ಮೊದಲ ಬಾರಿಗೆ ಸಮೋಸಾ ತಿಂದ ಇಟಾಲಿಯನ್ ವ್ಯಕ್ತಿ; ಆತನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..? ಇಲ್ಲಿದೆ ವೈರಲ್ ವಿಡಿಯೋ

ಮೊದಲ ಬಾರಿಗೆ ಸಮೋಸಾ ತಿಂದ ಇಟಾಲಿಯನ್ ವ್ಯಕ್ತಿ; ಆತನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..? ಇಲ್ಲಿದೆ ವೈರಲ್ ವಿಡಿಯೋ
ಸಮೋಸಾ ತಿನ್ನುತ್ತಿರುವ ಇಟಾಲಿಯನ್ ವ್ಯಕ್ತಿ.

ಇಟಾಲಿಯನ್ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಈ ಸಮೋಸಾ ತಿಂಡಿಯನ್ನು ಪ್ರಯತ್ನಿಸುತ್ತಿರುವ ವಿಡಿಯೋ ಒಂದು ಹರದಾಡುತ್ತಿದ್ದು, ಅವರ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jan 26, 2022 | 2:22 PM

ವೈರಲ್ ವಿಡಿಯೋ: ಸಮೋಸಾ ಅತ್ಯಂತ ರುಚಿಕರವಾದ ಮತ್ತು ಪ್ರಸಿದ್ಧವಾದ ಭಾರತೀಯ ತಿಂಡಿಗಳಲ್ಲಿ ಒಂದು. ಬೀದಿ ವ್ಯಾಪಾರಿಗಳಿಂದ ಹಿಡಿದು ದಿನಸಿ ಅಂಗಡಿಗಳವರೆಗೆ, ರೆಸ್ಟೋರೆಂಟ್‌ಗಳಲ್ಲಿನ ಮೆನುವಿನವರೆಗೆ, ರುಚಿಕರವಾದ ಸಮೋಸಾ ಎಲ್ಲೆಡೆ ಲಭ್ಯವಿರುತ್ತದೆ. ಭಾರತೀಯರು ಊಟ ಬಿಡುತ್ತಾರೆಯೇ ಹೊರತು ಸಮೋಸಾ ತಿನ್ನುವುದನ್ನು ಮಾತ್ರ ಬಿಡುವುದಿಲ್ಲ.  ಭಾರತದ ಜನರು ಈ ಬಹುಮುಖ ತಿಂಡಿಯನ್ನು ಮೆಚ್ಚುವುದಷ್ಟೇ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರೀತಿಸುತ್ತಾರೆ ಮತ್ತು ಆನಂದಿಸುತ್ತಾರೆ. ಇದೀಗ, ಇಟಾಲಿಯನ್ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಈ ಸಮೋಸಾ ತಿಂಡಿಯನ್ನು ಪ್ರಯತ್ನಿಸುತ್ತಿರುವ ವಿಡಿಯೋ ಒಂದು ಹರದಾಡುತ್ತಿದ್ದು, ಅವರ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಅಮಿತ್ ಮತ್ತು ಆಂಬ್ರಾ ಎಂಬ ಭಾರತೀಯ-ಇಟಾಲಿಯನ್ ದಂಪತಿಗಳು ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೊದಲ್ಲಿ, ಆಂಬ್ರಾ ಅವರ ತಂದೆಯಾಗಿರುವ ಇಟಾಲಿಯನ್ ವ್ಯಕ್ತಿ, ಸಮೋಸಾದ ಮೇಲೆ ಸ್ವಲ್ಪ ಹಸಿರು ಚಟ್ನಿ ಹಾಕಿಕೊಂಡು ಕಚ್ಚಿ ತಿನ್ನುತ್ತಿರುವುದನ್ನು ಕಾಣಬಹುದು. ಕೊನೆಯಲ್ಲಿ ಅವರು ಸಮೋಸಾ ತಿಂದ ಖುಷಿಗೆ ನೃತ್ಯ ಮಾಡಿದ್ದು, ಭಾರತೀಯ ರುಚಿಕರವಾದ ತಿಂಡಿಯನ್ನು ಅವರು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆಂದು ಕಾಣುತ್ತದೆ.

ಈ ವಿಡಿಯೋ ವೈರಲ್ ಆದಾಗಿನಿಂದ ಅನೇಕ ಭಾರತೀಯರು ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಇಷ್ಟಪಟ್ಟಿದ್ದಾರೆ ಕೂಡ. ನೆಟ್ಟಿಗರಂತ್ತು ಹಾರ್ಟ್​ ಮತ್ತು ಎಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ. ಇತರರು ಇತರೇ ಭಾರತೀಯ ತಿಂಡಿಗಳು ಮತ್ತು ಭಕ್ಷ್ಯಗಳನ್ನು ಪ್ರಯತ್ನಿಸಲು ಸಹ ಹೇಳಿದ್ದಾರೆ. ಮತ್ತೊಬ್ಬರು ಸರ್​ಗೆ ಪಾನಿಪುರಿ, ಪಾವ್​ಭಾಜಿ, ಇಡ್ಲಿ, ಧೋಸಾ, ಖಮನ್ ಧೋಕಲಾ ಇತ್ಯಾದಿ ಭಾರಿತೀಯ ತಿನಿಸುಗಳನ್ನು ಪ್ರಯತ್ನಿಸಲು ಹೇಳಿದ್ದಾರೆ.

ಇದನ್ನೂ ಓದಿ;

Viral Video; ಸರ್ಕಸ್​ ವೇಳೆ 20 ಅಡಿ ಎತ್ತರದಿಂದ ಬಿದ್ದ ಯುವಕ; ಕೂದಲೆಳೆ ಅಂತರದಲ್ಲಿ ಪಾರು

ಬ್ಯಾಂಕ್​ ಸರ್ವರ್​ ಹ್ಯಾಕ್​; 128 ಖಾತೆಗಳಿಗೆ 12 ಕೋಟಿ ರೂ.ಗಳನ್ನು ವರ್ಗಾಯಿಸಿಕೊಂಡ ವಂಚಕರು

Follow us on

Related Stories

Most Read Stories

Click on your DTH Provider to Add TV9 Kannada