India Republic Day; ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್​ ರಚಿಸಿ ಶುಭ ಕೋರಿದ ಗೂಗಲ್​

ಗಣರಾಜ್ಯೋತ್ಸವ ಅಂಗವಾಗಿ ಗೂಗಲ್​ ಕೂಡ ವಿಶೇಷ ಡೂಡಲ್​ ಮೂಲಕ ದೇಶದ ಜನತೆಗೆ ಶುಭ ಕೋರಿದೆ.  ಈ ಬಾರಿಯ ಡುಡಲ್​ನಲ್ಲಿ ಆನೆ, ಒಂಟೆ,ಕುದುರೆ, ನಾಯಿ ಪ್ರಾಣಿಗಳನ್ನು ಕಾಣಬಹುದು.

India Republic Day; ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್​ ರಚಿಸಿ ಶುಭ ಕೋರಿದ ಗೂಗಲ್​
ಗೂಗಲ್​ ಡೂಡಲ್​
Follow us
| Updated By: Pavitra Bhat Jigalemane

Updated on:Jan 26, 2022 | 9:53 AM

ದೇಶದೆಲ್ಲೆಡೆ 73ನೇ ಗಣರಾಜ್ಯೋತ್ಸವ (Republic Day) ಆಚರಿಸಲಾಗುತ್ತಿದೆ. ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದ ಮೇಲೆ ಸ್ವತಂತ್ರ ಸಂವಿಧಾನವನ್ನು ರಚಿಸಿ, ಪ್ರಜಾಪ್ರಭುತ್ವ ದೇಶವಾಗಿ ಮಾಡಿದ ದಿನ ಇಂದು.  ಜನವರಿ 26, 1950ರಲ್ಲಿ ಭಾರತೀಯ ಸಂವಿಧಾನ(Indian Constitution) ಅಧಿಕೃತವಾಗಿ ಜಾರಿಗೆ ಬಂದಿತು.  ಹೀಗಾಗಿ ಈ ದಿನವನ್ನು ಗಣತಂತ್ರ ದಿನ ಎಂದು ಆಚರಿಸಲಾಗುತ್ತದೆ.  ಗಣರಾಜ್ಯೋತ್ಸವ ಅಂಗವಾಗಿ ಗೂಗಲ್​ ಕೂಡ ವಿಶೇಷ ಡೂಡಲ್​ (Google Doodle) ಮೂಲಕ ದೇಶದ ಜನತೆಗೆ ಶುಭ ಕೋರಿದೆ. ಈ ಬಾರಿಯ ಡೂಡಲ್​ನಲ್ಲಿ ಆನೆ, ಒಂಟೆ,ಕುದುರೆ, ನಾಯಿ ಪ್ರಾಣಿಗಳನ್ನು ಕಾಣಬಹುದು. ಜತೆಗೆ ಎರಡು ಪಾರಿವಾಳಗಳು ಹಾರುತ್ತಿವೆ.  ಸಾಕ್ಸೋಫೋನ್​, ತಬಲಾ ಸೇರಿದಂತೆ ಕೇಸರಿ, ಬಿಳಿ, ಹಸಿರಿನಲ್ಲಿ ಗೂಗಲ್​​ ಅಕ್ಷರಗಳನ್ನು ಬರೆಯಲಾಗಿದೆ. ಈ ಮೂಲಕ ವಿಶೇಷವಾಗಿ ಗೂಗಲ್​ ಡೂಡಲ್​ ಅನ್ನು ತಯಾರಿಸಿದೆ.

ಈ ಬಾರಿ ಗಣರಾಜ್ಯೋತ್ಸವಕ್ಕೂ ಕೊರೋನಾ ಕರಿನೆರಳು ಆವರಿಸಿದೆ. ಹೆಚ್ಚು ಜನರು ಸೇರುವಂತಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗೂ ಬ್ರೇಕ್​ ಬಿದ್ದಿದೆ. ಈ ನಡುವೆ ದೆಹಲಿ ರಾಜಪಥನ್​ನಿಂದ ನ್ಯಾಷನಲ್​ ಸ್ಟೇಡಿಯಂವರೆಗೆ ಮೆರವಣಿಗೆ ನಡೆಯಲಿದೆ. ವಿವಿಧ ರಾಜ್ಯಗಳ ಜಾನಪದ ಕಲಾ ಪ್ರದರ್ಶನ ಜತೆಗೆ ಬಾನಂಗಳದಲ್ಲಿ ವಿಮಾನಗಳ ಹಾರಾಟ ನಡೆಯಲಿದೆ.

ಇನ್ನು ಕೊರೋನಾ ಕಾರಣದಿಂದ ದೆಹಲಿಯಲ್ಲೂ ಕಟ್ಟೆಚ್ಚರವಹಿಸಲಾಗಿದೆ. ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಎರಡೂ ಡೋಸ್​ ವ್ಯಾಕ್ಸಿನೇಷನ್​ ಕಡ್ಡಾಯಗೊಳಿಸಲಾಗಿದ್ದು, 15 ವರ್ಷದೊಳಗಿನ ಮಕ್ಕಳಿಗೆ ಪ್ರವೇಷವನ್ನು ನಿಷೇಧಿಸಲಾಗಿದೆ. ಹೀಗಾಗಿ ಕಳೆದ ವರ್ಷದಂತೆ  ಈ ವರ್ಷವೂ ಬಿಗಿ ನಿಯಮಗಳ ಮಧ್ಯೆ ಗಣರಾಜ್ಯೋತ್ಸವ ಆಚರಣೆಯಾಗುತ್ತಿದೆ.

ಡಾ.ಬಿ ಆರ್​ ಅಂಬೇಡ್ಕರ್​ ಅವರ ನೇತೃತ್ವದಲ್ಲಿ ಕರಡು ಸಮಿತಿ ರಚಿಸಿ ಭಾರತದ ಸಂವಿಧಾನ ರಚಿಸಲಾಗಿದೆ. ಭಾರತದ ಸಂವಿಧಾನ ಜಗತ್ತಿನ ಅತಿ ದೊಡ್ಡ ಸಂವಿಧಾನವಾಗಿದೆ. ಈವರೆಗೆ 94 ತಿದ್ದುಪಡಿಗಳನ್ನು  ಭಾರತೀಯ ಸಂವಿಧಾನದಲ್ಲಿ ಮಾಡಲಾಗಿದೆ. ಈ ದಿನ ರಾಷ್ಟ್ರಪತಿಗಳು ದೆಹಲಿಯಲ್ಲಿ ಭಾರತದ ಧ್ವಜವನ್ನು ಹಾರಿಸಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಸೇರಿದಂತೆ ಭಾರತಕ್ಕಾಗಿ ಪ್ರಾಣತೆತ್ತ ಸೈನಿಕರಿಗೂ ನಮನ ಸಲ್ಲಿಸುತ್ತಾರೆ. ಗಣರಾಜ್ಯೋತ್ಸವದ ಅಂಗವಾಗಿ ದೇಶದ ಸಾಧಕರಿಗೆ ದೇಶದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ:

Republic Day 2022: ದೇಶದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಮಂತ್ರಿ ಮೋದಿ, ಗೃಹ ಸಚಿವ ಅಮಿತ್​ ಶಾ

Published On - 9:43 am, Wed, 26 January 22

ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು