Viral Video; ಸರ್ಕಸ್​ ವೇಳೆ 20 ಅಡಿ ಎತ್ತರದಿಂದ ಬಿದ್ದ ಯುವಕ; ಕೂದಲೆಳೆ ಅಂತರದಲ್ಲಿ ಪಾರು

ವೃತ್ತಿ ಪರ ಸ್ಟಂಟ್​ ಮಾಸ್ಟರ್​ ಒಬ್ಬರು  ಸರ್ಕಸ್​ ವೇಳೆ ಆಯತಪ್ಪಿ 20 ಅಡಿ ಎತ್ತರದಿಂದ ಕೆಳಗೆ ಬಿದ್ದ ಘಟನೆ ನಡೆದಿದೆ. ಈ ಮೈ ಜುಮ್​ ಎನ್ನಿಸುವ ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

Viral Video; ಸರ್ಕಸ್​ ವೇಳೆ 20 ಅಡಿ ಎತ್ತರದಿಂದ ಬಿದ್ದ ಯುವಕ; ಕೂದಲೆಳೆ ಅಂತರದಲ್ಲಿ ಪಾರು
Follow us
TV9 Web
| Updated By: Pavitra Bhat Jigalemane

Updated on: Jan 26, 2022 | 10:26 AM

ಮನರಂಜನೆ ಎಲ್ಲರಿಗೂ ಬೇಕು. ಆದರೆ ಕೆಲವು ಮನರಂಜನೆಗಳು ಜೀವಕ್ಕೇ ಕುತ್ತು ತರುತ್ತವೆ. ಅಂತಹವುಗಳಲ್ಲಿ ಸರ್ಕಸ್ (Circus)​ ಅಥವಾ ಸ್ಟಂಟ್ (Stunt)​ ಕೂಡ ಒಂದು. ಜನರನ್ನು ಮನರಂಜಿಸಲು ನಡೆಸುವ ಸರ್ಕಸ್​ಗಳು ಅಪಾಯವನ್ನು ಸೆರಗಿಗೆ ಕಟ್ಟಿಕೊಂಡು ಮಾಡುವ ಸಾಹಸವಾಗಿದೆ. ಎಷ್ಟೇ ತರಬೇತಿ ಪಡೆದಿದ್ದರೂ ಕೂಡ ಕೆಲವೊಮ್ಮೆ ಸ್ಟಂಟ್​ಗಳು ಅಪಾಯವನ್ನು ತಂದೊಡ್ಡುತ್ತವೆ. ಅಂತಹದ್ದೇ ಒಂದು ಘಟನೆ ಜರ್ಮನಿ (Geramany) ಯಲ್ಲಿ ನಡೆದಿದೆ. ವೃತ್ತಿ ಪರ ಸ್ಟಂಟ್​ ಮಾಸ್ಟರ್​ ಒಬ್ಬರು  ಸರ್ಕಸ್​ ವೇಳೆ ಆಯತಪ್ಪಿ 20 ಅಡಿ ಎತ್ತರದಿಂದ ಕೆಳಗೆ ಬಿದ್ದ ಘಟನೆ ನಡೆದಿದೆ. ಈ ಮೈ ಜುಮ್​ ಎನ್ನಿಸುವ ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಜರ್ಮನಿಯ ಡ್ಯೂಸ್ಬರ್ಗ್ನಲ್ಲಿ ನಡೆಯುತ್ತಿದ್ದ ಸರ್ಕಸ್​ನಲ್ಲಿ ವೃತ್ತಿಪರ ಸ್ಕೇಟರ್​ ಲುಕಾಸ್ಜ್ ಮಾಲೆವ್ಸ್ಕಿ ಸ್ಟಂಟ್​ ಸ್ಟಂಡ್​ ಮಾಡುವ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಲುಕಾಸ್ಜ್ ಮಾಲೆವ್ಸ್ಕಿ ಹಾರಿ ಹಗ್ಗವನ್ನು ಹಿಡಿಯಬೇಕೆನ್ನುವಷ್ಟರಲ್ಲಿ ಹಗ್ಗ ಕೈಗೆ ಸಿಗದೆ ಮುಂದೆ ಹಾರಿದ್ದಾರೆ. ಇದರಿಂದ ಎದುರು ದಿನ ಸ್ಟೇಜ್​ಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಜತೆಯಲ್ಲಿದ್ದವರು ಬಂದು ಅವರನ್ನು  ಎತ್ತಿದ್ದಾರೆ. ಅದೃಷ್ಟವಶಾತ್​ ಲುಕಾಸ್ಜ್ ಮಾಲೆವ್ಸ್ಕಿ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ ಎಂದು ವರದಿಯಾಗಿದೆ. ಈ ದೃಶ್ಯದ ವಿಡಿಯೋವನ್ನು ಯುಟ್ಯೂಬ್​​ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿ ನೆಟ್ಟಿಗರು ದಿಗಿಲುಗೊಂಡಿದ್ದಾರೆ. ಸದ್ಯ ಯುಟ್ಯೂಬ್​​ನಲ್ಲಿ ಹಂಚಿಕೊಂಡ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

ಇದನ್ನೂ ಓದಿ;

India Republic Day; ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್​ ರಚಿಸಿ ಶುಭ ಕೋರಿದ ಗೂಗಲ್​

Viral video; ಮನೆಯ ಗೋಡೆ ಹತ್ತಿದ ಹೆಬ್ಬಾವು; ಬದುಕಿದೆಯಾ ಬಡಜೀವವೇ ಎಂದುಕೊಂಡ ಬೆಕ್ಕು