ಬ್ಯಾಂಕ್​ ಸರ್ವರ್​ ಹ್ಯಾಕ್​; 128 ಖಾತೆಗಳಿಗೆ 12 ಕೋಟಿ ರೂ.ಗಳನ್ನು ವರ್ಗಾಯಿಸಿಕೊಂಡ ವಂಚಕರು

ಹೈದ್ರಾಬಾದ್​ನ ಮಹೇಶ್​ ಕೋ ಆಪರೇಟಿವ್​ ಅರ್ಬನ್​ ಬ್ಯಾಂಕ್​ಅನ್ನು ಸೈಬರ್​ ವಂಚಕರು ಹ್ಯಾಕ್​ ಮಾಡಿದ್ದು 12.90 ಕೋಟಿ ರೂಗಳನ್ನು ದೇಶದ ವಿವಿಧ ಬ್ಯಾಂಕ್​ಗಳ 128 ಖಾತೆಗಳಿಗೆ ವರ್ಗಾಯಿಸಿದ ಘಟನೆ ನಡೆದಿದೆ.

ಬ್ಯಾಂಕ್​ ಸರ್ವರ್​ ಹ್ಯಾಕ್​; 128 ಖಾತೆಗಳಿಗೆ 12 ಕೋಟಿ ರೂ.ಗಳನ್ನು ವರ್ಗಾಯಿಸಿಕೊಂಡ ವಂಚಕರು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Digi Tech Desk

Updated on:Jan 26, 2022 | 2:23 PM

ಹೈದ್ರಾಬಾದ್​ನ ಮಹೇಶ್​ ಕೋ ಆಪರೇಟಿವ್​ ಅರ್ಬನ್​ ಬ್ಯಾಂಕ್ ( Mahesh Co-Operative Urban Bank )​ ಅನ್ನು ಸೈಬರ್​ ವಂಚಕರು ಹ್ಯಾಕ್ (Hack)​ ಮಾಡಿದ್ದು 12.90 ಕೋಟಿ ರೂಗಳನ್ನು ದೇಶದ ವಿವಿಧ ಬ್ಯಾಂಕ್​ಗಳ 128 ಖಾತೆಗಳಿಗೆ ವರ್ಗಾಯಿಸಿದ ಘಟನೆ ನಡೆದಿದೆ. ಒಂದೇ ಬ್ಯಾಂಕ್​ನ ಮೂರು ಖಾತೆಗಳನ್ನು ಹ್ಯಾಕ್​ ಮಾಡಿದ್ದು ಒಂದೇ ದಿನದಲ್ಲಿ 12 ಕೋಟಿಗೂ ಹೆಚ್ಚು ಹಣಗಳನ್ನು ವರ್ಗಾಯಿಸಿಕೊಂಡಿದ್ದಾರೆ. ಈ ಕುರಿತು ಮಹೇಶ್​ ಕೋ ಆಪರೇಟಿವ್​ ಅರ್ಬನ್​ ಬ್ಯಾಂಕ್​ನ ಐಟಿ ಹೆಡ್​ ಕೆ ಬದ್ರಿನಾಥ್​ ಮಾಹಿತಿ ನೀಡಿದ್ದು, ಬ್ಯಾಂಕ್ ಗ್ರಾಹಕರ ಖಾತೆಗಳಲ್ಲಿನ ಹಣ ಸುರಕ್ಷಿತವಾಗಿದೆ. ಹ್ಯಾಕರ್ಸ್​​ಗಳು  ಬ್ಯಾಂಕ್​ನ ರೆಮಿಟನ್ಸ್​​ ಫಂಡ್ (Remittance Funds) (ರವಾನೆ ಮಾಡುವ ಹಣ)ನ ಖಾತೆಯನ್ನು ಹ್ಯಾಕ್​ ಮಾಡಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಗಮನಕ್ಕೆ ಬಂದ ತಕ್ಷಣ ಹಣ ವರ್ಗಾವಣೆಯಾಗುವುದನ್ನು ತಡೆಯಲಾಗಿದೆ. ಆದರೂ 12.90 ಕೋಟಿರೂಗಳನ್ನು ವಂಚಕರು ದೋಚಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಹಣ ದೋಚಿದ್ದರ ಕುರಿತು ಬ್ಯಾಂಕ್​ ಕಡೆಯಿಂದ ಸೈಬರ್​ ಕ್ರೈಮ್​ ಪೊಲೀಸರಿಗೆ ದುರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ  ಸೈಬರ್​ ಕ್ರೈಮ್​ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈಗಾಗಲೇ ಒಂದು ಖಾತೆಯನ್ನು ಪತ್ತೆ ಮಾಡಲಾಗಿದೆ. ಬ್ಯಾಂಕ್​ನಲ್ಲಿ ಎಲ್ಲಾ ರೀತಿಯ ಸುರಕ್ಷತೆಗಳಿವೆ ಆದರೂ ಇದೇ  ಮೊದಲ ಬಾರಿಗೆ ಹ್ಯಾಕ್​ ಆಗಿದೆ.  ಹೇಗೆ ಹ್ಯಾಕ್​ ಮಾಡಲಾಗಿದೆ ಎಂದು ತಿಳಿಯಲು ಟೆಕ್ನಿಕಲ್​ ಎಕ್ಸ್​ಪರ್ಟ್ಸ್​​ಗಳನ್ನು ನೇಮಕ ಮಾಡಲಾಗಿದೆ ಎಂದು ಬ್ಯಾಂಕ್​​ನ ಐಟಿ ತಜ್ಞರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯಾ.ಕಾಂ ವರದಿ ಮಾಡಿದೆ.

ಬ್ಯಾಂಕ್​ಗೆ ಈಗಾಗಲೇ ಸೈಬರ್​ ಕ್ರೈಮ್​ ವಿರುದ್ಧ ಇನ್ಸುರೆನ್ಸ್​ ಮಾಡಿಸಲಾಗಿದೆ. ಸೈಬರ್​ ಕ್ರೈಮ್​ ಅಧಿಕಾರಿಗಳೂ ಕೂಡ ತನಿಖೆಯನ್ನು ಆರಂಭಿಸಿದ್ದಾರೆ. ತನಿಖೆಯ ಬಳಿಕ ಹಣ ವರ್ಗಾವಣೆಯಾಗಿದ್ದರ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದು ಹೇಳಿದ್ದಾರೆ. ​​ಹಣ ದೋಚಿದ ವಂಚಕರು ದೆಹಲಿ, ಬಿಹಾರ್​ ಸೇರಿದಂತೆ ಒಟ್ಟು ದೇಶದ ವಿವಿಧ ರಾಜ್ಯಗಳ 128 ಬ್ಯಾಂಕ್​ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ.

ಇದನ್ನೂ ಓದಿ:

ಬೆಂಗಳೂರಲ್ಲಿ ಮನೆ ಮುಂದಿನ ಹೂಕುಂಡಗಳನ್ನೂ ಕದಿಯುತ್ತಿದ್ದಾರೆ! ಕಾರಿನಲ್ಲಿ ಬಂದ ಯುವತಿಯಿಂದ ಕುಕೃತ್ಯ

Published On - 11:58 am, Wed, 26 January 22

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ