ಮಿನ್ನಲ್​ ಮುರಳಿ ಚಿತ್ರದ ಹೀರೋನಂತೆ ರೆಡಿಯಾಗಿ ಪೋಸ್ಟ್​ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿದ ವರ

ಮಿನ್ನಲ್​ ಮುರಳಿ ಚಿತ್ರದ ಹೀರೋನಂತೆ ರೆಡಿಯಾಗಿ ಪೋಸ್ಟ್​ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿದ ವರ
ಫೋಟೋಶೂಟ್​

ಮದುವೆಯ ಬಳಿಕ ಅದೇ ಚಿತ್ರದಲ್ಲಿ ಬಳಸಿದ ಕಾಸ್ಟ್ಯೂಮ್​ನಂತೆ ಉಡುಪು ಧರಿಸಿ ಫೋಸ್ಟ್​ ವೆಡ್ಡಿಂಗ್​ ಫೋಟೋ ಶೂಟ್ ಮಾಡಿಸಿದ್ದಾರೆ. ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

TV9kannada Web Team

| Edited By: Pavitra Bhat Jigalemane

Jan 26, 2022 | 5:37 PM

ಕೆಲವು ದಿನಗಳ ಹಿಂದೆ ಕೇರಳದ ಜೋಡಿಯೊಂದು (Kerala Couple) ಮಲಯಾಳಂನ ಮಿನ್ನಲ್​ ಮುರಳಿ (Minnal Murali) ಸಿನಿಮಾದಿಂದ  ಪ್ರೇರಿತರಾಗಿ ಸಿನಿಮಾದಲ್ಲಿನ ದೃಶ್ಯದಂತೆ ವಿಡಿಯೋ ಮಾಡಿ ಮದುವೆಗೆ ಆಮಂತ್ರಣವನ್ನು ನೀಡಿದ್ದರು. ಇದೀಗ ಆ ಜೋಡಿ ಮದುವೆಯಗಿದ್ದಾರೆ. ಅಲ್ಲದೆ ಇನ್ನೊಂದು ವಿಶೇಷ ವಿಚಾರವೆಂದರೆ ಮದುವೆಯ ಬಳಿಕ ಅದೇ ಚಿತ್ರದಲ್ಲಿ ಬಳಸಿದ ಕಾಸ್ಟ್ಯೂಮ್​ನಂತೆ ಉಡುಪು ಧರಿಸಿ ಫೋಸ್ಟ್​ ವೆಡ್ಡಿಂಗ್​ ಫೋಟೋ ಶೂಟ್ (Post Wedding Photoshoot)​ ಮಾಡಿಸಿದ್ದಾರೆ. ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು ಸಖತ್​ ವೈರಲ್​ ಆಗಿದೆ. 

ಫೋಟೋಶೂಟ್​ ವೇಳೆ ವರ ಸೂಪರ್​ಮ್ಯಾನ್​ನಂತೆ ಡ್ರೆಸ್​ ಧರಿಸಿದ್ದನು. ವಧು ಹಸಿರು ಬಣ್ಣದ ಮದುವೆಯ ಸೀರೆಯಲ್ಲಿ ಕಂಗೊಳಿಸುತ್ತಿದ್ದಳು. ಇವರ ಮದುವೆಯ ನಂತರದ ಪೋಸ್ಟ್ ವೆಡ್ಡಿಂಗ್​ ಶೂಟ್​ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ವಧು ವರರು ಮಿನ್ನಲ್​ ಮುರಳಿ ಚಿತ್ರದ ಕಾಸ್ಟ್ಯೂಮ್​ ಧರಿಸಿ ಹಾರವನ್ನು ಬದಲಾಯಿಸಿಕೊಳ್ಳುತ್ತಾರೆ. ಹಸಿರು ಬಯಲಿನಲ್ಲಿ ನಿಂತು ಹಾರವನ್ನು ಬದಲಾಯಿಸಿಕೊಳ್ಳವ ವಿಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ವಿಡಿಯೋ ವೈರಲ್​ ಆಗಿದೆ.

ಈ ಕುರಿತು ವರ ರವೀಂದ್ರನ್​ ಮಾತನಾಡಿ, ಕೊರೋನಾದಿಂದ ಹಲವರಿಗೆ ಮದುವೆಗೆ ಆಗಮಿಸಲು ಸಾಧ್ಯವಾಗಲಿಲ್ಲ. ಈ ಫೋಟೋಶೂಟ್​​ಹಲವರ ಕನಸಾಗಿತ್ತು. ಹೀಗಾಗಿ ಮದುವೆ ಮುಗಿದ ತಕ್ಷಣ ಫೋಟೋಗ್ರಾಫರ್​ಗಳ ನಿರ್ದೇಶನದಂತೆ ಫೋಟೋಶೂಟ್​ ಮಾಡಿಸಿಕೊಳ್ಳಲಾಗಿದೆ. ಅಲ್ಲದೆ ನಾವು ಈ ಹಿಂದೆ ಬಿಡುಗಡೆ ಮಾಡಿದ್ದ ಮದುವೆಯ ಆಮಂತ್ರಣದ ವಿಡಿಯೋದ ಬಳಿಕ ಹಲವರಿಗೆ ಕುತೂಹಲ ಮೂಡಿತ್ತು. ಹೀಗಾಗಿ ಅದರ ಮುಂದಿನ ಭಾಗವಾಗಿ ಈ ಫೋಟೋಶೂಟ್​ ಮಾಡಿಸಲಾಗಿದೆ ಎಂದಿದ್ದಾರೆ.

ಮಿನ್ನಲ್​ ಮುರಳಿ ಮಲಯಾಳಂ ಚಿತ್ರವಾಗಿದ್ದು, 2021ರ ಡಿಸೆಂಬರ್​ನಲ್ಲಿ ಬಿಡುಗಡೆಯಾಗಿತ್ತು. ಇದು ಸೂಪರ್ ಹೀರವನ್ನು ಆಧರಿಸಿದ ಚಲನಚಿತ್ರವಾಗಿದ್ದು, ಇದನ್ನು ಬೆಸಿಲ್ ಜೋಸೆಫ್ ನಿರ್ದೇಶಿಸಿದ್ದಾರೆ. ವೀಕೆಂಡ್ ಬ್ಲಾಕ್‌ಬಸ್ಟರ್ಸ್ ಬ್ಯಾನರ್ ಅಡಿಯಲ್ಲಿ ಸೋಫಿಯಾ ಪಾಲ್ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಅರುಣ್ ಅನಿರುಧನ್ ಮತ್ತು ಜಸ್ಟಿನ್ ಮ್ಯಾಥ್ಯೂ ಬರೆದಿದ್ದಾರೆ. ಚಿತ್ರದಲ್ಲಿ ಟೊವಿನೋ ಥಾಮಸ್ ಮತ್ತು ಗುರು ಸೋಮಸುಂದರಂ ನಟಿಸಿದ್ದಾರೆ.

ಇದನ್ನೂ ಓದಿ;

‘ಮಾಸಿಕ ದಿನಗಳ ರಕ್ತವನ್ನು ಆರೋಗ್ಯ ವೃದ್ಧಿಗೆ ಸೇವಿಸುತ್ತೇನೆ, ಫೇಸ್​ ಮಾಸ್ಕ್​ ಆಗಿಯೂ ಬಳಸುತ್ತೇನೆ: ಸಂಚಲನ ಸೃಷ್ಟಿಸಿದ ಸ್ಪ್ಯಾನಿಷ್​ ಯುವತಿಯ ಹೇಳಿಕೆ

Follow us on

Related Stories

Most Read Stories

Click on your DTH Provider to Add TV9 Kannada