ಕಳ್ಳತನಕ್ಕೆ ಹೋದಾಗ ಹಸಿವೆಯಾಗಿ ಕಿಚಡಿ ಮಾಡಿದ ಕಳ್ಳ: ಈಗ ಪೊಲೀಸರ ಅತಿಥಿ

ಕಳ್ಳ ಗುಹಾವಟಿಯ ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಲು ತೆರಳಿದ್ದನು. ಈ ವೇಳೆ ಆತನಿಗೆ ಹಸಿವೆಯಾಗಿದ್ದು, ಅದೇ ಮನೆಯಲ್ಲಿ ಕಚಡಿ ಮಾಡಲು ತಯಾರಿ ನಡೆಸಿದ್ದಾನೆ. ಈ ವೇಳೆ ಯಾರೂ ಇಲ್ಲದ ಮನೆಯ ಒಳಗೆ ಶಬ್ದವನ್ನು ಕೇಳಿ ಅಕ್ಕಪಕ್ಕದವರು ಪೊಲೀಸರಿಗೆ ಕರೆ ಮಾಹಿತಿ ನೀಡಿದ್ದಾರೆ.

ಕಳ್ಳತನಕ್ಕೆ ಹೋದಾಗ ಹಸಿವೆಯಾಗಿ ಕಿಚಡಿ ಮಾಡಿದ ಕಳ್ಳ: ಈಗ ಪೊಲೀಸರ ಅತಿಥಿ
ಸಾಂದರ್ಭಿಕ ಚಿತ್ರ

ಕೆಲವೊಮ್ಮೆ ಮಾಡಬೇಕೆಂದುಕೊಂಡ ಕೆಲಸ ಮಾಡದೆ ಬೇರೆಯಾವುದೋ ಕೆಲಸ ಮಾಡಿದರೆ ಆಗಬಾರದ್ದು ಆಗುತ್ತದೆ ಎನ್ನುತ್ತಾರೆ. ಅದಕ್ಕೆ ಯಾವ ಕೆಲಸ  ಮಾಡಬೇಕಾದರೂ ಅದರ ಮೇಲೆಯೇ ಗಮನವಿಡಬೇಕು ಎನ್ನುವುದು. ಇದೇನಪ್ಪಾ ಹೀಗೆಲ್ಲಾ ಹೇಳ್ತಾರಾ ಅಂದುಕೊಂಡವರು ಇಲ್ಲೊಬ್ಬ ಕಳ್ಳನ ಕತೆ ಕೇಳಿದರೆ ತಿಳಿಯುತ್ತದೆ ಯಾಕೆ ಮಾಡಬೇಕಾದ ಕೆಲಸದ ಕಡೆಗೆ ಗಮನ ಕೊಡಬೇಕು ಎನ್ನುವುದು. ಕಳ್ಳನೊಬ್ಬ ಮನೆಯೊಂದನ್ನು ಕಳ್ಳತನ ಮಾಡಲು ಹೋದಾಗ ಹಸಿವೆಯಾಗಿದೆ ಎಂದು ಕಿಚಡಿ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ನಡೆದಿದರುವುದು ಅಸ್ಸಾಂ ನ ಗುಹಾವಟಿಯಲ್ಲಿ. ಘಟನೆಯ ಕುರಿತು ಅಸ್ಸಾಂ ಪೊಲೀಸರು  ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು ಸಖತ್​ ವೈರಲ್​ ಆಗಿದೆ.

ಪೊಲೀಸರ ಪ್ರಕಾರ, ಕಳ್ಳ ಗುಹಾವಟಿಯ ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಲು ತೆರಳಿದ್ದನು. ಈ ವೇಳೆ ಆತನಿಗೆ ಹಸಿವೆಯಾಗಿದ್ದು, ಅದೇ ಮನೆಯಲ್ಲಿ ಕಿಚಡಿ ಮಾಡಲು ತಯಾರಿ ನಡೆಸಿದ್ದಾನೆ. ಈ ವೇಳೆ ಯಾರೂ ಇಲ್ಲದ ಮನೆಯ ಒಳಗೆ ಶಬ್ದವನ್ನು ಕೇಳಿ ಅಕ್ಕಪಕ್ಕದವರು ಪೊಲೀಸರಿಗೆ ಕರೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಸಿದ ಪೊಲೀಸರು ಕಳ್ಳನನ್ನು  ಬಂಧಿಸಿದ್ದಾರೆ. ಈ ಬಗ್ಗೆ ಅಸ್ಸಾಂ ಪೊಲೀಸರು  ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಕಳ್ಳತನದ ವೇಳೆ ಕಿಚಡಿ ಮಾಡುವುದು ನಿಮ್ಮ ಯೋಗಕ್ಷೇಮಕ್ಕೆ ಒಳ್ಳೆಯದಲ್ಲ ಎಂದು ತಮಾಷೆಯ ಕ್ಯಾಪ್ಷನ್​ ನೀಡಿದ್ದಾರೆ.

ಟ್ವಿಟರ್​ನಲ್ಲಿ ಪೋಸ್ಟ್​ ವೈರಲ್​ ಆಗಿದ್ದು, ಕಳ್ಳ ಬಹುಷಃ ಬೆಳಗ್ಗೆಯಿಂದ ಪ್ಲಾನ್​ ಮಾಡಿ ಊಟವನ್ನೇ ಮರೆತಿದ್ದ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.  ಅಸ್ಸಾಂ ಪೊಲೀಸರ ಹಲವು ಟ್ವೀಟ್​ಗಳು, ವೈರಲ್​ ಪೋಸ್ಟ್​ಗಳು ಈ ಹಿಂದೆ ಸಾಕಷ್ಟು ಬಾರಿ ವೈರಲ್​ ಆಗಿತ್ತು.

ಇದನ್ನೂ ಓದಿ:

Viral Video: ಮಿನ್ನಲ್​ ಮುರಳಿ ಚಿತ್ರದ ಸೀನ್​ನಂತೆ ವಿಡಿಯೋ ಮಾಡಿ ಮದುವೆಗೆ ಆಮಂತ್ರಣ ನೀಡಿದ ಜೋಡಿ

Published On - 3:11 pm, Wed, 12 January 22

Click on your DTH Provider to Add TV9 Kannada