180 ಮಿಲಿಯನ್ ವರ್ಷಗಳಷ್ಟು ಹಳೆಯ ಸೀ ಡ್ರ್ಯಾಗನ್ ಪಳಯುಳಿಕೆ ಪತ್ತೆ ಮಾಡಿದ ಬ್ರಿಟನ್ ವಿಜ್ಞಾನಿಗಳು
ಹಲವು ವರ್ಷಗಳ ಬಳಿಕ ಯುಕೆ ವಿಜ್ಞಾನಿಗಳ ತಂಡ 180 ಮಿಲಿಯನ್ ವರ್ಷಗಳಷ್ಟು ಹಳೆಯ ಸಮುದ್ರ ಡ್ರ್ಯಾಗಮ್ನ ಪಳಯುಳಿಕೆಯನ್ನು ಪತ್ತೆಮಾಡಿದ್ದಾರೆ. ಇದು ಬ್ರಿಟಿಷ್ ಪ್ರಾಗ್ಜೀವಶಾಸ್ತ್ರ ಇತಿಹಾದಲ್ಲೇ ಅಪರೂಪದ ಉತ್ಖನನವಾಗಿದೆ.
ಹಲವು ವರ್ಷಗಳ ಬಳಿಕ ಯುಕೆ ವಿಜ್ಞಾನಿಗಳ ತಂಡ 180 ಮಿಲಿಯನ್ ವರ್ಷಗಳಷ್ಟು ಹಳೆಯ ಸಮುದ್ರ ಡ್ರ್ಯಾಗನ್ ಪಳಯುಳಿಕೆಯನ್ನು ಪತ್ತೆಮಾಡಿದ್ದಾರೆ. ಇದು ಬ್ರಿಟಿಷ್ ಪ್ರಾಗ್ಜೀವಶಾಸ್ತ್ರ ಇತಿಹಾದಲ್ಲೇ ಅಪರೂಪದ ಉತ್ಖನನವಾಗಿದೆ. 10 ಮೀ. ಉದ್ದದ ಪಳಯುಳಿಕೆ ಪತ್ತೆಯಾಗಿದ್ದು 2-ಮೀಟರ್ ತಲೆಬುರುಡೆ ಮತ್ತು ಸುತ್ತಮುತ್ತಲಿನ ಜೇಡಿಮಣ್ಣನ್ನು ಹೊಂದಿರುವ ಬ್ಲಾಕ್ ಮಾತ್ರ ಒಂದು ಟನ್ ತೂಕವಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು ಬ್ರಿಟನ್ನಲ್ಲಿ ದೊರಕಿದ ಅತಿ ದೊಡ್ಡ ಪಳಯುಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
2021 ರ ಫೆಬ್ರವರಿಯಲ್ಲಿ ರುಟ್‌ಲ್ಯಾಂಡ್ ವೈಲ್ಡ್‌ಲೈಫ್ ಟ್ರಸ್ಟ್‌ನ ಜೋ ಡೇವಿಸ್ ಯುಕೆಯ ರುಟ್‌ಲ್ಯಾಂಡ್ ವಾಟರ್ ಜಲಾಶಯದಲ್ಲಿ ಆವೃತವಾದ ದ್ವೀಪದ ನೀರನ್ನು ಬರಿದಾಗಿಸುವ ಸಮಯದಲ್ಲಿ ಈ ಅತಿದೊಡ್ಡ ಪಳಯುಳಿಕೆಯನ್ನು ಪತ್ತೆ ಮಾಡಿದ್ದಾರೆ. ಈ ಪ್ರಾಣಿಗಳು ಸುಮಾರು 250 ವರ್ಷಗಳ ಹಿಂದೆ ಕಾಣಸಿಗುತ್ತಿದ್ದವು. ಆದರೆ ಕಳೆದ 90 ವರ್ಷಗಳಿಂದ ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಗೆ ಈ ಸೀ ಡ್ರ್ಯಾಗನ್ಗಳು ಸೇರಿಕೊಂಡಿವೆ. ಡಾಲ್ಫಿನ್ ಶರೀರವನ್ನು ಹೋಲುವ ಈ ಜೀವಿಗಳು 1 ರಿಂದ 25 ಮೀಟರ್ಗಳಷ್ಟು ಉದ್ದ ಗಾತ್ರದಲ್ಲಿ ಬದಲಾವಣೆಯನ್ನು ಹೊಂದುತ್ತವೆ. ಇವುಗಳ ದೊಡ್ಡದಾದ ಹಲ್ಲು ಮತ್ತು ಕಣ್ಣುಗಳ ಕಾರಣದಿಂದ ಸಮುದ್ರ ಡ್ರ್ಯಾಗನ್ ಎಂದು ಕರೆಯುತ್ತಾರೆ.
4/6 To preserve the exact association of the bones for taphonomic studies etc the entire #skeleton was excavated & lifted as a series of strong plaster & hessian field jackets reinforced with wooden frames. Total weight about 3 tonnes! #RutlandSeaDragon #DiggingForBritain pic.twitter.com/nFcsK37HOb
— Nigel Larkin (@MrIchthyosaurus) January 10, 2022
ಇದು ಬ್ರಿಟನ್ನ ಮೊದಲ ಉತ್ಖನನವಲ್ಲ. 1970 ರಲ್ಲಿ ಇದೇ ರೀತಿಯ ಸೀ ಡ್ರ್ಯಾಗನ್ ಪಳಯುಳಿಕೆಯನ್ನು ಪತ್ತೆ ಮಾಡಲಾಗಿತ್ತು. ಆದರೆ ಇಷ್ಟು ದೊಡ್ಡ ಗಾತ್ರದ ಪಳಯುಳಿಕೆ ಇದೇ ಮೊದಲ ಬಾರಿಗೆ ದೊರಕಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಉತ್ಖನನ ಮಾಡಿದ ಸಮುದ್ರ ಡ್ರ್ಯಾಗನ್ ಜತೆಗಿನ ಪೋಟೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
ಮಧ್ಯಪ್ರದೇಶ: ಸಾರ್ವಜನಿಕವಾಗಿ ವ್ಯಕ್ತಿಯ ಬಳಿ ಪ್ಯಾಂಟ್ ಸ್ವಚ್ಛಗೊಳಿಸಿಕೊಂಡ ಮಹಿಳಾ ಪೊಲೀಸ್ ಅಧಿಕಾರಿ
Published On - 1:07 pm, Wed, 12 January 22