Viral Video: ಮಿನ್ನಲ್​ ಮುರಳಿ ಚಿತ್ರದ ಸೀನ್​ನಂತೆ ವಿಡಿಯೋ ಮಾಡಿ ಮದುವೆಗೆ ಆಮಂತ್ರಣ ನೀಡಿದ ಜೋಡಿ

ಇತ್ತೀಚೆಗೆ ಬಿಡುಗಡೆಯಾದ ಮಲಯಾಳಂನ ಮಿನ್ನಲ್​ ಮುರಳಿ ಎನ್ನುವ ಚಿತ್ರದ ಕಾನ್ಸೆಪ್ಟ್​​ ಇಟ್ಟುಕೊಂಡು ಕೇರದ ಜೋಡಿಯೊಂದು ಮದುವೆ ಕರೆಯೋಲೆಯ ವಿಡಿಯೋ ಮಾಡಿದೆ.

Viral Video: ಮಿನ್ನಲ್​ ಮುರಳಿ ಚಿತ್ರದ ಸೀನ್​ನಂತೆ ವಿಡಿಯೋ ಮಾಡಿ ಮದುವೆಗೆ ಆಮಂತ್ರಣ ನೀಡಿದ ಜೋಡಿ
ವಿಡಿಯೋದಿಂದ ಸೆರೆಹಿಡಿದ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Jan 12, 2022 | 2:26 PM

ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ ಒಂದಷ್ಟು ವಿಭಿನ್ನ ಕಲ್ಪನೆಗಳ ಆಗರವಾಗಿರುತ್ತದೆ. ವಧು ವರರನ್ನು ಮಂಟಪಕ್ಕೆ ಕರೆದುಕೊಂಡು ಹೋಗುವುದರಿಂದ ಹಿಡಿದು ಪ್ರೀ ವೆಡ್ಡಿಂಗ್​, ಪೋಸ್ಟ್​ ವೆಡ್ಡಿಂಗ್​ ಫೋಟೋ ಶೂಟ್​ಗಳಲ್ಲೂ ವಿಭಿನ್ನ​ ರೀತಿಯ ಯೋಜನೆಗಳು ನೋಡುಗರಿಗೆ ಕುತೂಹಲವನ್ನು ಮೂಡಿಸುತ್ತದೆ. ಆದರೆ ಇದೀಗ ಮದುವೆ ಕರಯೋಲೆಯಲ್ಲಿಯೂ ಹೊಸ ತರದ ಕಾನ್ಸೆಪ್ಟ್​ಗಳು ನೆಟ್ಟಿಗರನ್ನು ತಿರುಗಿ ನೋಡುವಂತೆ ಮಾಡಿದೆ. ಹೌದು ಇತ್ತೀಚೆಗೆ ಬಿಡುಗಡೆಯಾದ ಮಲಯಾಳಂನ ಮಿನ್ನಲ್​ ಮುರಳಿ  ಚಿತ್ರದ ಕಾನ್ಸೆಪ್ಟ್​​ ಇಟ್ಟುಕೊಂಡು ಕೇರದ ಜೋಡಿಯೊಂದು ಮದುವೆ ಕರೆಯೋಲೆಯ ವಿಡಿಯೋ ಮಾಡಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದ್ದು ಸಖತ್​ ವೈರಲ್​ ಆಗಿದೆ. ಹೊಸ ತರದ ಯೋಚನೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ವಿಡಿಯೋದಲ್ಲಿ ಯುವತಿಯೊಬ್ಬಳ ಪರ್ಸ್​ಅನ್ನು ಕಳ್ಳನೊಬ್ಬ ಕಿತ್ತುಕೊಳ್ಳುತ್ತಾನೆ ಆಗ ಹುಡಗನೊಬ್ಬ ಸುಪರ್​ಮ್ಯಾನ್​ ಆಗಿ ಬರುವ ಮೂಲಕ ಕಳ್ಳನನ್ನು ಹಿಡಿದು ಯುವತಿಯನ್ನು ರಕ್ಷಿಸುತ್ತಾನೆ. ನಂತರ ಯುವತಿಯ ರಕ್ಷಣೆಗಾಗಿ ಆಕೆ ಜತೆಗೆ ಹೊಟೇಲ್​ ಗೂ ತೆರಳುತ್ತಾನೆ, ರಸ್ತೆ ದಾಟುವಾಗಲೂ ನೆರವಾಗುತ್ತಾನೆ. ವಿಡಿಯೋದ ಕೊನೆಯಲ್ಲಿ ಅವರಿಬ್ಬರ ಮುಖವನ್ನು ಕ್ಲೋಸ್​ ಅಪ್​​ ಶಾಟ್​ನಲ್ಲಿ ತೋರಿಸಲಾಗಿದೆ. ವಧುವನ್ನು ವಿಡಿಯೋದಲ್ಲಿ ಯುವತಿಯಾಗಿ, ವರನನ್ನು ಸೂಪರ್​ಮ್ಯಾನ್​ಆಗಿ ತೋರಿಸಲಾಗಿದೆ.

ವಿಡಿಯೋದಲ್ಲಿರುವ ಜೋಡಿ ಅಮಲ್​ ಮತ್ತು ಅಂಜು. ಇವರು ಇದೇ ಜ. 23ರಂದು ವಿವಾಹಾಗುತ್ತಿದ್ದಾರೆ. ಹೀಗಾಗಿ ಮದುವೆಯ ಕರೆಯೋಲೆಯನ್ನು ಮಿನ್ನಲ್​ ಮುರಳಿ ಚಿತ್ರದಿಂದ ಪ್ರೇರಣೆಗೊಂಡು ಚಿತ್ರಿಸಿದ್ದಾರೆ. ಈ ವಿಡಿಯೋವನ್ನು ಜಿಬಿನ್​ ಜಾಯ್​ ಎನ್ನುವವರು ಚಿತ್ರೀಕರಿಸಿದ್ದಾರೆ. ಇನ್ಸ್ಗಾಗ್ರಾಮ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 4.6 ಲಕ್ಷ ವೀಕ್ಷಣೆ ಪಡೆದಿದೆ. ಈ ವಿಡಿಯೋ ನೋಡಿ ಹಾಸ್ಯ ನಟ ಸುನಿಲ್​ ಗ್ರೋವರ್​ ಮೆಚ್ಚಿಕೊಂಡಿದ್ದು ಈವರೆಗೆ ನೋಡಿದ ಮದುವೆ ಆಮಂತ್ರಣದಲ್ಲಿ ನಾನು ನೋಡಿದ  ಉತ್ತಮ ಆಮಂತ್ರಣ ಎಂದಿದ್ದು,  ಹೊಸ ಬದುಕಿಗೆ ಕಾಲಿಡಲು ಸಿದ್ಧವಾಗಿರುವ  ಅಮಲ್​ ಮತ್ತು ಅಂಜುಗೆ ಶುಭ ಕೋರಿದ್ದಾರೆ.

ಮಿನ್ನಲ್​  ಮುರಳಿ ಚಿತ್ರ 2021ರ ಡಿಸೆಂಬರ್​ 16 ರಂದು ಬಿಡುಗಡೆಯಾಗಿದೆ. ಮಲಯಾಳಂನ ಈ ಚಿತ್ರವನ್ನು ಬೆಸಿಲ್ ಜೋಸೆಫ್ ನಿರ್ದೇಶಿಸಿದ್ದು, ವೀಕೆಂಡ್ ಬ್ಲಾಕ್‌ಬಸ್ಟರ್ಸ್ ಬ್ಯಾನರ್ ಅಡಿಯಲ್ಲಿ ಸೋಫಿಯಾ ಪಾಲ್ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಅರುಣ್ ಅನಿರುಧನ್ ಮತ್ತು ಜಸ್ಟಿನ್ ಮ್ಯಾಥ್ಯೂ ಬರೆದಿದ್ದಾರೆ. ಚಿತ್ರದಲ್ಲಿ ಟೊವಿನೋ ಥಾಮಸ್ ಮತ್ತು ಗುರು ಸೋಮಸುಂದರಂ ನಟಿಸಿದ್ದಾರೆ. ನೆಟ್​​ಪ್ಲಿಕ್ಸ್​ನಲ್ಲಿ ಚಿತ್ರ ಟಾಪ್​ 10ನಲ್ಲಿದ್ದು ಸೂಪರ್​ ಹಿರೋವನ್ನು ಕಥಾನಾಯಕಾನಗಿ ತೋರಿಸಲಾಗಿದೆ.

ಇದನ್ನೂ ಓದಿ:

180 ಮಿಲಿಯನ್​ ವರ್ಷಗಳಷ್ಟು ಹಳೆಯ ಸೀ ಡ್ರ್ಯಾಗನ್​ ಪಳಯುಳಿಕೆ ಪತ್ತೆ ಮಾಡಿದ ಬ್ರಿಟನ್​ ವಿಜ್ಞಾನಿಗಳು