ಉತ್ತರಾಖಂಡ್ನ ಸಾಂಪ್ರದಾಯಿಕ ಟೋಪಿ ಧರಿಸಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ಈ ಬಾರಿ ಉತ್ತರಾಖಂಡ್ನ ಸಾಂಪ್ರದಾಯಿಕ ಟೋಪಿಯನ್ನು ಧರಿಸಿದ್ದಾರೆ. ಟೋಪಿಯ ಮೇಲೆ ಉತ್ತರಾಖಂಡ್ ರಾಜ್ಯದ ಹೂವು ಬ್ರಹ್ಮಕಮಲವನ್ನು ಕಾಣಬಹುದು. ಈ ಹಿಂದೆ ಉತ್ತರಾಖಂಡ್ನ ಕೇದಾರನಾಥಕ್ಕೆ ಭೇಟಿ ನೀಡಿದ ವೇಳೆ ಬ್ರಹ್ಮಕಮಲವನ್ನು ಪೂಜೆಗೆ ಬಳಸಿದ್ದರು
ದೇಶದೆಲ್ಲೆಡೆ 73ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ನಡೆಯುತ್ತಿರುವ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಪ್ರತೀ ಬಾರಿಯಂತೆ ಈ ಬಾರಿಯೂ ವಿಭಿನ್ನ ಉಡುಗೆಯನ್ನು ಧರಿಸಿ ಪ್ರಧಾನಿ ಮೋದಿ ಅವರು ರಾಷ್ಟ್ರದ ಹಬ್ಬದಲ್ಲಿ ಭಾಗವಹಿಸಿದ್ದಾರೆ. ಪ್ರಧಾನಿ ಈ ಬಾರಿ ಉತ್ತರಾಖಂಡ್ನ ಸಾಂಪ್ರದಾಯಿಕ ಟೋಪಿಯನ್ನು ಧರಿಸಿದ್ದಾರೆ. ಟೋಪಿಯ ಮೇಲೆ ಉತ್ತರಾಖಂಡ್ ರಾಜ್ಯದ ಹೂವು ಬ್ರಹ್ಮಕಮಲವನ್ನು ಕಾಣಬಹುದು. ಈ ಹಿಂದೆ ಉತ್ತರಾಖಂಡ್ನ ಕೇದಾರನಾಥಕ್ಕೆ ಭೇಟಿ ನೀಡಿದ ವೇಳೆ ಬ್ರಹ್ಮಕಮಲವನ್ನು ಪೂಜೆಗೆ ಬಳಸಿದ್ದರು. ಇದೀಗ ಗಣರಾಜ್ಯೋತ್ಸವ ಕಾರ್ಯಕ್ರಮದ ಉಡುಗೆಯಲ್ಲಿಯೂ ಬ್ರಹ್ಮಕಮಲ ಹೂವು ಕಾಣಿಸುತ್ತಿದೆ. ಜತೆಗೆ ಪ್ರಧಾನಿ ಮೋದಿ ಇಂದು ಒಂದು ಶಾಲನ್ನು ಧರಿಸಿದ್ದಾರೆ. ಈ ಶಾಲು ಮಣಿಪುರದ್ದಾಗಿದೆ.
आज 73वें गणतंत्र दिवस के अवसर पर माननीय प्रधानमंत्री श्री @narendramodi जी ने ब्रह्मकमल से सुसज्जित देवभूमि उत्तराखण्ड की टोपी धारण कर हमारे राज्य की संस्कृति एवं परम्परा को गौरवान्वित किया है। #RepublicDay pic.twitter.com/9JDnZMHG7B
— Pushkar Singh Dhami (@pushkardhami) January 26, 2022
ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಮಾಸ್ಕ್ ಕಡ್ಡಾಯವಾಗಿದೆ. ಹೀಗಾಗಿ ಪ್ರಧಾನಿ ಕೂಡ ಮಾಸ್ಕ್ ಧರಿಸಿದ್ದಾರೆ. ಇದರಲ್ಲೂ ಒಂದು ವಿಶೇಷತೆ ಇದೆ. ಪ್ರಧಾನಿ ಮೋದಿ ಧರಿಸಿದ ಮಾಸ್ಕ್ ಅನ್ನು ಮಣಿಪುರದ ಹ್ಯಾಂಡಲೂಮ್ ಬಟ್ಟೆ ತಯಾರಿಸುವ ಅಂಗಡಿಯಲ್ಲಿ ತಯಾರಿಸಲಾಗಿದೆ. ಇದನ್ನು ಗುಮ್ಚಾ ಮಾಸ್ಕ್ ಎಂದು ಕರೆಯುತ್ತಾರೆ. ಇದರ ಜತೆಗೆ ಕಪ್ಪು ಮತ್ತು ಬಿಳಿಯ ಬಣ್ಣದ ದಾರದಲ್ಲಿ ನೇಯ್ದ ಉಡುಗೆಯನ್ನು ಧರಿಸಿದ್ದು, ಇದು ಮಣಿಪುರದ ಮೆಟೈ ಬುಡಕಟ್ಟು ಜನಾಂಗ ತಯಾರಿಸುವ ವಿಶೇಷ ಉಡುಗೆಯಾಗಿದೆ. ಈ ಬಾರಿಯ ಪ್ರಧಾನಿ ಮೋದಿ ಉಡುಗೆ ಪಂಚರಾಜ್ಯ ಚುನಾವಣೆಯನ್ನು ಪ್ರತಿನಿಧಿಸುವಂತಿದೆ. ಉತ್ತರಾಖಂಡ್ನ ಸಾಂಪ್ರದಾಯಿಕ ಟೋಪಿಯನ್ನು ಧರಿಸಿದ್ದಕ್ಕಾಗಿ ಉತ್ತರಾಖಂಡ್ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜನತೆಯ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ.
ಕಳೆದ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಮ್ನಗರ್ ಕುಟುಂಬ ನೀಡಿದ ಹಲಾರಿ ಪಾಗ್ ಟೋಪಿಯನ್ನು ಧರಿಸಿದಿದ್ದರು. ಜತಗೆ ಬೂದು ಬಣ್ಣದ ಜಾಕೆಟ್ ಮತ್ತು ಬಳಿಯ ಬಣ್ಣದ ಶಾಲನ್ನು ಧರಿಸಿದ್ದರು.
ಇಂದು ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ, ಬಳಿಕ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಸೈನಿಕರಿಗೆ ನಮನ ಸಲ್ಲಿಸಿದರು.
ಇದನ್ನೂ ಓದಿ: Republic Day 2022: ದೇಶದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಮಂತ್ರಿ ಮೋದಿ, ಗೃಹ ಸಚಿವ ಅಮಿತ್ ಶಾ
Published On - 12:40 pm, Wed, 26 January 22