುಗೊರೆಯಾಗಿ ನೀಡಿದ ಆನಂದ್​ ಮಹೀಂದ್ರಾ
ಕಾರ್​ ಉಡುಗೊರೆಯಾಗಿ ನೀಡುತ್ತಿರುವುದು

ದತ್ತಾತ್ರೆಯ​ ಲೊಹಾರ್​​ ಅವರ ಕುಟುಂಬವನ್ನು ಭೇಟಿಯಾಗಿ, ಹೊಸ ಬೊಲೇರೋ ಕಾರನ್ನು ಉಡುಗೊರೆಯಾಗಿ ನೀಡಿ, ಅವರು ಗುಜರಿ ವಸ್ತುಗಳಿಂದ ತಯಾರಿಸಿದ ಕಾರನ್ನು ಆನಂದ್​ ಮಹೀಂದ್ರಾ ಖರೀದಿ ಮಾಡಿದ್ದಾರೆ. 

TV9kannada Web Team

| Edited By: Pavitra Bhat Jigalemane

Jan 26, 2022 | 3:49 PM

ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಮಗನ ಆಸೆಯನ್ನು ಪೂರೈಸಲು ಗುಜರಿ ವಸ್ತುಗಳಿಂದ  ವಾಹನವನ್ನು ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ಮಹೀಂದ್ರಾ ಸಂಸ್ಥೆಯ ಚೇರ್​ಮನ್​ ಆನಂದ್ ಮಹೀಂದ್ರಾ (Anand Mahindra) ಅವರ ಗಮನ ಸೆಳೆದಿತ್ತು. ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡು, ಅವರು ತಯಾರಿಸಿದ ಕಾರನ್ನು ತಾವು ಖರೀದಿಸಿ ಹೊಸದಾದ ಕಾರನ್ನು ನೀಡುವುದಾಗಿ ಹೇಳಿದ್ದರು. ಅದೇ ಮಾತಿನಂತೆ ನಿನ್ನೆ ದತ್ತಾತ್ರೆಯ​ ಲೊಹಾರ್ (Dattatraya Lohar )​​ ಅವರ ಕುಟುಂಬವನ್ನು ಭೇಟಿಯಾಗಿ, ಹೊಸ ಬೊಲೆರೋ ಕಾರನ್ನು (Bolero Car) ಉಡುಗೊರೆಯಾಗಿ ನೀಡಿ, ಅವರು ಗುಜರಿ ವಸ್ತುಗಳಿಂದ ತಯಾರಿಸಿದ ಕಾರನ್ನು ಆನಂದ್​ ಮಹೀಂದ್ರಾ ಖರೀದಿ ಮಾಡಿದ್ದಾರೆ.

ಈ ಕುರಿತು ಆನಂದ್​ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಿನ್ನೆ ದತ್ತಾತ್ರೆಯ ಲಾಹೋರ್​ ಅವರ ಕುಟುಂಬವನ್ನು ಭೇಟಿಯಾಗಿದ್ದೆ. ಈ ವೇಳೆ ಹೊಸ ಬೊಲೇರೋ ಕಾರನ್ನು ನೀಡಲಾಯಿತು. ಅವರ ಕುಟುಂಬವೂ ಸಂತಸಗೊಂಡಿದೆ ಎಂದಿದ್ದಾರೆ. ಆನಂದ್​ ಮಹೀಂದ್ರಾ ಅವರು ಹಂಚಿಕೊಂಡ ಫೋಟೋಗಳು 29 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ. ಈ ಕುರಿತು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಕೆಲಸ ಎಂದು ಹಲವರು ಕಾಮೆಂಟ್​ ಮಾಡಿದ್ದಾರೆ.

ಮಹೀಂದ್ರಾ ಕಂಪನಿಯ ಸಿಇಒ ಆನಂದ್​ ಮಹೀಂದ್ರಾ ಸಾಮಾಜಿಕ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಜನರ ಕಷ್ಟಗಳಿಗೆ ಮಿಡಿಯುವ ಅವರು ದೇಶದ ದೊಡ್ಡ ಉದ್ಯಮಿಯಾದರೂ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆ. ಜತೆಗೆ ಭಾರತೀಯರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಾರೆ.

ಇದನ್ನೂ ಓದಿ;

ಮೊದಲ ಬಾರಿಗೆ ಸಮೋಸಾ ತಿಂದ ಇಟಾಲಿಯನ್ ವ್ಯಕ್ತಿ; ಆತನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..? ಇಲ್ಲಿದೆ ವೈರಲ್ ವಿಡಿಯೋ

Follow us on

Related Stories

Most Read Stories

Click on your DTH Provider to Add TV9 Kannada